ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ: ಆನಂದ ನ್ಯಾಮಗೌಡ

4 years ago

ಸಾವಳಗಿ: ರೈತರ ಬಹು ದಿನಗಳ ಬೇಡಿಕೆಯಾದ ಭೂಮಿಗಳಿಗೆ ನೀರು ಒದಗಿಸುವ ಕಾರ್ಯ, ರಸ್ತೆ ಡಾಂಬರೀಕರಣ, ಇನ್ನಿತರ ಸಣ್ಣ-ಪುಟ್ಟ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

2021-2022 ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಅಂದಾಜು 950 ಲಕ್ಷಗಳ ವೆಚ್ಚದಲ್ಲಿ ಗೋಠೆಯಿಂದ-ಹೊನವಾಡ ನಮ್ಮ ಜಿಲ್ಲಾ ಮುಖ್ಯ ರಸ್ತೆಯವರೆಗೂ ಡಾಂಬರೀಕರಣ ಕಾಮಗಾರಿಗೆ ಗೋಠೆ ಗ್ರಾಮದಲ್ಲಿ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗೋಠೆ-ಕುಮಠೆ ರಸ್ತೆ, ಗೋಠೆ-ಕೋಟ್ಯಾಳ ರಸ್ತೆ ಮಾಡಲು ಪಾರಂಭ ಮಾಡಿದ್ದಾರೆ. ಸಾವಳಗಿ 220 ವಿದ್ಯುತ ವಿತರಣಾ ಕೇಂದ್ರವಾಗಬೇಕು ಅಂದಾಗ ವಿದ್ಯುತ್ ಸಮಸ್ಯೆ ಸರಿಪಡಿಸಬಹುದು ಎಂದರು.

ಸಿದ್ದರಾಮಯ್ಯ, ಎಂ.ಬಿ.ಪಾಟೀಲ, ದಿ.ಸಿದ್ದು ನ್ಯಾಮಗೌಡ ಪ್ರಯತ್ನದ ಫಲದಿಂದ ತುಬಚಿ-ಬಬಲೇಶ್ವರ ಏತ ನೀರಾವರಿ ಮೂಲಕ ನಮ್ಮ ಭಾಗದಲ್ಲಿರುವ ಅನೇಕ ಹೊಲಗಳಿಗೆ ಕಿನಾಲ ಮೂಲಕ ನೀರು, ಕೆರೆಗಳನ್ನು ತುಂಬಿದ್ದಾರೆ. ಇದರಿಂದ ರೈತರಿಗೆ ಈ ಬಾರಿ ಬೇಸಿಗೆಯಲಿ ನೀರಿನ ಸಮಸ್ಯೆಯಾಗಿಲ್ಲ ಎಂದರು.

ಮೊದಲು ಈ ಭಾಗದಲ್ಲಿನ ರೈತರು ಸಣ್ಣ-ಪುಟ್ಟ ಬೆಳೆ ಬೆಳೆಯುತ್ತಿದ್ದರು, ಸದ್ಯ ಕಬ್ಬು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇನ್ನೂ ಸ್ವಲ್ಪ ದಿನ ಹೋದರೆ ಹೊಳೆ ದಂಡೆ ರೈತರಂತೆ ನೀವು ಸದೃಡವಾಗುತ್ತೀರಿ ಎಂದರು.

ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಗೋಠೆ ಗ್ರಾಮಕ್ಕೆ 110 ಕೆವಿ ಕಛೇರಿ ಮಂಜೂರ ಆಗಿದೆ. ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು, ವಿದ್ಯುತ್ ಸರಬರಾಜು ಕಛೇರಿ ಮಾಡಲು ಜಾಗದ ಸಮಸ್ಯೆ ಇತ್ತು ಖರೀದಿಗಾಗಿ 15 ಲಕ್ಷ ಸ್ವಂತ ದುಡ್ಡಿನಲ್ಲಿ ಜಾಗವನ್ನು ಖರೀದಿ ಮಾಡಲಾಗಿದೆ ಎಂದರು.

ಕ್ಷೇತ್ರದಲ್ಲಿ ನೀವು ಹೇಳಿದಂತೆ ನಾನು ತಿರುಗಾಡಿ ಕೆಲಸ ಮಾಡಿದ್ದೇನೆ, ಇನ್ನು ಸಣ್ಣ-ಪುಟ್ಟ ಕೆಲಸಗಳು ಊಳಿದಿವೆ, ಇನ್ನೊಂದ ಬಾರಿ ಗೆಲ್ಲಿಸುವ ಮೂಲಕ ಮತದಾರರು ಮಾಡಿದ ಕೆಲಸಕ್ಕೆ ಪಗಾರ ಕೋಡಬೇಕು ಎಂದು ಕೈ ಮುಗಿದು ಮತ್ತೊಮ್ಮೆ ಆರಿಸುವಂತೆ ಮನವಿ ಮಾಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಎಪ್ಪತ್ತೈದನೇ ವರ್ಷದ (ಅಮೃತ ಮಹೋತ್ಸವ) ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆ.3 ರಂದು ದಾವಣಗೆರೆಯಲ್ಲಿ ಆಚರಿಸಲಿದ್ದಾರೆ. ಚಿಕ್ಕಪಡಸಲಗಿಯಿಂದ ಜಮಖಂಡಿ ಪಾದಯಾತ್ರೆ ಆ.8 ರಂದು ಮುಂಜಾನೆ 8 ಘಂಟೆಗೆ ಪ್ರಾರಂಭ ಮಾಡಿ ಆಲಗೂರದಲ್ಲಿ ಮದ್ಯಾಹ್ನ ಊಟ ಮಾಡಿ ಜಮಖಂಡಿಯತ್ತ ಪಾದಯಾತ್ರೆ ಮುಂದುವರೆಸುತ್ತೇವೆ. ಜಮಖಂಡಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ 4 ಘಂಟೆಗೆ ಬಸವ ಭವನದಲ್ಲಿ ಸಮಾರೋಪ ಸಮಾರಂಭ ನೆರವೇರಿಸುತ್ತೇವೆ. ಪಾದಯಾತ್ರೆಯಲ್ಲಿ 6 ಸಾವಿರಕ್ಕೂ ಅಧಿಕ ಜನಸಂಖ್ಯೆ ಭಾಗಿಯಾಗಲಿದ್ದಾರೆ ಎಂದರು.

Leave a Reply