ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಹೊಂಬೇಗೌಡ ವಾರ್ಡ್ ನಲ್ಲಿ ಸ್ಲಂ ಸಂಸ್ಥೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆಯನ್ನು ಶಾಸಕ ಉದಯ ಗರುಡಾಚಾರ್, ಗರುಡ ಫೌಂಡೇಷನ್ ಸಂಸ್ಥಾಪಕಿ ಮೇದಿನಿ ಗರುಡಾಚಾರ್, ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್, ಮುಖಂಡರಾದ ಅಜಿತ್, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ಟ್ರಸ್ಟಿ ಅಂಬರೀಶ್ ವಿತರಿಸಿದರು.
ಉದಯ ಗರುಡಾಚಾರ್ ಮಾತನಾಡಿ, ಸಮಾಜಮುಖಿಯಾಗಿ ಜನರ ಸೇವೆ ಮಾಡಿದರೆ ಸಮಾಜದ ಅಭಿವೃದ್ದಿಯಾಗುತ್ತದೆ. ಪ್ರಧಾನಿ ನರೇಂದ್ರಮೋದಿರವರ ಡಿಜಿಟಲ್ ಇಂಡಿಯ ಪ್ರತಿಯೊಬ್ಬರು ತಂತ್ರಜ್ಞಾನದಲ್ಲಿ ಸಾಧನೆ ಮಾಡಬೇಕು ಎಂಬುದು ಆಶಯವಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ತಂತ್ರಜ್ಞಾನ ಹೊಂದಲು ಲ್ಯಾಪ್ ಟಾಪ್ ವಿತರಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದರು.
ಭಾಗ್ಯವತಿ ಅಮರೇಶ್ ಮಾತನಾಡಿ, ಹೊಂಬೇಗೌಡನಗರ ವಾರ್ಡ್ ಬಿ.ಜೆ.ಪಿ.ಮತ್ತು ಸ್ಲಂ ಸಂಸ್ಥೆ ಸಹಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಕ್ಷಣ ಸಹಕಾರಿಯಾಗಿ, ತಂತ್ರಜ್ಞಾನದಲ್ಲಿ ಜ್ನಾನಾಭಿವೃದ್ದಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ಮತ್ತು ಉನ್ನತ ಶಿಕ್ಷಣಕ್ಕೆ ಅನುಕೂಲಕ್ಕೆ ಇದುವರೆಗೆ 50ಕ್ಕೂ ಹೆಚ್ಚು ಲ್ಯಾಪ್ ಟಾಪ್ ಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ಸಾರ್ವಜನಿಕರಿಗೆ ಇ-ಶ್ರಮ್ ಕಾರ್ಡ್, ಲೇಬರ್ ಕಾರ್ಡ್, ಆಯುಷ್ಮಾನ್ ಹೆಲ್ತ್ ಕಾರ್ಡ್ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿರವರು ಹೇಳಿದಂತೆ ದೇಶದ ಸೇವೆಗೆ ಪ್ರಧಾನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ಮಾತು ನಮಗೆ ಸ್ಪೂರ್ತಿ, ಪೇರಣೆಯಿಂದ ಜನಸೇವೆ ಮಾಡುತ್ತಿದ್ದೇವೆ ಎಂದರು.




