ದಾವಣಗೆರೆ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ದಾವಣಗೆರೆಯಲ್ಲಿ ಜನವರಿ 5 ಮತ್ತು 6 ರಂದು ನಡೆದ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆಗಳ ವಿಜೇತರ ವಿವರ ಪ್ರಕಟಿಸಲಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಘೋಷಣೆ ಸ್ಪರ್ಧೆ: ಬೆಂಗಳೂರು ನಗರ ಜಿಲ್ಲೆಯ ಚಂದನ್ ಎಂ ನಾಯ್ಕ ಪ್ರಥಮ ಸ್ಥಾನ, ಚಿಕ್ಕಮಂಗಳೂರಿನ ವರುಣ್ ಡಿ. ಆರ್ಯ ದ್ವಿತೀಯ ಸ್ಥಾನ, ಹಾಸನದ ದೇಶರಾಜ್ ಪರಿಪೂರ್ಣ ತೃತೀಯ ಸ್ಥಾನ.
ಕವನ ರಚನಾ ಸ್ಪರ್ಧೆ; ಬೆಳಗಾವಿಯ ಶಾಂಭವಿ ಕುಶಪ್ಪ ತೇರ್ಲಿ ಪ್ರಥಮ ಸ್ಥಾನ, ಹಾಸನದ ಶೃತಿ ಎಸ್ ರಾಜ್ ದ್ವಿತೀಯ ಸ್ಥಾನ, ಉತ್ತರ ಕನ್ನಡದ ಅಸ್ಪಿಯಾ ಇರ್ಶಾದ್ ಅಹಮದ್ ಶೇಕ್ ತೃತೀಯ ಸ್ಥಾನ.
ಚಿತ್ರಕಲಾ ಸ್ಪರ್ಧೆ: ಗದಗಿನ ವಿನುತ ಎನ್.ಅಕ್ಕಸಾಲಿಗ ಪ್ರಥಮ ಸ್ಥಾನ, ದಾವಣಗೆರೆಯ ಕಾರ್ತಿಕ್ ಆಲೂರು ದ್ವಿತೀಯ ಸ್ಥಾನ, ಉತ್ತರ ಕನ್ನಡದ ಪ್ರಶಾಂತ ಬಾರುಗೌಡ ತೃತೀಯ ಸ್ಥಾನ.
ಕಥಾ ಸ್ಪರ್ಧೆ: ಹಾಸನದ ತೀರ್ಥ ಪೂವಯ್ಯ ಪ್ರಥಮ ಸ್ಥಾನ, ಚಿಕ್ಕಮಂಗಳೂರಿನ ಗಗನ್ ಎಸ್ ದ್ವಿತೀಯ ಸ್ಥಾನ, ರಾಮನಗರದ ರವಿಕುಮಾರ್ ಜಿ.ಕೆ. ತೃತೀಯ ಸ್ಥಾನ.
ವಿಜ್ಞಾನ ವಸ್ತು ಪ್ರದರ್ಶನ: ಬಳ್ಳಾರಿಯ ಹರ್ಷ.ಜೆ.ಎನ್ ಮತ್ತು ತಂಡದವರು ಪ್ರಥಮ ಸ್ಥಾನ, ಮಡಿಕೇರಿ ಶ್ವೇತಾನ್.ಜಿ.ರಾಯ್ ದ್ವಿತೀಯ ಸ್ಥಾನ, ದಾವಣಗೆರೆಯ ಜೀವನ.ವಿ.ಜೆ ತೃತೀಯ ಸ್ಥಾನ.
ಜನಪದ ಗೀತೆ ಸ್ಪರ್ಧೆ: ಮಂಡ್ಯ ಪ್ರಥಮ ಸ್ಥಾನ, ಬಾಗಲಕೋಟೆ ದ್ವಿತೀಯ ಸ್ಥಾನ, ಚಾಮರಾಜನಗರ ತೃತೀಯ ಸ್ಥಾನವನ್ನು ಪಡೆದಿದೆ.
ಜಾನಪದ ನೃತ್ಯ ಸ್ಪರ್ಧೆ: ಮಂಡ್ಯ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಸ್ಥಾನ ಹಾಗೂ ಬಾಗಲಕೋಟೆ ತೃತೀಯ ಸ್ಥಾನ.
ಬಿಐಇಟಿ ಎಸ್.ಎಸ್.ಎಂ. ಸಾಂಸ್ಕೃತಿಕ ಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.






























