ದೆಹಲಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಎಲ್ ಎನ್ ಜೆ ಪಿ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡರು. ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಪೋಷಕರು ಕೂಡ ಲಸಿಕೆ ಹಾಕಿಸಿಕೊಂಡು ರಾಜ್ಯದ ಜನರಲ್ಲಿ ಧೈರ್ಯ ತುಂಬಲು ಮುಂದಾದರು.
कोरोना से छुटकारा पाने के लिए अब वैक्सीन उपलब्ध है, आज मैंने भी अपने माता-पिता के साथ LNJP अस्पताल जाकर वैक्सीन लगवाई। हमें किसी तरह की कोई परेशानी नहीं हुई।
दिल्ली और देश की जनता से मेरी अपील है कि जो लोग भी वैक्सीन लगवाने के पात्र हों आगे आकर वैक्सीन जरूर लगवाएं। pic.twitter.com/Ts3WxwfPOq
— Arvind Kejriwal (@ArvindKejriwal) March 4, 2021
ಲಸಿಕೆ ಪಡೆದ ನಂತರ ಪ್ರತಿಕ್ರಿಯಿಸಿದ ಕೇಜ್ರಿವಾಲ್, ನನ್ನ ತಂದೆತಾಯಿ ಮತ್ತು ನಾನು ಎಲ್ ಎನ್ ಜೆ ಪಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದೇವೆ. ಲಸಿಕೆ ಪಡೆದ ನಂತರ ನಮಗೆ ಯಾವುದೇ ಸಮಸ್ಯೆಯಾಗಿಲ್ಲ. ಎಲ್ಲರು ಆರೋಗ್ಯವಾಗಿದ್ದೇವೆ ಎಂದರು.
ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಅರ್ಹರಾದವರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುವಂತೆ ವಿನಂತಿಸುತ್ತೇನೆ. ಎಲ್ ಎನ್ ಜೆ ಪಿ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ಇದೆ. ಆತಂಕಪಡುವ ಅಗತ್ಯವಿಲ್ಲ. ಜನರ ಮನಸ್ಸಿನಲ್ಲೀಗ ಯಾವುದೇ ಅನುಮಾನಗಳಿಲ್ಲ ಎಂದರು.



