ಮಂಗಳೂರು: ಪೆಟ್ರೋಲ್ ಡೀಸೆಲ್, ಹಾಲು, ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ವಿರುದ್ಧ ಸಿಪಿಐಮ್ ಪಕ್ಷದ ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಸಿಪಿಐಮ್ ಜಿಲ್ಲಾ ಸಮಿತಿ ಸದಸ್ಯರೂ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರಕಾರ ಅಚ್ಛೇ ದಿನ ತರುತ್ತೇವೆ ಭ್ರಮೆ ಹುಟ್ಟಿಸಿ ಮೂರನೇ ಅವಧಿಗೆ ಅಧಿಕಾರಕ್ಕೇರಿದರೂ ದೇಶದ ಆರ್ಥಿಕತೆಯನ್ನು ಸರಿಪಡಿಸಲು ಹೆಣಗಾಡುತ್ತಿದೆ ಎಂದರು.
ಜನತೆಯ ಮೇಲೆ ಬೆಲೆ ಏರಿಕೆ ಮತ್ತು ತೆರಿಗೆಯ ಹೊರೆಯನ್ನು ಹಾಕಿದೆ ಇದರ ಪರಿಣಾಮ ದೇಶದಲ್ಲಿ ಹಸಿವು ಮತ್ತು ನಿರುದ್ಯೋಗದ ಸಮಸ್ಯೆ ಗಂಭೀರ ಹಂತವನ್ನು ತಲುಪಿದೆ. ಉಪ್ಪಿನಿಂದ ಕರ್ಪೂರದವರೆಗೆ ಎಲ್ಲಾ ರೀತಿಯ ಬೆಲೆ ಏರಿಕೆಗಳು ಜನರ ಹಿಂಡಿ ಹಿಪ್ಪೆ ಮಾಡಿದಂತಾಗಿದೆ ಎಂದರು.
ಇನ್ನೊಂದೆಡೆ ರಾಜ್ಯದ ಕಾಂಗ್ರೆಸ್ ಸರಕಾರ ಒಂದು ಕೈಯ್ಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಮತ್ತೊಂದು ಕೈಯಿಂದ ಕಿತ್ತು ಕೊಳ್ಳುತ್ತಿದೆ. ಹಾಲು, ತರಕಾರಿ ಬೆಲೆಗಳು ಗಗನಕ್ಕೇರಿದೆ ಮುದ್ರಾಂಕ ಶುಲ್ಕಗಳು ವಿಪರೀತ ಏರಿಕೆ ಮಾಡಿದೆ ಎಂದರು.
ಬೆಲೆ ಏರಿಕೆಗೆ ಕಾರಣರಾಗಿರುವ ಬಿಜೆಪಿ, ಕಾಂಗ್ರೆಸ್ ಸರಕಾರಗಳು ಪರಸ್ಪರ ರಾಜಕೀಯ ಕೆಸೆರೆರೆಚಾಟದಲ್ಲಿ ತೊಡಗಿದೆಯೇ ಹೊರತು ಏರಿದ ಬೆಲೆ ಇಳಿಕೆ ಮಾಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಸಿಪಿಐಮ್ ಪಕ್ಷದ ಮುಖಂಡರಾದ ಮಾಜಿ ಕಾಪೋರೇಟರ್ ದಯಾನಂದ ಶೆಟ್ಟಿ, ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್ ಮಾತನಾಡಿದರು. ಸಿಪಿಐಮ್ ದಕ್ಷಿಣ ಸಮಿತಿ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರೆ, ಉತ್ತರ ಸಮಿತಿ ಕಾರ್ಯದರ್ಶಿ ಪ್ರಮೀಳಾ ಕೆ ವಂದಿಸಿದರು.
ಪ್ರತಿಭಟನೆಯಲ್ಲಿ ಡಾ ಕೃಷ್ಣಪ್ಪ ಕೊಂಚಾಡಿ, ರವಿಚಂದ್ರ ಕೊಂಚಾಡಿ, ದಿನೇಶ್ ಜಪ್ಪಿನಮೊಗರು, ಉದಯಚಂದ್ರ ರೈ, ಭಾರತಿ ಬೋಳಾರ, ಪಿ ಜಿ ರಫೀಕ್, ಲೋಕೇಶ್ ಎಂ, ದೀಪಕ್ ಬಜಾಲ್, ಜಯಲಕ್ಷ್ಮಿ ಜಪ್ಪಿನಮೊಗರು, ನಾಗೇಶ್ ಬೋಳಾರ, ಜಗದೀಶ್ ಬಜಾಲ್, ಅಶೋಕ್ ಶ್ರೀಯಾನ್, ಶಶಿಧರ ಶಕ್ತಿನಗರ, ಬಿಕೆ ಮಸೂದ್, ಆಶಾ ಬೋಳೂರು, ತಯ್ಯುಬ್ ಬೆಂಗ್ರೆ ಮುಂತಾದವರು ಹಾಜರಿದ್ದರು.



