ಮಂಗಳೂರು: CPIM ಹಿರಿಯ ಸದಸ್ಯ, ಚಿಂತಕ ಸುಂದರ ಸಾಲ್ಯಾನ್(80 ವರ್ಷ) ಇಂದು ಮುಂಜಾನೆ 6 ಗಂಟೆಗೆ ಬಳ್ಳಾಲ್ ಭಾಗ್ ನಲ್ಲಿರುವ ತಮ್ಮ ಸ್ವಗ್ರಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಕಾಲವಶರಾದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕಾರ್ಮಿಕ ಚಳುವಳಿಯ ಪ್ರಮುಖ ಕೇಂದ್ರವಾಗಿದ್ದ ಬೋಳಾರ ಪ್ರದೇಶದ ಅರೆಕೆರೆಬೈಲ್ ನಲ್ಲಿ ಹುಟ್ಟಿ ಬೆಳೆದಿರುವ ಅವರು, ಎಳೆಯ ಪ್ರಾಯದಲ್ಲೇ ತಮ್ಮ ಕಣ್ಣೆದುರು ನಡೆಯುತ್ತಿದ್ದ ನೇಯ್ಗೆ ಹಂಚು ಬೀಡಿ ಕಾರ್ಮಿಕರ ಹೋರಾಟಗಳಲ್ಲಿ ಸ್ವತಃ ಭಾಗವಹಿಸುವ ಮೂಲಕ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾಗಿದ್ದರು. ಬಳಿಕ ತಮ್ಮ ಯೌವ್ವನದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರಾಗಿ ಬೆಳೆದರು.
ದೇಶದ ಹಾಗೂ ವಿಶ್ವದ ರಾಜಕೀಯ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಅಭ್ಯಸಿಸುತ್ತಾ ಆ ಬಗ್ಗೆ ಪಕ್ಷದ ನಿಲುವುಗಳನ್ನು ಇತರ ಸಂಗಾತಿಗಳಿಗೂ ವಿವರಿಸುತ್ತಾ ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಅಪ್ಪಟ ಕಮ್ಯುನಿಸ್ಟ್ ರಾಗಿ ಬೆಳೆದರು.
ಕಳೆದ 6 ದಶಕಗಳಿಂದ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿ ದುಡಿದಿರುವ ಸುಂದರ ಸಾಲ್ಯಾನ್ ಅವರು ದುಡಿಯುವ ವರ್ಗದ ಚಳುವಳಿ ಹೋರಾಟಗಳು ಎಲ್ಲೇ ನಡೆಯಲಿ, ಅಲ್ಲಿ ಭಾಗವಹಿಸುತ್ತಾ ಇತರ ಸಂಗಾತಿಗಳಿಗೆ ಸ್ಪೂರ್ತಿ ತುಂಬುತ್ತಿದ್ದರು.
ಪಕ್ಷದ ರಾಷ್ಟ್ರಿಯ ಸಮ್ಮೇಳನ ಹಾಗೂ ದೆಹಲಿ ಹೋರಾಟಗಳ ವಿಚಾರ ಕಿವಿಗೆ ಬಿದ್ದ ತಕ್ಷಣ ಅದನ್ನು ಕಣ್ಣಾರೆ ನೋಡಬೇಕು, ಅದರಲ್ಲಿ ಭಾಗವಹಿಸಬೇಕೆಂಬ ತಮ್ಮ ಉತ್ಕಟವಾದ ಅಭಿಮಾನದಿಂದ ಇತ್ತೀಚಿನವರೆಗೂ ದೂರದೂರದ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಮೂಲಕ ಕಮ್ಯುನಿಸ್ಟ್ ಪಕ್ಷವನ್ನು ಜನರ ಉಸಿರನ್ನಾಗಿಸಲು ಯತ್ನಿಸುತ್ತಿದ್ದರು.
ವಿದ್ಯಾರ್ಥಿ ಯುವಜನ ಚಳುವಳಿಯ ಬೆಳವಣಿಗೆಗೆ ದೊಡ್ಡ ಮಟ್ಟದ ಸಹಾಯ ಸಹಕಾರವನ್ನು ನೀಡುತ್ತಾ ಬಂದಿದ್ದ ಸುಂದರ ಸಾಲ್ಯಾನ್ ಅವರು ಎಳೆಯ ಪ್ರಾಯದ ಕಾರ್ಯಕರ್ತರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದರು. ಒಟ್ಟಿನಲ್ಲಿ ಕಾಂ.ಸುಂದರ ಸಾಲ್ಯಾನ್ ರವರ ಅಗಲುವಿಕೆಯು ದ.ಕ.ಜಿಲ್ಲೆಯ ಕಮ್ಯುನಿಸ್ಟ್ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು CPIM ದ.ಕ.ಜಿಲ್ಲಾ ಸಮಿತಿಯು ತಮ್ಮ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ತಿಳಿಸಿದೆ.
ಸುಂದರ ಸಾಲ್ಯಾನ್ ರವರು ಪತ್ನಿ ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.




