ಕಲಬುರಗಿ: ಮಧ್ಯಪ್ರದೇಶದಿಂದ ಜಿಲ್ಲೆಗೆ ಕಂಟ್ರಿ ಮೇಡ್ ಪಿಸ್ತೂಲ್ ಸರಬರಾಜು ಆಗಲು ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆಳಂದ ತಾಲೂಕಿನ ಝಳಕಿ ಗ್ರಾಮದ ಸೈಫನ್‌ಸಾಬ್ ಹಾಗೂ ಗುರುಲಿಂಗಪ್ಪ ಬಂಧಿತ ಆರೋಪಿಗಳು, ಬಂದಿತರಿಂದ ಒಂದು ಕಂಟ್ರೀಮೇಡ್ ಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೆಲೆ ಮರೆಸಿಕೊಂಡ ಇನ್ನೂಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಇತ್ತೀಚಿಗೆ ಅಫಜಪುರದಲ್ಲಿ 4 ಪಿಸ್ತೂಲ್ ಹಾಗೂ 18 ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸೈಫನ್ ಸಾಬ್ ಹೆಸರು ಕೇಳಿಬಂದಿತ್ತು. ಪ್ರಕರಣ ಬೆನ್ನಟ್ಟಿದ ಪೊಲೀಸರು ಸೈಫನ್ ಸಾಬ್ ಹಾಗೂ ಇನ್ನೋರ್ವ ಆರೋಪಿ ಗುರುಲಿಂಗಪ್ಪ ನನ್ನು ಬಂಧಿಸಿದ್ದಾರೆ.
ಯಡ್ರಾಮಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಈ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




