ರವಿಶಾಸ್ತ್ರಿಗೆ ಕೊರೊನಾ ಧೃಡ

5 years ago

ಲಂಡನ್: ಇಂಗ್ಲೆಂಡ್​ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಯವರಿಗೆ ಕೊರೊನಾ ಧೃಡಪಟ್ಟಿದೆ. ಆದ್ದರಿಂದ ರವಿಶಾಸ್ತ್ರಿಯವರ ಜೊತೆಗೆ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಹಾಗೂ ಫಿಸಿಯೋ ನಿತಿನ್ ಪಟೇಲ್ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ನಾಲ್ವರೂ ಆರ್‌ ಟಿ ಪಿ ಸಿ ಆರ್ ಪರೀಕ್ಷೆಗೆ ಒಳಗಾಗಿದ್ದಾರೆ. ತಂಡದ ಹೋಟೆಲ್‌ನಲ್ಲೇ ಅವರು ತಂಗುತ್ತಾರೆ. ವೈದ್ಯಕೀಯ ತಂಡ ದೃಢೀಕರಣ ಮಾಡುವವರೆಗೂ ಭಾರತ ತಂಡವನ್ನು ಅವರು ಸಂಪರ್ಕಿಸುವಂತಿಲ್ಲ ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.

Leave a Reply