ಸತ್ತರೆ ಅವರು ಸಾಯ್ತಾರೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು?: ಸುರೇಶ್‌ ಅಂಗಡಿ

6 years ago

ಬೆಳಗಾವಿ: ಸತ್ತರೆ ಅವರು ಸಾಯ್ತಾರೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು? ಹೀಗೆ ಬಾಯಿಗೆ ಬಂದಂತೆ ಮಾತಾಡಿದವರು ದಾರಿಯಲ್ಲಿ ಹೋಗುವ ಯಾರೋ ಜನಸಾಮಾನ್ಯರಲ್ಲ. ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬ ಆರೋಪಕ್ಕೆ  ಹೀಗೆ ಅಮಾನವೀಯವಾಗಿ ಪ್ರತಿಕ್ರಿಯಿಸಿದ್ದಾರೆ.

ಪತ್ರಕರ್ತರು ಕ್ವಾರಂಟೈನ್ ಕೇಂದ್ರಗಳಲ್ಲಿ ಅಂತರ ಕಾಯ್ದುಕೊಳ್ಳದೇ ಇರುವ ಆರೋಪದ ಕುರಿತು ಪ್ರಶ್ನಿಸಿದ ವೇಳೆ ಪ್ರತಿಕ್ರಿಯಿಸಿದ ಅವರು, ಸಂಬಂಧಿಸಿದ ಪ್ರದೇಶದ ಪೊಲೀಸರು ಇರುತ್ತಾರೆ. ಆ ಬಗ್ಗೆ ಗಮನಹರಿಸುತ್ತಾರೆ. ನಿರ್ಲಕ್ಷ್ಯ ವಹಿಸಿದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಹಾರಿಕೆಯ ಉತ್ತರ ನೀಡಿದರು.

ರೋಗಿಗಳು ಸುಧಾರಿಸುತ್ತಿದ್ದಾರೆ. ಅಂತರ ಕಾಯ್ದುಕೊಳ್ಳದೆ ಇದ್ದಲ್ಲಿ ಹೇಗೆ ಸುಧಾರಿಸುತ್ತಿದ್ದರು. ಯಾರು ಅಂತರ ಕಾಯ್ದುಕೊಳ್ಳುತ್ತಿಲ್ಲ ಹೇಳಿ. ಅವರನ್ನು ಇಲ್ಲಿಗೇ ಕರೆಸುತ್ತೇನೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ಕಾಪಾಡಿಕೊಳ್ಳುವುದು ಅವರವರ ಜವಾಬ್ದಾರಿ. ಈಗಾಗಲೇ ಎಲ್ಲರಿಗೂ ಎಚ್ಚರಿಕೆ, ಸಲಹೆ ಕೊಟ್ಟಿದ್ದೇವೆ. ಹೇಳುವುದನ್ನೆಲ್ಲಾ ಸರ್ಕಾರ ಹೇಳಿದೆ. ಜಿಲ್ಲಾಧಿಕಾರಿ, ವೈದ್ಯರೆಲ್ಲರೂ ಹೇಳಿದ್ದಾರೆ. ಇಷ್ಟಾಗಿಯೂ ಅಂತರ ಕಾಯ್ದುಕೊಳ್ಳದೆ ಇದ್ದರೆ ಜವಾಬ್ದಾರಿ ಯಾರು ತಗೊಬೇಕು? ನೀವು, ನಾವು ತೆಗೆದುಕೊಳ್ಳುವುದಕ್ಕೆ ಆಗುತ್ತದೆಯೇ? ಎಂದು ಅವರು ಪ್ರಶ್ನಿಸಿದರು.

Leave a Reply