ಹಲ್ಯಾಳ ಗ್ರಾಮದ ಬನಸೋಡೆ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡರಿಂದ ಸಾಂತ್ವನ

5 years ago

ಕೃಷ್ಣಾನದಿ ದುರಂತದಲ್ಲಿ ಬಲಿಯಾದ ಕುಟುಂಬಸ್ಥರ ಭೇಟಿ ಕೈ ನಾಯಕರು

ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

ಬೆಳಗಾವಿ: ಉಪಮುಖ್ಯಮಂತ್ರಿ, ಸಂಸದರು, ಶಾಸಕರು ಭರವಸೆ ನೀಡಿದಂತೆ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸಲಿ ಎಂದು ಅಥಣಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.

ಕೃಷ್ಣಾ ನದಿ ದುರಂತದಲ್ಲಿ ಹಲ್ಯಾಳ ಗ್ರಾಮದ ಬನಸೋಡೆ ಕುಟುಂಬದ ನಾಲ್ಕು ಸಹೋದರರು ಮೃತಪಟ್ಟ ಹಿನ್ನೆಲೆಯಲ್ಲಿ ಅಥಣಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಹಲ್ಯಾಳ ಗ್ರಾಮಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ, ಸಾಂತ್ವನ ಹೇಳಿದರು.

ದುಃಖತಪ್ತ ಕುಟುಂಬದೊಂದಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಸದಾ ಜೊತೆಗಿದ್ದು, ಅಗತ್ಯಬಿದ್ದರೆ ಹೋರಾಟ ಮಾಡಲಾಗುವುದು ಎಂದು ಗಜಾನನ ಮಂಗಸೂಳಿ ಸಂತ್ರಸ್ತ ಕುಟುಂಬದವರಿಗೆ ಭರವಸೆ ನೀಡಿದರು.

ಇದೇ ವೇಳೆ  ಅಕ್ಕಿ, ಜೋಳ, ಗೋಧಿ, ಬೇಳೆ, ಸಕ್ಕರೆ, ಗಾಣದ ಎಣ್ಣೆ, ಸೇರಿದಂತೆ ಇನ್ನಿತರ ದಿನಬಳಕೆಯ ರೇಷನ್ ಕಿಟ್ ನೀಡಿ ಗಜಾನನ ಮಂಗಸೂಳಿ ನೀಡಿದರು.

ಅಥಣಿ & ತೆಲಸಂಗ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಮಾಜಿ ಜಿಪಂ ಸದಸ್ಯ ಬಸು ಬುಟಾಳಿ, ರಮೇಶ ಸಿಂಧಗಿ, ರಾಜು ಜಮಖಂಡಿಕರ, ಸುನೀತಾ ಐಹೊಳೆ, ಸುನೀಲ ಸಂಕ, ರಾವಸಾಬ ಐಹೊಳೆ, ಅಸ್ಲಂ ನಾಲಬಂದ, ಚಿದಾನಂದ ಮೂಕಣಿ,ಯೂ ಸುಫ್ ಮುಲ್ಲಾ, ಉಮರ ಸಯ್ಯದ್, ಅಜಿತ ಸಿಂಧೆ, ವಿಠ್ಠಲ ಕಾಂಬಳೆ, ಸಂತೋಷ ಕಾಂಬಳೆ, ಸುರೇಶ ಬನಸೋಡೆ, ಅಭಿಷೇಕ ಹುಂಬಿ ಹಾಗೂ ಇನ್ನಿತರರು ಹಾಜರಿದ್ದರು.

Leave a Reply