ಬೆಂಗಳೂರು: ದೇಶದಲ್ಲಿ ದಲಿತರನ್ನು ಕಾಂಗ್ರೆಸ್ ಸಹಿಸಿಕೊಳ್ಳುವುದಿಲ್ಲ, ಒಪ್ಪುವುದಿಲ್ಲ ಎನ್ನುವುದು ಅಂಬೇಡ್ಕರ್ ಅವರ ಕಾಲಘಟ್ಟದಿಂದಲೂ ಸಾಬೀತು ಆಗುತ್ತಲೇ ಇದೆ ಎಂದು ರಾಜ್ಯ ಬಿಜೆಪಿ ಹೇಳಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಕಾರ್ಯಕ್ರಮ ಒಂದರಲ್ಲಿ ತೆಲಂಗಾಣ ಡಿಸಿಎಂ ಮಲ್ಲು ಬಟ್ಟಿ ವಿಕ್ರಾಮಾರ್ಕ ಅವರಿಗೆ ಸಮಾನವಾದ ಕುರ್ಚಿ ಇಲ್ಲದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಿಜೆಪಿ, ತೆಲಂಗಾಣ ಸರ್ಕಾರದ ದಲಿತ ಉಪಮುಖ್ಯಮಂತ್ರಿ ಮಲ್ಲು ಬಟ್ಟಿ ವಿಕ್ರಾಮಾರ್ಕ ಅವರಿಗೆ ಭಾರೀ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದೆ.
ಸಿಎಂ ರೇವಂತ್ ರೆಡ್ಡಿ ಅವರಿಂದ ಹಿಡಿದು ಇಡೀ ಸಚಿವ ಸಂಪುಟವೇ ಕುರ್ಚಿ ಮೇಲೆ ವಿರಾಜಮಾನರಾಗಿ ಕುಳಿತಿದ್ದರೆ, ಡಿಸಿಎಂ ದಲಿತರು ಎನ್ನುವ ಕಾರಣಕ್ಕೆ ಕೆಳಗೆ ಕೂರಿಸಲಾಗಿದೆ. ದೇಶದ ಮೂಲೆ ಮೂಲೆಯಲ್ಲೂ ದಲಿತರನ್ನು ಹತ್ತಿಕ್ಕುವ ಅಜೆಂಡಾವನ್ನು ಕಾಂಗ್ರೆಸ್ ಮುಂದುವರಿಸಿದೆ ಎಂದು ಹೇಳಿದೆ.




