ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು: ಎಸ್.ಸುರೇಶ್ ಕುಮಾರ್

4 years ago

ಬೆಂಗಳೂರು: ದೇಶ ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಮುಖ್ಯ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಲು ಉತ್ತಮ ವಾತವರಣ ಕಲ್ಪಿಸಬೇಕು. ಆದ್ದರಿಂದ ಶಾಲೆಯನ್ನು ನವೀಕರಣ ರೀತಿಯಲ್ಲಿ ಸೌಂದರ್ಯಿಕರಣಗೊಳಿಸಲಾಗಿದೆ. ಉತ್ತಮ ವಾತವರಣವಿದ್ದಾಗ ಮಕ್ಕಳು ಓದಲು, ಕಲಿಯಲು ಸುಗಮವಾಗುತ್ತದೆ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ, ಪ್ರಕಾಶನಗರ ವಾರ್ಡ್ ನಲ್ಲಿರುವ ನವೀಕರಣಗೊಂಡ ಸರಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆ ಮತ್ತು ಶಾಲೆಯ ಮಕ್ಕಳ ವಿದ್ಯಾಭ್ಯಾಸ ಅನುಕೂಲಕ್ಕೆ ಆಕರ್ಷಕ ವರ್ಣಚಿತ್ರ ಕಲಾಕೃತಿ ಉದ್ಘಾಟನೆ ಮಾಡಿ ಮಾತಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಹೆಚ್ಚಾಗಿದೆ. ಮಧ್ಯಮ ಮತ್ತು ಕೆಳ ವರ್ಗದ ಕುಟುಂಬಗಳಿಗೆ ಸರ್ಕಾರಿ ಶಾಲೆಗಳು ವರದಾನವಾಗಿದೆ. ಉಚಿತವಾಗಿ ನೋಟ್ ಪುಸ್ತಕ, ಬಟ್ಟೆ, ಊಟ ನೀಡಲಾಗುತ್ತಿದೆ ಎಂದರು.

ಕಳೆದ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಎಂಟೂವರೆ ಲಕ್ಷ ಮಕ್ಕಳು ಪರೀಕ್ಷೆ ಬರೆದರು. ಆದರೆ ಕೊರೋನದಿಂದ ಯಾವುದೇ ಮಕ್ಕಳಿಗೆ ಅಪಾಯವಾಗಿಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಇನ್ನ 10 ವರ್ಷದಲ್ಲಿ ಜಿಲ್ಲಾಧಿಕಾರಿ, ವಿವಿಧ ಇಲಾಖೆ ಉನ್ನಧಿಕಾರಿಯಾಗಿ ಸೇವೆ ಸಲ್ಲಿಸಿ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಿ ಬದುಕಲಿ ಎಂದರು.

ರಾಜಕಾರಣಿಗಳಿಗಿಂತ ಶಿಕ್ಷಕರಿಗೆ ಸಮಾಜದಲ್ಲಿ ಉತ್ತಮ ಗೌರವವಿದೆ. ಕೌಶಲ್ಯಭಿವೃದ್ದಿ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಳವಡಿಸಲಾಗಿದೆ. ಸಾರ್ವಜನಿಕರಿಗೆ ನಮ್ಮ ಶಾಲೆ ಎಂಬ ಅಭಿಮಾನವಿರಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಅಭಿವೃದ್ದಿ ಸಾಧ್ಯ ಎಂದರು.

ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರವೀಂದ್ರನ್, ರಾಘವೇಂದ್ರರಾವ್, ಶಾಲೆಯ ಎಸ್.ಡಿ.ಎಂ.ಸಿ.ಯ ಲಕ್ಷ್ಮೀನಾರಾಯಣ್, ವಿ.ತ್ಯಾಗರಾಜ್, ಮುಖ್ಯ ಶಿಕ್ಷಕಿ ಜಯಮ್ಮ, ಶಿಕ್ಷಣಾಧಿಕಾರಿ ಉಮಾದೇವಿ, ಟಿ.ಎನ್.ರಮೇಶ್, ಸುದರ್ಶನ್, ಪ್ರವೀಣ್ ಮೊದಲಾದವರು ಹಾಜರಿದ್ದರು.

Leave a Reply