ಚಲುವ ಚಾಮರಾಜನಗರ ಡಾ. ರಾಜಕುಮಾರ್  ಪ್ರಶಸ್ತಿ ಶಿಫಾರಸಿಗೆ ಆಹ್ವಾನ

2 years ago

#Chaluva #Chamarajanagar #Rajkumar #invitation #recommendation #award

ಚಾಮರಾಜನಗರ: ನಗರದ ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆಯಿಂದ ಚಲುವ ಚಾಮರಾಜನಗರ ಡಾ. ರಾಜಕುಮಾರ್  ಪ್ರಶಸ್ತಿಯನ್ನು  ನೀಡಲು ಉದ್ದೇಶಿಸಲಾಗಿದೆ.

ಜಿಲ್ಲೆಯವರಾದ ವರನಟ ಡಾ. ರಾಜಕುಮಾರ್  ಅವರ ತವರಿನ ಕುರುಹಾಗಿ ಈ ಪ್ರಶಸ್ತಿಯನ್ನು ಪ್ರತಿ ವರ್ಷ ಕರ್ನಾಟಕದಲ್ಲಿ ಸಾಧನೆ ಮಾಡಿದ ಸಾಧಕರೊಬ್ಬರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲು ಯೋಜಿಸಲಾಗಿದೆ.

ಈ ಪ್ರಶಸ್ತಿಯನ್ನು ಚಾಮರಾಜನಗರದಲ್ಲಿ ವೈಭವಯುತವಾಗಿ  ನಡೆಯುವ- ಡಾ ರಾಜಕುಮಾರ್ ಕನ್ನಡ ಹಬ್ಬ – ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ  ಅಂಗವಾಗಿ ವಿಚಾರ ಸಂಕಿರಣ, ನಾಟಕ ಪ್ರದರ್ಶನ, ಸಿನೆಮಾ ಪ್ರದರ್ಶನ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡಾ.ರಾಜಕುಮಾರ್ ಚಿತ್ರಗಳ ಸಮೂಹ ಗಾಯನ ನೃತ್ಯ ಸ್ಪರ್ಧೆ, ಡಾ. ರಾಜಕುಮಾರ್ ಕುರಿತು ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.

ರಾಜ್ಯಮಟ್ಟದ ಚಲುವ ಚಾಮರಾಜನಗರ ಡಾ. ರಾಜಕುಮಾರ್  ಮೊದಲ ಪ್ರಶಸ್ತಿಯನ್ನು ನೀಡಲು ಕನ್ನಡ ಚಲನ ಚಿತ್ರರಂಗದ ನಟರೊಬ್ಬರ ಹೆಸರನ್ನು ಶಿಫಾರಸು ಮಾಡಲು ಸಾರ್ವಜನಿಕರನ್ನು ಕೋರಲಾಗಿದೆ.

ಸಾರ್ವಜನಿಕರು ತಮ್ಮ ಸಲಹೆ ಶಿಫಾರಸನ್ನು 9916115263 ಈ ವಾಟ್ಸಪ್ ಸಂಖ್ಯೆಗೆ ತಿಳಿಸಬಹುದು ಎಂದು ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply