87 ವರ್ಷದ ಹಿರಿಯ ಮಹಿಳೆಯಿಂದ ಭರತನಾಟ್ಯ ಪ್ರದರ್ಶನ
ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಣೇಶಮಂದಿರ ವಾರ್ಡ್, ಬನಶಂಕರಿ 2ನೇ ಹಂತದ ಬೃಂದಾವನ ಉದ್ಯಾನವನ ಆವರಣದಲ್ಲಿ ದೇವಗಿರಿ ನಗೆ ಯೋಗಕೂಟ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ದೇವಗಿರಿ ನಗೆ ಯೋಗಕೂಟದ ಮಹಿಳೆಯರಿಂದ ಗೀತೆಗಾಯನ, ಕೋಲಾಟ, ಗಾದೆ ಮಾತುಗಳು, ರಸಪ್ರಶ್ನೆ ಮತ್ತು ಭರತನಾಟ್ಯ, ನಾಟಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದೇವಗಿರಿ ನಗೆ ಯೋಗಕೂಟದಲ್ಲಿ 60 ವರ್ಷ ಮೇಲ್ಪಟ್ಟ ಮಹಿಳೆಯರು ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿರಿಯ ನಾಗರಿಕರು ಜೀವನದ ಸಂತೋಷ, ಹುಮಸ್ಸು ನಿಂದ ಇರಲು ವಯಸ್ಸು ಅಡ್ಡಿಯಿಲ್ಲ ಎಂದು ಪ್ರದರ್ಶನ ಮಾಡಿದರು.

ಇದೇ ವೇಳೆ ಮಾತಾಡಿದ ಬಿಬಿಎಂಪಿ ಮಾಜಿ ಸದಸ್ಯೆ ಲಕ್ಷ್ಮಿ ಉಮೇಶ್, ಮಾತನಾಡಿ ಮಹಿಳೆ ತಾಯಿ, ತಂಗಿ, ಅಕ್ಕ, ಸೊಸೆಯಾಗಿ ಇಡಿ ಕುಟುಂಬ ಮತ್ತು ಸಮಾಜದ ಅಭಿವೃದ್ದಿಗೆ ಶ್ರಮಿಸುವಳು. ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಇರುವ ಕಾರಣದಿಂದ ಮಹಿಳೆಯರಿಗೆ ರಾಜಕೀಯ ರಂಗದಲ್ಲಿ ಉತ್ತಮ ಅವಕಾಶ ಸಿಗುತ್ತಿದೆ ಎಂದರು.

ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಇಂದು ದೇಶದ ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು, ಇಸ್ರೋ ರಾಕೆಟ್ ಉಡಾವಣೆಯಲ್ಲಿ ರೂಪ ಎಂಬ ಮಹಿಳೆ ಪ್ರಮುಖ ಪಾತ್ರವಹಿಸಿದ್ದರು, ಇನ್ಪೋಸಿಸ್ ಫೌಂಡೇಷನ್ ಸುಧಾಮೂರ್ತಿರವರು ರಾಜ್ಯಸಭಾ ಸದಸ್ಯರಾಗಿ ನೇಮಕರಾಗಿದ್ದಾರೆ. ಮಹಿಳೆಯರು ಇಂದು ಪುರುಷರಷ್ಟೆ ಸರಿಸಮಾನವಾಗಿ ಸಾಧನೆ ಮಾಡಿದ್ದಾರೆ ಎಂದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಮಾರ್ಗದರ್ಶನ ಮತ್ತು ಜನರ ಪ್ರೀತಿ, ವಿಶ್ವಾಸ, ಸಹಕಾರದಿಂದ ಗಣೇಶ ಮಂದಿರ ವಾರ್ಡ್ ನಲ್ಲಿ ಬಿಬಿಎಂಪಿ ಸದಸ್ಯೆಯಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿತು ಎಂದರು.






ವಿಶ್ವ ಮಹಿಳಾ ದಿನಾಚರಣೆ ಕ್ರೀಡಾಕೂಟದಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಬಿಜೆಪಿ ಮುಖಂಡರಾದ ಉಮೇಶ್ ಕಬ್ಬಾಳ್, ಶ್ಯಾಮಲ ಶೆಣೈ, ವಿಜಯಲಕ್ಷ್ಮಿ ರಾಜಣ್ಣ, ಪ್ರಭಾ ಅಮರನಾಥ್, ವಿಜಯಲಕ್ಷ್ಮಿ ನಟರಾಜನ್, ಸುರೇಖಾ ಪ್ರಭು ಮೊದಲಾದವರು ಹಾಜರಿದ್ದರು.




