ಖ್ಯಾತ ನಟ ಮುಮ್ಮುಟ್ಟಿ ಮತ್ತು ರಮೇಶ್ ಪಿಶಾರೊಡಿ ಮತ್ತು ಇತರ 300 ಜನರ ವಿರುದ್ಧಕೊರೊನಾ ನಿಯಮ ಉಲ್ಲಂಘನೆ ಆರೋಪದಡಿ ದೂರು ದಾಖಲಿಸಲಾಗಿದೆ ಎಂದು ಕೇರಳ ಪೊಲೀಸರು ಹೇಳಿದ್ದಾರೆ. ಆಗಸ್ಟ್ 3ರಂದು ನಡೆದ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಲೋಕಾರ್ಪಣೆ ಸಮಯದಲ್ಲಿ ನಿಯಮ ಮುರಿದು ಜನಸೇರಿಸಿದ ಆರೋಪ ಇವರ ವಿರುದ್ಧ ಕೇಳಿಬಂದಿದೆ.
ಪೊಲೀಸರ ಹೇಳಿಕೆಯ ಪ್ರಕಾರ, ರೋಬೋಟ್ ನೆರವಿನಿಂದ ಅಂಗಾಂಗ ಬದಲಾವಣೆ ಸೇವೆಯನ್ನು ಲೋಕಾರ್ಪಣೆಗೊಳಿಸುವ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಕೊರೊನಾ ನಿಮಯಗಳನ್ನು ಉಲ್ಲಂಘಿಸಿ 300ಕ್ಕೂ ಹೆಚ್ಚು ಜನ ಸೇರಿದ್ದರು.
ನಟ ಮುಮ್ಮುಟ್ಟಿಯವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಆಸ್ಪತ್ರೆಯ ಎಂಡಿ, ಸಿಇಒ ಮತ್ತು ಇತರರ ವಿರುದ್ಧ ಕೇರಳ ಸಾಂಕ್ರಮಿಕ ರೋಗ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.




