ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ಸಾವು

5 years ago

ರಾಮನಗರ: ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್  ವಿವೇಕ್ (28) ಮೃತಪಟ್ಟಿದ್ದಾರೆ. ಮಾಸ್ತಿಗುಡಿ ನಂತರ ಇಂತಹ ಮತ್ತೊಂದು ಅವಘಡ ರಾಮನಗರ ಜಿಲ್ಲೆಯಲ್ಲೇ ನಡೆದಂತಾಗಿದೆ.

ಅಜಯ್ ರಾವ್, ರಚಿತಾ ರಾಮ್ ಅಭಿಯನದ ಲವ್ ಯೂ ರಚ್ಚು ಸಿನಿಮಾ ರಾಮನಗರ ತಾಲೂಕಿನ ಜೋಗನದೊಡ್ಡಿಯಲ್ಲಿ ಚಿತ್ರೀಕರಣ ನಡೆಯುತಿತ್ತು. ಈ ವೇಳೆ ರೋಪ್​ ಎಳೆಯುವ ಸಮಯದಲ್ಲಿ ಫೈಟರ್​  ವಿವೇಕ್ ಅವರಿಗೆ ವಿದ್ಯುತ್ ತಗುಲಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

 ಮೃತ ವಿವೇಕ್ ತಮಿಳುನಾಡು ಮೂಲದವರು ಎನ್ನಲಾಗಿದ್ದು, ರಾಜರಾಜೇಶ್ವರಿ ನಗರ ಆಸ್ಪತ್ರೆಯಲ್ಲಿ ವಿವೇಕ್ ಮೃತದೇಹವನ್ನು ಇರಿಸಲಾಗಿದೆ.

Leave a Reply