ಇದು “ಜಾಗೃತ ಕರ್ನಾಟಕ” ದ ಕರೆ
“ನಮ್ಮ ಕರ್ನಾಟಕಕ್ಕೆ – ನಮ್ಮ ಮಾದರಿ” ಕಟ್ಟಿಕೊಳ್ಳುವ ಸಲುವಾಗಿ ನೀವೊಂದಿಷ್ಟು ಸಮಯ ನೀಡಬಲ್ಲಿರಾ?
ಎಲ್ಲರೂ ನೆಮ್ಮದಿಯಿಂದ ಬದುಕುವ, ಎಲ್ಲರನ್ನೂ ಸಮಾನವಾಗಿ ಕಾಣುವ, ಎಲ್ಲರಿಗೂ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಮತ್ತು ಉತ್ತಮ ಅವಕಾಶಗಳು ಸಿಗುವ, ರಾಜಕೀಯ ಅಧಿಕಾರವನ್ನು ಮತ್ತು ಸಂಪತ್ತು ಎಲ್ಲರಿಗೂ ಲಭಿಸುವಂತೆ ಆಗುವ ಕರ್ನಾಟಕ ಮಾದರಿ ಕಟ್ಟಲು ನೀವು ಜೊತೆಯಾಗುವಿರಾ?
ಅಭಿವೃದ್ಧಿಯಲ್ಲಿ, ಸಾಮಾಜಿಕ ನ್ಯಾಯದಲ್ಲಿ, ರಾಜಕೀಯ ಅಧಿಕಾರ ಹಂಚಿಕೆಯಲ್ಲಿ, ಶಿಕ್ಷಣದಲ್ಲಿ, ಆರೋಗ್ಯ ಸೇವೆಗಳಲ್ಲಿ, ಆಡಳಿತದಲ್ಲಿ ನಮ್ಮ ಕರ್ನಾಟಕ ನಮ್ಮದೇ ಮಾದರಿಯೊಂದನ್ನು ನಿರ್ಮಾಣ ಮಾಡಲು ಸಾಧ್ಯವೇ?
ಖಂಡಿತಾ ಸಾಧ್ಯ.
ಸಮಗ್ರ ಮುನ್ನೋಟ, ಬದ್ಧತೆ ಮತ್ತು ನಿರಂತರ ಪ್ರಯತ್ನದಿಂದ “ಸಮಸ್ತ ಕರ್ನಾಟಕ (ಅಂದರೆ ಎಲ್ಲಾ ಪ್ರದೇಶಗಳು ಹಾಗೂ ಎಲ್ಲಾ ಸಮುದಾಯಗಳ)” ಕ್ಕೆ ಸಮಗ್ರ ಮಾದರಿ ಕಟ್ಟಲು ಸಾಧ್ಯವಿಲ್ಲವೇ?
ಖಂಡಿತಾ ಸಾಧ್ಯ.
ಬಿಜೆಪಿಯಂತೂ ಇಂತಹ ಜನಪರ ಮಾದರಿ ಕಟ್ಟುವುದಕ್ಕೆ ಯಾವತ್ತಿಗೂ ವಿರುದ್ಧವಾಗಿಯೇ ಇರುವುದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ.
ಕಾಂಗ್ರೆಸ್ ಸಹಾ ನಮ್ಮೆಲ್ಲರ ಒತ್ತಾಸೆ, ಒತ್ತಡ ಇಲ್ಲದಿದ್ದರೆ ಕಟ್ಟುವ ಇಚ್ಛಾಶಕ್ತಿಯನ್ನು ತೋರುವುದಿಲ್ಲ ಎಂಬುದು ಕೂಡ ಸ್ಪಷ್ಟವಾಗಿದೆ.
ಆದರೆ, ಸಾಮಾಜಿಕ ಕಳಕಳಿಯುಳ್ಳ ಮಂದಿ ಒಂದು ಗುಂಪಾಗಿ ಸೃಜನಶೀಲವಾಗಿ ಈ ಒತ್ತಡ, ಒತ್ತಾಸೆ ಹೇರಿ ಒಟ್ಟು ಆಡಳಿತವನ್ನು ” ಕರ್ನಾಟಕ ಮಾದರಿ” ಕಡೆಗೆ ಮುನ್ನಡೆಸಲು ಸಾಧ್ಯ.
ಅಂತಹ ಮಾದರಿಯ ಚಿಂತನೆ ಹಾಗೂ ಪ್ರತಿಪಾದನೆಗಾಗಿ…
ಸಹಕಾರ ಹಾಗೂ ಪ್ರತಿರೋಧದ ರಾಜಕೀಯ ಆಂದೋಲನಕ್ಕಾಗಿ…
ಒಟ್ಟಾರೆಯಾಗಿ ನಿಜವಾದ ” ಕರ್ನಾಟಕ ಮಾದರಿ” ಯನ್ನು ಕಟ್ಟುವುದಕ್ಕಾಗಿ…
“ಜಾಗೃತ ಕರ್ನಾಟಕ” ಈ ನಾಡಿನ ಸಾಮಾಜಿಕ ಕಳಕಳಿ ಹೊಂದಿರುವ ಎಲ್ಲಾ ಕ್ರಿಯಾಶೀಲ ವ್ಯಕ್ತಿಗಳನ್ನು ಆಹ್ವಾನಿಸುತ್ತಿದೆ.
ಬನ್ನಿ, ಜೊತೆಗೂಡಿ.
ಈ ನಾಡು ʼಕರ್ನಾಟಕʼವೆಂಬ ಹೆಸರು ಪಡೆದುಕೊಂಡ 50ನೇ ವರ್ಷದ ಈ ದಿನದಿಂದ ನಮ್ಮ ಪ್ರಯತ್ನ ಆರಂಭಿಸೋಣ.
ಆರಂಭದಿಂದಲೂ ನೀವು ಜೊತೆಗಿರಿ.
ನೀವು ಕೈ ಜೋಡಿಸಲು ಕರೆ ಮಾಡಿ – 8310947739




