ಬೆಂಗಳೂರು ನಗರದ ಒತ್ತಡವನ್ನು ಕಡಿಮೆ ಮಾಡಲು ಉಪನಗರಗಳನ್ನು ನಿರ್ಮಿಸಿ, ಮೆಟ್ರೋ ಸಂಪರ್ಕ ಕಲ್ಪಿಸಿ

2 years ago

#Build #suburb #connect #metro #reduce #pressure #Bengaluru #city #ksnagaraj

ದಿನದಿಂದ ದಿನಕ್ಕೆ ಬೆಂಗಳೂರು ನಗರದ ಜನಸಂಖ್ಯೆಯು ಹೆಚ್ಚಾಗುತ್ತಿದ್ದು, ಕಾರುಗಳು, ದ್ವಿಚಕ್ರ ವಾಹನಗಳು, ಆಟೋ ರಿಕ್ಷಾಗಳು ಇವುಗಳ ಸಂಖ್ಯೆ ಕೋಟಿ ಸಮೀಪದಲ್ಲಿದೆ. ಹೀಗಾಗಿ ಬೆಂಗಳೂರು ನಗರದಲ್ಲಿ ಸಂಚಾರ ನಡೆಸುವುದು ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಪ್ರತೀ ದಿನವೂ ವಾಹನ ಸವಾರರು ನಿಗದಿತವಾದ ಗುರಿಯನ್ನು ತಲುಪಲು ಪಡುವ ಸಾಹಸ ಹೇಳತೀರದು.

ಜೊತೆಗೆ ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರಿನ ಸಂಪರ್ಕ, ಮನೆಗಳ ಒಳಚರಂಡಿ ನೀರಿನ ಹರಿಸುವ ವ್ಯವಸ್ಥೆ, ರಸ್ತೆಗಳ ನಿರ್ಮಾಣ ಇವುಗಳಿಗೆ ಎಷ್ಟು ಕೋಟಿಗಳನ್ನು ಹಾಕಿದರೂ ಸಾಲುತ್ತಿಲ್ಲ.

ಕಸದ ಸಮಸ್ಯೆ ಉಲ್ಬಣವಾಗಿದೆ. ವಾಯುಮಾಲಿನ್ಯ ಮುಂದಿನ ಕೆಲವೇ ದಿನಗಳಲ್ಲಿ ದೆಹಲಿಯನ್ನು ಮೀರಿಸುತ್ತದೆ. ಅಂತರ್ಜಲ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸಕೋಟೆ, ಕನಕಪುರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ, ದೇವನಹಳ್ಳಿ ಮುಂತಾದ ಕಡೆಗಳಲ್ಲಿ ಉಪನಗರಗಳನ್ನು ನಿರ್ಮಿಸಿ ಇವುಗಳಿಗೆ ಮೆಟ್ರೋ ಸಂಪರ್ಕವನ್ನು ಕಲ್ಪಿಸಿಕೊಟ್ಟರೆ ಬೆಂಗಳೂರಿನ ಬೆಳವಣಿಗೆಗೆ ಕಡಿವಾಣ ಹಾಕಬಹುದು.

ಜೊತೆಗೆ ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ಸಂಗ್ರಹಿಸಿ ಶುದ್ಧೀಕರಿಸಿ ಬಳಸುವಂತಹ ತಂತ್ರಗಾರಿಕೆಯನ್ನೂ ಅಳವಡಿಸಿಕೊಳ್ಳಬೇಕು. ಕೈಗಾರಿಕೆಗಳು, ಮಾಹಿತಿ ತಂತ್ರಜ್ಞಾನದ ಸಂಸ್ಥೆಗಳು ಎಲ್ಲವನ್ನು ಮುಂದಿನ ದಿನಗಳಲ್ಲಿ ಉಪನಗರಗಳಲ್ಲಿ ಮಾತ್ರ ಅನುಮತಿಯನ್ನು ನೀಡಬೇಕು.

ಉದ್ಯೋಗದ ಅವಕಾಶದಿಂದ ಬೆಂಗಳೂರಿಗೆ ಬರುತ್ತಿರುವವರ ಅನ್ಯರಾಜ್ಯದ ಜನರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಾಹನ ಸಾಂಧ್ರತೆಯನ್ನು ಮತ್ತು ಜನಸಂಖ್ಯೆಯ ಹೆಚ್ಚಿನ ಬೆಳವಣಿಗೆಯನ್ನು ನಿಯಂತ್ರಿಸಲು ದೂರದೃಷ್ಟಿತ್ವದ ಪರಿಣಾಮಕಾರಿಯಾದ ಯೋಜನೆಗಳನ್ನು ರೂಪಿಸದಿದ್ದರೆ, ಬೆಂಗಳೂರಿನ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗುತ್ತದೆ.

– ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply