ಬೆಂಗಳೂರು: ಜ್ಯೂವೆಲ್ಲರಿ ಮಾಲೀಕರಿಂದ ಚಿನ್ನಾಭರಣ ಪಡೆದು 24 ಕ್ಯಾರೆಟ್ ಚಿನ್ನ ಮಾಡಿಕೊಡದೆ, ಹಣವನ್ನೂ ನೀಡದೇ ಮೋಸ ಮಾಡಿದ್ದ ಇಬ್ಬರು ಸಹೋದರರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಬಂಧಿತರಿಂದ 24 ಲಕ್ಷ ರೂ. ಮೌಲ್ಯದ 243 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಮತ್ತೊಬ್ಬ ಸಹೋದರ ಭಾಗಿಯಾಗಿದ್ದು, ಆತ ಈಗಾಗಲೇ ಪ್ರಕರಣವೊಂದರಲ್ಲಿ ಚೆನ್ನೈನ ಕಾರಾಗೃಹದಲ್ಲಿದ್ದಾನೆ. ನಗರತ್‌ಪೇಟೆಯ ಜ್ಯೂವೆಲ್ಲರಿ ಅಂಗಡಿಯೊಂದರಿಂದ ಮೂವರು ಸಹೋದರರು ಕಳೆದೆರಡು ವರ್ಷಗಳಿಂದ ಆಗಾಗ್ಗೆ 22 ಕ್ಯಾರೆಟ್ ನ ಚಿನ್ನಾಭರಣ ಪಡೆದುಕೊಂಡು ಅದಕ್ಕೆ ಸರಿಸಮಾನವಾಗಿ 24 ಕ್ಯಾರೆಟ್ ಚಿನ್ನಾಭರಣ ಅಥವಾ ಹಣ ನೀಡುತ್ತಿದ್ದರು.
ಕಳೆದ ಜ.6 ರಂದು 350 ಗ್ರಾಂ 250 ಮಿಲಿ ಆಭರಣವನ್ನು ಪಡೆದುಕೊಂಡಿದ್ದ ಈ ಸಹೋದರರು ತದನಂತರ ಚಿನ್ನ ವನ್ನಾಗಲಿ ಅಥವಾ ಹಣವನ್ನಾಗಲಿ ನೀಡದೇ ವಂಚನೆ ಮಾಡಿದ್ದಾರೆ. ಈ ಬಗ್ಗೆ ಅಂಗಡಿ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದರು.
ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ ಚೆನ್ನೈನ ಇಬ್ಬರು ಸಹೋದರರನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಿ ನಗರತ್‌ಪೇಟೆಯ ಜ್ಯೂವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 100 ಚಿನ್ನಾಭರಣ, ಮತ್ತೊಂದು ಚಿನ್ನಾಭರಣ ಹಾಗೂ ಚೆನ್ನೈನ ಚಿನ್ನ ಕರಗಿಸುವ ಎರಡು ಅಂಗಡಿಗಳಿಂದ 120 ಗ್ರಾಂ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟುಮೌಲ್ಯ 24 ಲಕ್ಷರೂ.ಗಳೆಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯನ್ನು ಇನ್ಸ್‌ಪೆಕ್ಟರ್ ಹನುಮಂತ ಕೆ ಭಜಂತ್ರಿ ಹಾಗೂ ಸಿಬ್ಬಂದಿ ತಂಡ ಕೈಗೊಂಡು ಇಬ್ಬರು ಸಹೋದರರನ್ನು ಬಂಧಿಸಿ ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.


