ಹಾಸನ: ಇದು ಯಾವುದೇ ಸಿನಿಮಾ ದೃಶ್ಯಕ್ಕೂ ಕಡಿಮೆ ಇಲ್ಲದ ಘಟನೆ. ವರ ತಾನು ಕೈಹಿಡಿಯಬೇಕಾಗಿದ್ದ ವಧುವಿಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹಸೆಮಣೆಯಿಂದ ಎದ್ದ ವಧು ಕಾರಿನಲ್ಲಿ ಪರಾರಿಯಾಗಿದ್ದಾರೆ.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ವರ ಸರ್ಕಾರಿ ಶಿಕ್ಷಕನಾಗಿದ್ದು, ಯುವತಿ ಸ್ನಾತಕೋತ್ತರ ಪದವಿ ಓದಿದಿದ್ದಾರೆ.
ಹಾಸನ ನಗರದ ಕಲ್ಯಾಣ ಮಂಟಪದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ನೆಂಟರು ಗೆಳೆಯರು ಮತ್ತು ಅತಿಥಿಗಳ ಸಂಭ್ರಮದ ನಡುವೆ ಮಂತ್ರಘೋಷಗಳು, ಗಟ್ಟಿಮೇಳ ಮೊಳಗುತ್ತಿದ್ದಂತೆ ವರ ತಾಳಿ ಹಿಡಿದು ಕಟ್ಟಲು ಸಜ್ಜಾಗಿದ್ದ. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ‘ಯುವತಿಗೆ ದೂರವಾಣಿ ಕರೆ ಬಂದಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಯುವತಿ ಮದುವೆ ಬೇಡ ಎಂದು ನಿರಾಕರಿಸಿದ್ದಾಳೆ. ತಾಳಿ ಕೈಲಿ ಹಿಡಿದಿದ್ದ ಯುವಕ ಪದೇಪದೇ ಯುವತಿಗೆ ಮದುವೆ ಇಷ್ಟ ಇದೆಯೋ ಇಲ್ವೋ ಅಂತಾ ಕೇಳಿದ್ದಾನೆ. ಸುತಾರಾಂ ಒಪ್ಪದ ಹುಡುಗಿ ಮದುವೆ ಬೇಡ ಅಂತಲೇ ಹಠ ಹಿಡಿದಿದ್ದಾಳೆ. ಈ ವೇಳೆ ಪೋಷಕರು ಸಹ ಯುವತಿ ಮನವೊಲಿಸಲು ಶತಾಯಗತಾಯ ಪ್ರಯತ್ನಪಟ್ಟರು. ‘ಈ ಮದುವೆ ಬೇಡ’ ಎಂದ ವಧು ಪಟ್ಟು ಹಿಡಿದಳು.
ಮದುವೆ ಬೇಡ ಎಂದ ಮಗಳನ್ನು ಅವರ ಪೋಷಕರು ಪರಿಪರಿಯಾಗಿ ಬೇಡಿಕೊಂಡಿರೂ, ಮಗಳು ಮಾತ್ರ ನಿರ್ಧಾರ ಬದಲಿಸಲಿಲ್ಲ. ಮಗಳ ನಿರ್ಧಾರದಿಂದ ಆಘಾತಗೊಂಡ ಪೋಷಕರು ಕಣ್ಣೀರ ಕೋಡಿ ಹರಿಸಿದರು. ಆದರೆ, ಯುವತಿ ಮಾತ್ರ ಯಾವುದಕ್ಕೂ ಕ್ಯಾರೆ ಅಂದಿಲ್ಲ. ಬಳಿಕ ಯುವತಿ ಹಠ ಮಾಡಿದ್ದಕ್ಕೆ ನನಗೂ ಈ ಮದುವೆ ಬೇಡ ಎಂದು ವರನೇ ತನ್ನ ನಿರ್ಧಾರ ತಿಳಿಸಿದ್ದಾನೆ.
ಮದುವೆ ಬೇಡ ಎಂದು ಹಸಮಣೆಯಿಂದ ಎದ್ದ ವಧು ನೇರವಾಗಿ ಕಲ್ಯಾಣ ಮಂಟಪದಿಂದ ಕಾರಿನ ಮೂಲಕ ಹೊರಗೆ ತೆರಳಿದ್ದಾಳೆ.
ಇನ್ನೊಬ್ಬನ ಜೊತೆ ಪ್ರೀತಿಸುತ್ತಿದ್ದು, ಆತನನ್ನೆ ಮದುವೆ ಮಾಡಿಕೊಳ್ಳುವುದಾಗಿ ಕೊನೆಯ ಕ್ಷಣದಲ್ಲಿ ಮದುಮಗಳು ಹೇಳಿದ್ದು, ವರ ಮತ್ತು ವಧುವಿನ ಪಾಲಕರಿಗೆ ದಿಕ್ಕು ತೋಚದಂತಾಗಿತ್ತು.



