ಬೋರ್ ವೆಲ್ ಗಳಲ್ಲಿ ನೀರು ಬರುವಂತೆ ಯೋಜನೆ: ವಿ.ಸೋಮಣ್ಣ

5 years ago

ಬೆಂಗಳೂರು: ಸಾರ್ವಜನಿಕರ ಕುಡಿಯುವ ನೀರಿನ ಬವಣೆ ನೀಗಿಸಲು ಕ್ರಮ ಕೈಗೊಂಡಿದ್ದು, 4 ಕೋಟಿ ವೆಚ್ಚದಲ್ಲಿ 24 ಇಂಚಿನ ನೂತನ ಪೈಪ್ ಲೈನ್ ಆಳವಡಿಕೆ ಮತ್ತು ಬತ್ತಿದ ಬೋರ್ ವೆಲ್ ಗಳಿಗಳಿಗೆ ಮರುಜೀವ ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಜಲಮಂಡಳಿ ವತಿಯಿಂದ 4 ಕೋಟಿ ರೂಪಾಯಿ ವೆಚ್ಚದ ನೂತನ ಸ್ಟೀಲ್ ಪೈಪ್ ಲೈನ್ ಆಳವಡಿಕೆ ಕಾಮಗಾರಿಗೆ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿ ಮಾತಾಡಿದ ಅವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 40 ವರ್ಷಗಳ ಹಿಂದಿನ ಐರನ್ ಪೈಪ್ ಲೈನ್ ಗಳು ಹಳೆಯದಾಗಿ ತುಕ್ಕುಹಿಡಿದು ಪೈಪ್ ಗಳಿಂದ ಶೇಕಡ 30%ರಷ್ಟು ನೀರು ಸೋರಿಕೆಯಾಗಿ ರಸ್ತೆಗಳಿಗೆ ಬರುತ್ತಿತು. ದುರಸ್ತಿ ಮಾಡುವಾಗ ರಸ್ತೆ ಅಗೆಯುವುದರಿಂದ ರಸ್ತೆಗಳಲ್ಲಿ ಗುಂಡಿ ಬೀಳುತ್ತಿತ್ತು. ಈ ಸಮಸ್ಯೆ ನಿವಾರಣೆಗಾಗಿ 4 ಕೋಟಿ ರೂಪಾಯಿ ವೆಚ್ಚದಲ್ಲಿ 24 ಅಂಗುಲದ ಸ್ಟೀಲ್ ಪೈಪ್ ಲೈನ್ ಹಾಕಲಾಗುತ್ತಿದೆ. ಸ್ಟೀಲ್ ಪೈಪ್ ಲೈನ್ ಕನಿಷ್ಠ 40 ವರ್ಷ ಬಾಳಿಕೆ ಬರುತ್ತದೆ ನೀರು ಸೋರಿಕೆ ಕಡಿಮೆಯಾಗುತ್ತದೆ ಎಂದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಡವರು, ಮಧ್ಯಮ ವರ್ಗದವರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ. ನೀರಿನ ಸಮಸ್ಯೆ ನಿವಾರಣೆಗಾಗಿ 350 ಬೋರ್ ವೆಲ್ ಕೊರೆಸಲಾಗಿದೆ. 100ಕ್ಕೂ ಹೆಚ್ಚು ಬೋರ್ ವೆಲ್ ಗಳು ಬತ್ತಿಹೋಗಿರುವ ಕಾರಣ, ಅದಕ್ಕೆ ಮರುಜೀವ ನೀಡಿ ಮತ್ತೆ ಬೋರ್ ವೆಲ್ ಗಳಲ್ಲಿ ನೀರು ಲಭಿಸುವಂತೆ ಮಾಡಲು ಯೋಜನೆ ರೂಪಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರು ಅಮೂಲ್ಯ, ಅದನ್ನ ಸಾರ್ವಜನಿಕರು ಹಿತಮಿತವಾಗಿ ಬಳಸಿ ಎಂದು ಜನತೆಗೆ ಕರೆನೀಡಿದರು.

ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ರಾಮಪ್ಪ, ಶಕುಂತಲ ಡೊಡ್ಡಲಕ್ಕಪ್ಪ ಮತ್ತು ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ ಮತ್ತು ಜಲಮಂಡಳಿ ಇಂಜನಿಯರ್ ಗಳು ಮತ್ತು ಅಧಿಕಾರಿಗಳು ಹಾಜರಿದ್ದರು.

Leave a Reply