ಪಕ್ಷದ ಕಾರ್ಯಕರ್ತನ ವಾಹನವನ್ನು ತಪಾಸಣೆ ಮಾಡಬೇಡಿ: ಬಿಜೆಪಿ ಶಾಸಕರ ತಾಕೀತು

4 years ago

ಬೆಂಗಳೂರು: ತಮ್ಮ ಪಕ್ಷದ ಕಾರ್ಯಕರ್ತ ಹಾಗೂ  ತನ್ನ ಬೆಂಬಲಿಗರ ವಾಹನವನ್ನು ಯಾವುದೇ ಕಾರಣಕ್ಕೂ ತಪಾಸಣೆ ಮಾಡಬಾರದೆಂದು ಬಿಜೆಪಿ ಶಾಸಕರೊಬ್ಬರು  ತಮ್ಮ ಲೆಟರ್ ಹೆಡ್ ಮೇಲೆ ಬರೆದು ಸಹಿ ಮಾಡಿಕೊಟ್ಟಿರುವ ಘಟನೆ ನಡೆದಿದೆ.

ಇಂತಹ ಆಶ್ಚರ್ಯವಾದರೂ ಇದು ನಿಜವಾದ ಘಟನೆಗೆ ಕಾರಾಣವಾಗಿರುವುದು ಗದಗ ಜಿಲ್ಲೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಪ್ಪ ಎಸ್​. ಲಮಾಣಿ. ಅವರು ಸಹಿ ಮಾಡಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿದೆ.

ಜನರ ಕಷ್ಟಕ್ಕೆ ಮರುಗಿ ಅವರಿಗೆ ಅನುಕೂಲವಾಗಲೆಂದು ಜನಪ್ರತಿನಿಧಿಗಳು ಪತ್ರ ರವಾನಿಸುವ ಮೂಲಕ ಸಂಬಂಧಪಟ್ಟವರಿಗೆ ಸೂಚನೆ ನೀಡುವುದು ಸಹಜ ನಡೆ. ಆದರೆ, ಬಿಜೆಪಿ ಶಾಸಕರು ತಮ್ಮ ಬೆಂಬಲಿಗನ ಕಾರನ್ನು ಯಾವುದೇ ಕಾರಣಕ್ಕೂ ತಪಾಸಣೆ ಮಾಡುವ ನೆಪದಲ್ಲಿ ನಿಲ್ಲಿಸಬಾರದು ಎಂದು ಪತ್ರ ಬರೆದು ತಾಕೀತು ಮಾಡಿ ಪೇಚಿಗೆ ಸಿಲುಕಿದ್ದಾರೆ!

ಅವರ ಈ ನಡೆಯನ್ನು ಅಧಿಕಾರದ ದುರ್ಬಳಕೆ, ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ಶಾಸಕರ ಕಡೆಯವರು ಅಂದ ಮಾತ್ರಕ್ಕೆ ಸಾರಿಗೆ ನಿಯಮ ಅನ್ವಯಿಸುವುದಿಲ್ಲವೇ? ಇದು ಸರ್ವಾಧಿಕಾರಿ ಧೋರಣೆಯಲ್ಲವೇ ಎಂದು ಪ್ರಶ್ನಿಸಲಾಗುತ್ತಿದೆ.

ಪತ್ರದಲ್ಲಿ ಏನಿದೆ?:  ಶಿರಹಟ್ಟಿ ತಾಲೂಕಿನ ಬೆಳಗಟ್ಟಿಯ ಜಿ.ಬಸವರಾಜ ಎಂಬುವವರು ನನ್ನ ಮತ ಕ್ಷೇತ್ರಕ್ಕೆ ಒಳಪಟ್ಟಿದ್ದು, ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಹಾಗೂ ನನಗೆ ತುಂಬಾ ಚಿರಪರಿಚಿತರು. ಬಸವರಾಜ ಅವರು ಮಹೇಂದ್ರ ಬೊಲೆರೋ ವಾಹನ ಹೊಂದಿದ್ದು, ಇದರ ಸಂಖ್ಯೆ AP-39 V-3517. ಈ ವಾಹನವನ್ನು ಹಿಡಿಯಬಾರದು. ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ಪತ್ರದ ಮೂಲಕ ಮನವಿ ಮಾಡುತ್ತೇನೆ ಎಂದು ಶಾಸಕರ ಲೆಟರ್​ಹೆಡ್​ನಲ್ಲೇ ರಾಮಪ್ಪ ಎಸ್​. ಲಮಾಣಿ ಅವರು ಬರೆದು ಸಹಿ ಮಾಡಿ ಕೊಟ್ಟಿದ್ದಾರೆ.

Leave a Reply