ಬೆಂಗಳೂರು: ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ವಕ್ಫ್ ಎಂಬ ಹೆಸರೇ ಇರಲಿಲ್ಲ. ಅರ್ಧ ಭಾರತದಷ್ಟು ಜಮೀನು ಇವತ್ತು ವಕ್ಫ್ ಹೆಸರಲ್ಲಿದೆ. ಕಾನೂನುಬಾಹಿರವಾಗಿ ಕಾನೂನುಗಳನ್ನು ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಸಾವಿರದಷ್ಟು ಎಕರೆ ಇದ್ದ ಜಮೀನು 38 ಲಕ್ಷ ಎಕರೆ ಹೇಗಾಯ್ತು? ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಮೀರ್ ಅವರು ವಕ್ಫ್ ಅದಾಲತ್ ಮಾಡುತ್ತಿದ್ದಾರೆ. ಅವರಿಗೆ ಕಾನೂನಿನಲ್ಲಿ ಅದಾಲತ್ ಮಾಡೋಕೆ ಅವಕಾಶ ಇಲ್ಲ. ತಹಶೀಲ್ದಾರರು, ಡಿಸಿ ಅವರಿಗೆ ಒತ್ತಡ ಹೇರುತ್ತಿದ್ದಾರೆ ಎಂದರು.
ಮಾಜಿ ಸಚಿವ ಸಿಟಿ ರವಿ ಮಾತನಾಡಿ, 1995ರಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಅವರು ಒಂದು ಜಾಗವನ್ನು ನಮ್ಮದು ಅಂದರೆ ಪ್ರಶ್ನೆ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ತೋಳದ ಬಳಿ ಹೋಗಿ ನ್ಯಾಯ ಕೇಳುವ ಕುರಿಮರಿ ಪರಿಸ್ಥಿತಿ ಬಂದಿದೆ ಎಂದರು.
ದಲಿತರು ಮನೆ ಕಟ್ಟಿರುವ ಜಾಗವನ್ನು ನಮ್ಮದು ಎನ್ನುತ್ತಾರೆ. ವಕ್ಫ್ ಬೋರ್ಡ್ ಚೇರ್ ಮನ್ ಸಾದಿ, ವಿಧಾನಸೌಧ ಕೂಡ ವಕ್ಫ್ ಆಸ್ತಿ ಎನ್ನುತ್ತಾರೆ. ಮುಸ್ಲಿಮರ ಮತಾಂಧತೆಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ. ಕರ್ನಾಟಕದ ನಂದನವನವನ್ನು ಸ್ಮಶಾನ ಮಾಡಲು ಹೊರಟಿದ್ದಿರಿ ಎಂದರು.




