ಗಣೇಶ ಮೂರ್ತಿ ಭಗ್ನಗೊಳಿಸಿದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಬೆಂಬಲಿಗರು!

4 years ago

ಗಣೇಶ ಮೂರ್ತಿ ಭಗ್ನಗೊಳಿಸಿದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಬೆಂಬಲಿಗರು!

ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಳ್ಳದ RSS ಮಾತು ಕಟ್ಟಿಕೊಂಡು ಸಮಾಜ ಒಡೆಯುವ ಕೆಲಸಕ್ಕೆ ಹಾಕಬೇಡಿ : ಎಚ್.ಸಿ.ಮಹದೇವಪ್ಪ
ಮೈಸೂರು: ಈ ಬಿಜೆಪಿಯವರು ಗಣೇಶ ಉತ್ಸವ ಎಂದರೆ ಕೋಮುಗಲಭೆ ಎಬ್ಬಿಸಲು ಸಿಗುವ ಅವಕಾಶ ಮತ್ತು ವೇದಿಕೆ ಎಂದುಕೊಂಡಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಮಾಲೂರಿನ 9 ಕಡೆ ಗಣೇಶನ ಮೂರ್ತಿಗಳನ್ನು ಭಗ್ನಗೊಳಿಸಿದ್ದರಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯ ಬೆಂಬಲಿಗರ ಪಾತ್ರವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಅಯ್ಯಾ ಬಿಜೆಪಿಗರೇ, ಬ್ರಿಟಿಷರ ವಿರುದ್ಧ ಜನ ಸಾಮಾನ್ಯರು ಜಾತಿ ಮತ್ತು ಧರ್ಮದ ಬೇಧ ಇಲ್ಲದೇ ಒಗ್ಗಟ್ಟಾಗಲಿ ಎಂಬ ಕಾರಣಕ್ಕೆ  ತಿಲಕರು ಗಣೇಶ ಉತ್ಸವವನ್ನು ಪರಿಚಯಿಸಿದರು ಎಂದು ನೆನಪಿಸಿದ್ದಾರೆ.

ನೆಟ್ಟಗೆ ಆಡಳಿತ ನಡೆಸಲು ಬಾರದ ಸಂದರ್ಭದಲ್ಲಿ, ಜನ ಸಾಮಾನ್ಯರು ದೈನಂದಿನ ಬದುಕಲ್ಲಿ ತೀವ್ರ ಬೇಸರ ಮಾಡಿಕೊಂಡಿರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಳ್ಳದ RSS ಮಾತು ಕಟ್ಟಿಕೊಂಡು ಸಮಾಜ ಒಡೆಯುವ ಕೆಲಸಕ್ಕೆ ಹಾಕಬೇಡಿ ಎಂದು ಕಿಡಿಕಾರಿದ್ದಾರೆ.

ಸಾಮಾಜಿಕ ಹಬ್ಬಗಳು ಎಂದರೆ ಐಕ್ಯತೆಗೆ ಸಿಕ್ಕಿರುವ ಸಂಭ್ರಮದ ವೇದಿಕೆ. ಈ ಸಾಮಾನ್ಯ ಜ್ಞಾನ ಹೊಂದದೇ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದರೆ ಜನ ಸಾಮಾನ್ಯರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.

Leave a Reply