ಬಿಜೆಪಿಯ ಮಹಿಳಾ ವಿರೋಧಿ ರಾಜಕಾರಣದ ಸತ್ಯ ಬಯಲಾಗಿದೆ: ಕೃಷ್ಣ ಬೈರೇಗೌಡ

4 years ago

ಬೆಂಗಳೂರು: ಮಹಿಳೆಯರ ಮತಗಳನ್ನು ತೆಗೆದುಕೊಂಡು ಅವರು, ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡಲು ನಿರಾಕರಿಸುತ್ತಾರೆ. ಬಿಬಿಎಂಪಿ ವಾರ್ಡ್ ಮೀಸಲಾತಿಯಲ್ಲಿ ಬಿಜೆಪಿಯ ಮಹಿಳಾ ವಿರೋಧಿ ರಾಜಕಾರಣದ ಸತ್ಯ ಬಯಲಾಗಿದೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.

ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡಲು ನಿರಾಕರಿಸಿದ್ದಾರೆ. ಬಿಜೆಪಿ ಶಾಸಕರು 144 ವಾರ್ಡ್‌ಗಳನ್ನು ಹೊಂದಿದ್ದು, ಆ ವಾರ್ಡ್‌ಗಳಲ್ಲಿ 76 ವಾರ್ಡ್‌ಗಳ ಬದಲಿಗೆ 46 ಮಾತ್ರ ಮಾತ್ರ ಮಹಿಳೆಯರಿಗೆ ಮೀಸಲಾಗಿದೆ. ತಮ್ಮ ಕ್ಷೇತ್ರಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ತಪ್ಪಿಸಲು, ಬಿಜೆಪಿ ಮಹಿಳಾ ಮೀಸಲಾತಿಯನ್ನು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ವರ್ಗಾಯಿಸಿದೆ ಎಂದಿದ್ದಾರೆ.

ಕಾಂಗ್ರೆಸ್+ಜೆಡಿಎಸ್ ಶಾಸಕರು 99 ವಾರ್ಡ್‌ಗಳನ್ನು ಹೊಂದಿದ್ದಾರೆ. 44 ವಾರ್ಡ್‌ಗಳ ಬದಲಾಗಿ 76 ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿದೆ. ಬಿಜೆಪಿಯ 30 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಅವಕಾಶ ನಿರಾಕರಿಸಿದೆ. ಬಿಜೆಪಿಗೆ ಮಹಿಳೆಯರ ಮತಗಳು ಬೇಕು. ಆದರೆ, ಅವರಿಗೆ ಅವಕಾಶ ಕೊಡಲು ಸಿದ್ಧರಿಲ್ಲ. ಇದೆಂತಾ ಅನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

Leave a Reply