ಬಿ.ಬಿ.ಎಂ.ಪಿ.ಚುನಾವಣೆ ವಿಳಂಬಕ್ಕೆ ಬಿಜೆಪಿ, ಕಾಂಗ್ರೆಸ್ ಶಾಸಕರು ಕಾರಣ: ಆರ್.ಎಲ್.ಎನ್.ಮೂರ್ತಿ

4 years ago

ಬಿ.ಜೆ.ಪಿ. ಸರ್ಕಾರ ಪ್ರಜಾಪ್ರಭುತ್ವ ಮತ್ತು ಅಧಿಕಾರಿ ವಿಕೇಂದ್ರಕರಣ ವಿರೋಧಿ ನಿಲುವು ತಾಳಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ

ಬೆಂಗಳೂರು: ಬಿ.ಬಿ.ಎಂ.ಪಿ. ಚುನಾವಣೆ ವಿಳಂಬಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರೇ ಕಾರಣ ಎಂದು ಜೆ.ಡಿ.ಎಸ್. ನಾಯಕ, ವಕೀಲದ ಆರ್.ಎಲ್.ಎನ್.ಮೂರ್ತಿ ಆರೋಪಿಸಿದರು.

ಬೆಂಗಳೂರಿನಲ್ಲಿ ಈ ಕುರಿತು ಮಾತಾಡಿದ ಅವರು, ಬಿ.ಜೆ.ಪಿ. ಸರ್ಕಾರ ನೂತನ ಮಸೂದೆಗೆ ತರಾತುರಿಯಲ್ಲಿ ಅನುಮೋದನೆ ನೀಡಿತು. ಅದೇ ವೇಗದಲ್ಲಿ ಚುನಾವಣೆ ಮಾಡಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ವಾರ್ಡ್ ವಿಂಗಡಣೆ ನೆಪ ಮಾಡಿ ಮತ್ತು ಚುನಾವಣೆ ಮುಂದೂಡಿಕೆ ಮಾಡಲು ಕಾನೂನಿನ ಮೊರೆ ಹೋಗಿ ವಿಳಂಬವಾಗಲು ಬಿಜೆಪಿಗರು ಕಾರಣರಾಗಿದ್ದಾರೆ. ಬೆಂಗಳೂರು ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪಕ್ಷದ ಶಾಸಕರ ಒಳ ಒಪ್ಪಂದದಿಂದ  ಬಿ.ಬಿ.ಎಂ.ಪಿ ಚುನಾವಣೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿರುವ ಸಚಿವರಿಗೆ ಮಾನ ಮಾರ್ಯಾದೆ ಇಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಡಳಿತಾಧಿಕಾರಿಗಳ ನೇಮಕ ಮಾಡಿ, ಶಾಸಕರು ಆಟವಾಡುತ್ತಿದ್ದಾರೆ. ನಿಯಮಗಳ ಪ್ರಕಾರ, 6 ತಿಂಗಳ ಮೇಲೆ ಆಡಳಿತಾಧಿಕಾರಿಗಳನ್ನು ಮುಂದುವರೆಸುವಂತಿಲ್ಲ. ಆದರೆ 14 ತಿಂಗಳಾದರೂ ಇನ್ನು ಬಿ.ಬಿ.ಎಂ.ಪಿ.ಗೆ ಜನಪ್ರತಿನಿಧಿಗಳು ಆಯ್ಕೆಯಾಗಿ ಬಂದಿಲ್ಲ ಎಂದರು.

ಬೆಂಗಳೂರು ನಗರದಲ್ಲಿ ಸಾವಿರಾರು ಕೋಟಿಗಳ ಅನುದಾನ ತಂದು ಅದರಲ್ಲಿ ಕಮಿಷನ್ ಹೊಡೆಯುವ ದುರಾಸೆ ಬಿದ್ದಿರುವ ಶಾಸಕರಿಗೆ ಬಿ.ಬಿ.ಎಂ.ಪಿ. ಚುನಾವಣೆ ಬೇಕಿಲ್ಲ. ಬಿ.ಜೆ.ಪಿ. ಸರ್ಕಾರ ಪ್ರಜಾಪ್ರಭುತ್ವ ಮತ್ತು ಅಧಿಕಾರಿ ವಿಕೇಂದ್ರಕರಣ ವಿರೋಧಿ ನಿಲುವು ತಾಳಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

Leave a Reply