ಡಾ. ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಲವಾರು ಮಸೂದೆಗಳನ್ನು ಮತ್ತು ಸಂವಿಧಾನದ ತಿದ್ದುಪಡಿಗಳನ್ನು ಮಾಡಿರುತ್ತಾರೆ. ಇವುಗಳಲ್ಲಿ ಎಲ್ಲವೂ ಸಹ ಸಮಾಜದಲ್ಲಿ ಸಾಮರಸ್ಯವನ್ನು ಉಂಟುಮಾಡುವ ಜೊತೆಗೆ ಬದುಕನ್ನು ಮತ್ತಷ್ಟು ಹಸನುಗೊಳಿಸುವ ಜನಪರವಾದಂತಹ ಕಾನೂನುಗಳಾಗಿತ್ತು ಎಂಬುದನ್ನ ನೆನಪಿಸಿಕೊಳ್ಳಬೇಕಾಗುತ್ತದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಉಚಿತ ಪ್ರಾಥಮಿಕ ಶಿಕ್ಷಣವನ್ನ ಕಡ್ಡಾಯಗೊಳಿಸುವಂತಹ ತಿದ್ದುಪಡಿಯನ್ನ ಮಾಡಿದರು. ಇದರಿಂದ ದೇಶದಾದ್ಯಂತ ಲಕ್ಷಾಂತರ ಮಕ್ಕಳಿಗೆ ಅನುಕೂಲವಾಯಿತು. ಪ್ರತಿಷ್ಠಿತ ಶಾಲೆಗಳಲ್ಲಿ ಬಡವರ ಮನೆಯ ಮಕ್ಕಳು ವ್ಯಾಸಂಗ ಮಾಡುವಂತಾಯಿತು. ಒಟ್ಟಾರೆಯಾಗಿ ದೇಶದಲ್ಲಿ ಶೈಕ್ಷಣಿಕ ಪ್ರಗತಿಗೆ ನಾಂದಿ ಆಯಿತು. ಇಲ್ಲಿ ಯಾವುದೇ ರೀತಿಯ ಸಂಘರ್ಷಕ್ಕೆ ಅವಕಾಶವೇ ಇಲ್ಲದಂತಹ ಕಾನೂನಾಗಿತ್ತು.
ಆಹಾರ ಭದ್ರತೆ ಕಾಯ್ದೆಯ ಮೂಲಕ ಎಲ್ಲರಿಗೂ ಆಹಾರವನ್ನು ನೀಡುವಂತಹ ಕಾನೂನ ರೂಪಿಸಿದರು. ಇದರಿಂದಾಗಿ ಅನ್ನ ಭಾಗ್ಯ ಯೋಜನೆ ಜಾರಿಗೆ ನಾಂದಿ ಆಯಿತು. ಇಂದು ದೇಶದಲ್ಲಿ ಕೇಂದ್ರ ಸರ್ಕಾರ ಉಚಿತವಾಗಿ 5 ಕೆಜಿ ಅಕ್ಕಿ ನೀಡುತ್ತಿರುವುದು ಈ ಕಾನೂನಿನ ಅನ್ವಯ ಇಲ್ಲಿಯೂ ಸಹ ಯಾವ ಸಂಘರ್ಷವೂ ಇಲ್ಲ. ಬದಲಾಗಿ ಸಾಮರಸ್ಯ ಉಂಟಾಯಿತು.
ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತಂದರು. ಇದರಿಂದ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಒಂದು ದೃಢವಾದ ಕಾನೂನಾತ್ಮಕವಾದ ಗುರುತಿನ ಚೀಟಿ ಪಡೆಯುವಂತಾಯಿತು. ಇದು ಇಂದು ಎಲ್ಲ ವ್ಯವಸ್ಥೆಗಳಿಗೆ ಮೂಲವಾಗಿದೆ. ಇಲ್ಲಿಯೂ ಸಹ ಯಾವ ಸಂಘರ್ಷಕ್ಕೆ ಅವಕಾಶವಿರಲಿಲ್ಲ. ಬದಲಿಗೆ ಸಮಾನತೆಗೆ ಅವಕಾಶವಾಯಿತು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕಾನೂನನ್ನು ಮಾಡಿದರು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಕೋಟ್ಯಾಂತರ ಉದ್ಯೋಗಗಳು ಸೃಷ್ಟಿಯಾಯಿತು. ವಲಸೆ ಬರುವುದು ತಪ್ಪಿತು. ಜೊತೆಗೆ ವಿಶೇಷವಾಗಿ ಕರೋನಾ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಜೀವನವನ್ನು ನಿರ್ವಹಿಸಲು ಪೂರಕವಾಯಿತು. ಇಲ್ಲಿಯೂ ನಾವು ಗಮನಿಸಬೇಕು. ಈ ಕಾನೂನಿನಿಂದ ಸಾಮರಸ್ಯವೇ ಉಂಟಾಯಿತು ಸಂಘರ್ಷಕ್ಕೆ ಅವಕಾಶವಿಲ್ಲ.
ಅಣು ಒಪ್ಪಂದಕ್ಕೆ ಸದನದ ಒಪ್ಪಿಗೆಯನ್ನ ಪಡೆಯುವ ಮೂಲಕ ದೇಶದಲ್ಲಿ ಅಣು ವಿದ್ಯುತ್ ಉತ್ಪಾದನೆಗೆ ಕಾರಣಕರ್ತರಾದರು. ಈ ಮಸೂದೆಯು ಜನರ ಬದುಕಿಗೆ ಅನುಕೂಲಕರವಾದಂತಹ ಕಾನೂನು ಆಯಿತು.
ಕಡ್ಡಾಯವಾದಂತಹ ಆರೋಗ್ಯ ಭದ್ರತೆ ಕಾಯ್ದೆಯನ್ನು ತಂದರು. ಇದು ಸಹ ಕೋಟ್ಯಾಂತರ ಭಾರತೀಯರ ಬದುಕಿಗೆ ಪೂರಕವಾಯಿತು. ಜೊತೆಗೆ ಜನ ಔಷಧಿ ಎಂದು ಹೆಸರು ಬದಲಾಯಿಸಿರುವ ಔಷಧಿ ಮಳಿಗೆಗಳಿಗೆ ಮೊದಲು ಜನರಿಕ್ ಮೆಡಿಸನ್ ಎಂದು ಆರಂಭಿಸಿದವರು ಡಾ. ಮನಮೋಹನ್ ಸಿಂಗ್ ರವರು. ಇದು ಸಹ ಜನಪರ ಕಾಳಜಿಯ ಯೋಜನೆಯಾಗಿತ್ತು.
ಈ ಹಿಂದೆ ಶ್ರೀಮತಿ ಇಂದಿರಾಗಾಂಧಿರವರು ಉಳುವವನಿಗೆ ಭೂಮಿ ಎನ್ನುವ ಕಾನೂನನ್ನು ರೂಪಿಸಿದರು. ಇದು ಸಹ ಜನರಿಗೆ ಬದುಕನ್ನ ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಯೋಜನೆಯಾಗಿತ್ತು.
ರಾಜೀವ್ ಗಾಂಧಿರವರು ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಗಾಗಿ ಸಂವಿಧಾನದ ತಿದ್ದುಪಡಿಯನ್ನು ತಂದರು. ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸುವ ಸಲುವಾಗಿ ಕಾನೂನನ್ನು ರೂಪಿಸಿದರು. ಇದು ಸಹ ಯಾವುದೇ ಸಂಘರ್ಷಕ್ಕೆ ದಾರಿಯಾಗಲಿಲ್ಲ. ಬದಲಿಗೆ ಬದಲಾವಣೆಗೆ ದಾರಿಯಾಯಿತು.
ಇತ್ತೀಚಿನ 10 ವರ್ಷದಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಹಲವಾರು ಮಸೂದೆಗಳನ್ನು ಮಂಡಿಸಿದೆ ಮತ್ತು ಸಂವಿಧಾನ ತಿದ್ದುಪಡಿಗಳನ್ನು ಮಾಡಿದೆ. ಇವುಗಳಲ್ಲಿ ಬಹಳಷ್ಟು ಕಾನೂನುಗಳಿಂದ ಯಾವ ಜನರಿಗೂ ಉದ್ಯೋಗವು ದೊರೆಯುವುದಿಲ್ಲ, ಊಟವು ಸಿಗುವುದಿಲ್ಲ, ಬದುಕು ನಿರ್ಮಿಸಿ ಕೊಡುವುದಿಲ್ಲ, ಎಲ್ಲವೂ ಭಾವನಾತ್ಮಕವಾದಂತ ಸಂಗತಿಗಳಾಗಿದ್ದು ಹೊಟ್ಟೆ ತುಂಬಿದವರು ಚರ್ಚೆ ಮಾಡುವಂತಹ ವಿಚಾರಗಳಾಗಿವೆ.
ಜೊತೆಗೆ ಸಮಾಜದಲ್ಲಿ ಮತ್ತಷ್ಟು ಅಸಮಾನತೆ, ಅವಿಶ್ವಾಸ ಮೂಡಲು ಕಾರಣವಾಗಿದೆ. ಇವರು ತಂದಿರುವ ಬಹಳಷ್ಟು ಮಸೂದೆಗಳು ಮತ್ತು ಸಂವಿಧಾನ ತಿದ್ದುಪಡಿಗಳು ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆಯಾಗುವಂತಹ ಸಂಗತಿಗಳನ್ನು ಒಳಗೊಂಡಿದೆ.
ಜಿಎಸ್ಟಿ ವ್ಯವಸ್ಥೆಯಿಂದ ಜನಸಾಮಾನ್ಯರ ಮೇಲೆ ತೆರಿಗೆಯ ಹೊರೆ ಹೆಚ್ಚಾಗಿದೆ. ಇದನ್ನು ಒಂದು ಸಾಧನೆ ಎಂದು ಹೇಳಿಕೊಳ್ಳುತ್ತಾರೆ.
ನೋಟುಗಳ ಅಮಾನ್ಯೀಕರಣದಿಂದ ಬಡವರು ಮತ್ತು ಮಧ್ಯಮ ವರ್ಗದವರ ಬದುಕು ಸಂಪೂರ್ಣವಾಗಿ ಸಂಕಷ್ಟಕ್ಕೆ ದೂಡಲ್ಪಟ್ಟಿತು. ಇಂದಿಗೂ ಸಹ ಅನೇಕ ವರ್ಗದ ಜನ ಇದರಿಂದಾಗಿ ಆರ್ಥಿಕವಾಗಿ ಚೇತರಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ಜನಸಾಮಾನ್ಯರು ತಮ್ಮಲ್ಲಿದ್ದ ನೋಟುಗಳ ಬದಲಾವಣೆ ಮಾಡಿಕೊಳ್ಳುವ ಸಲುವಾಗಿ ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ನೂರಾರು ಮಂದಿ ಪ್ರಾಣವನ್ನು ಕಳೆದುಕೊಂಡರು. ಇದರಿಂದ ದೇಶದ ಆರ್ಥಿಕ ಪ್ರಗತಿಗೆ ಯಾವುದೇ ಅನುಕೂಲವಾಗಲಿಲ್ಲ. ಆದರೂ ಇದನ್ನು ಸಾಧನೆ ಎಂದು ಹೇಳಿಕೊಳ್ಳುತ್ತಾರೆ.
ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವ ಮಾತನಾಡಿದರು. ಇದರಿಂದ ಪರಸ್ಪರ ಅವಿಶ್ವಾಸಕ್ಕೆ ಕಾರಣವಾಯಿತು, ಹೊರತು ಯಾವ ಸಾಧನೆ ಆಗಲಿಲ್ಲ.
ಬ್ಯಾಂಕುಗಳಲ್ಲಿ ಖಾತೆಯನ್ನ ತೆರೆಯಲು ಅವಕಾಶವನ್ನು ಮಾಡಿಕೊಟ್ಟೆವು ಎಂದು ಹೇಳಿಕೊಳ್ಳುತ್ತಾರೆ. ಆದರೆ ಜನಸಾಮಾನ್ಯರು 15,00,000ಗಳನ್ನ ಖಾತೆಗೆ ತುಂಬುತ್ತಾರೆಂಬ ಪ್ರಚಾರದಿಂದಾಗಿ ಖಾತೆಗಳನ್ನ ಆರಂಭಿಸಿದರು. ಈಗ ಖಾತೆಗಳಲ್ಲಿ ನಿಗದಿತ ಕನಿಷ್ಠ ಮೊತ್ತ ಇಲ್ಲದ ಕಾರಣಕ್ಕೆ ಬಡವರು ಮತ್ತು ಪಿಂಚಣಿದಾರರು ಸಹ ದಂಡವನ್ನ ಕಟ್ಟುತ್ತಿದ್ದಾರೆ. ಇಂತಹ ದಂಡದ ಪ್ರಮಾಣ ಸಹಸ್ರಾರು ಕೋಟಿ ರೂಪಾಯಿಗಳು ದೇಶದ ಖಜಾನೆಗೆ ಬಂದಿದೆ. ಇದನ್ನು ಸಾಧನೆ ಎಂದು ಹೇಳಿಕೊಳ್ಳುತ್ತಾರೆ.
ದೇಶದಲ್ಲಿ ಸಾಕಷ್ಟು ಸಾರ್ವಜನಿಕ ಉದ್ಯಮಗಳಲ್ಲಿ ಬಂಡವಾಳವನ್ನು ಹಿಂತೆಗೆದುಕೊಂಡು ಅವುಗಳನ್ನು ಮಾರಾಟವನ್ನು ಮಾಡಿದ್ದಾರೆ. ಬಂಡವಾಳ ಹಿಂತೆಗೆದ ಕಾರಣದಿಂದ ಬಹಳಷ್ಟು ಸಾರ್ವಜನಿಕ ಉದ್ಯಮಗಳು ಮುಚ್ಚಲ್ಪಟ್ಟಿವೆ. ಇಲ್ಲವೇ ನಷ್ಟ ಹೊಂದಿವೆ. ಇದರಿಂದಾಗಿ ಲಕ್ಷಾಂತರ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಆದರೆ ಇದನ್ನು ಸಾಧನೆ ಎಂದು ಹೇಳಿಕೊಳ್ಳುತ್ತಾರೆ.
ಈ ಹಿಂದೆ ಯೋಜನಾ ಆಯೋಗದ ವ್ಯವಸ್ಥೆ ಇತ್ತು. ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳು ಯೋಜನಾ ಆಯೋಗದ ಉಪಾಧ್ಯಕ್ಷರು ಮತ್ತು ಸದಸ್ಯರ ಜೊತೆಯಲ್ಲಿ ಕುಳಿತು ತಮ್ಮ ರಾಜ್ಯದಲ್ಲಿನ ಯೋಜನೆಗಳ ಬಗ್ಗೆ ಕೇಂದ್ರದ ನೆರವಿನ ಬಗ್ಗೆ ಅನುಮತಿಯ ಬಗ್ಗೆ ಚರ್ಚಿಸಿ ಸಹಕಾರವನ್ನು ಪಡೆಯಬಹುದಾಗಿತ್ತು. ಈಗ ಇದರ ಬದಲಿಗೆ ನೀತಿ ಆಯೋಗವೆಂಬ ವ್ಯವಸ್ಥೆಯನ್ನು ಜಾರಿಗೆ ತಂದು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಮತ್ತಷ್ಟು ಅಂತರವನ್ನು ಹೆಚ್ಚಿಸಿದ್ದಾರೆ. ಇದನ್ನು ಸಾಧನೆ ಎಂದು ಹೇಳಿಕೊಳ್ಳುತ್ತಾರೆ.
ರಾಜ್ಯಗಳಿಗಿದ್ದ ಆರ್ಥಿಕ ಸ್ವಾತಂತ್ರ್ಯವನ್ನು ಜಿಎಸ್‌ಟಿ ಹೆಸರಿನಲ್ಲಿ ಕಸಿದುಕೊಂಡಿದ್ದಾರೆ. ರಾಜ್ಯಗಳಿಗಿದ್ದ ಶಿಕ್ಷಣದ ಮೇಲಿನ ಬದಲಾವಣೆ ಮತ್ತು ಕಾನೂನು ರೂಪಿಸುವ ಅಧಿಕಾರವನ್ನು ಕಸಿದುಕೊಳ್ಳುತ್ತಿದ್ದಾರೆ. ರಾಜ್ಯಪಾಲರುಗಳ ಮೂಲಕ ವಿರೋಧಪಕ್ಷದ ಸರ್ಕಾರಗಳ ಮೇಲೆ ನಿಯಂತ್ರಣವನ್ನು ಇಡುತ್ತಿದ್ದಾರೆ. ವಿಧಾನಸಭೆಗಳಲ್ಲಿ ಅನುಮೋದನೆಗೊಂಡ ವಿಧೇಯಕಗಳಿಗೆ ರಾಜ್ಯಪಾಲರುಗಳು ಸಹಿ ಹಾಕದೆ ಸರ್ಕಾರಗಳು ತಮ್ಮ ಯೋಜನೆಗಳನ್ನ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಸಹ ತಮ್ಮ ಇಷ್ಟದಂತೆ ನಡೆಸಿಕೊಳ್ಳುತ್ತಿದ್ದಾರೆ.
ದೇಶದಲ್ಲಿ ಪತ್ರಿಕಾ ಮಾಧ್ಯಮದವರು ಕಳೆದ ಹತ್ತು ವರ್ಷದಲ್ಲಿ ಬಿಜೆಪಿ ಸರ್ಕಾರಗಳು ತಂದಿರುವ ಮಸೂದೆಗಳು ಮತ್ತು ಸಂವಿಧಾನ ತಿದ್ದುಪಡಿಗಳಿಂದ ಯಾವ ಯಾವ ಬದಲಾವಣೆಗಳು ಯಾವ ಯಾವ ಕ್ಷೇತ್ರದ ಮೇಲೆ ಆಗಿದೆ, ಎಷ್ಟು ಅನುಕೂಲಗಳಾಗಿದೆ ಎನ್ನುವುದನ್ನು ದಯಮಾಡಿ ವಿಮರ್ಶೆಯ ಮೂಲಕ ಲೇಖನಗಳನ್ನ ಪ್ರಕಟಿಸಿದರೆ ಜನ ಸಾಮಾನ್ಯರಿಗೆ ಸತ್ಯಾಸತ್ಯತೆಗಳ ಕುರಿತು ಅರಿವಾಗುತ್ತದೆ.
ದೃಶ್ಯಮಾಧ್ಯಮದ ಬಹುತೇಕ ಮಂದಿಯಿಂದ ಇಂತಹ ವಿಮರ್ಶೆಯನ್ನ ಬಯಸಲು ಸಾಧ್ಯವಿಲ್ಲ. ಏಕೆಂದರೆ ಹಲವಾರು ದೃಶ್ಯ ಮಾಧ್ಯಮಗಳು ಮಾಲೀಕತ್ವ ಕೇಂದ್ರ ಸರಕಾರದ ಬೆಂಬಲಿಗರ ಹಿಡಿತದಲ್ಲಿ ಇರುವುದರಿಂದ ಪ್ರಾಮಾಣಿಕವಾದ ವಿಮರ್ಶೆಗಳು ನಿರೀಕ್ಷಿಸಲು ಸಾಧ್ಯವೇ ಇಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




