ಉದ್ಯಮಿ ಒಕ್ಕಲಿಗ ಬೃಹತ್ ಸಮಾವೇಶ

2 years ago

ಬೆಂಗಳೂರು: ಜನವರಿ 19ರಂದು ಮೂರು ದಿನಗಳ ಉದ್ಯಮಿ ಒಕ್ಕಲಿಗರ ಸಮಾವೇಶದ ಉದ್ಘಾಟನೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ನೇರವೆರಿಸುವರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಜಿ ಅಧ್ಯಕ್ಷೆ ಭಾರತಿ ಶಂಕರ್ ಹೇಳಿದರು.

ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾಡಿದ ಅವರು, ಫರ್ಸ್ಟ್ ಸರ್ಕಲ್ ಸೊಸೈಟಿ ವತಿಯಿಂದ ಜನವರಿ 19ರಿಂದ 21ರ ಮೂರು ದಿನಗಳ ಕಾಲ ಉದ್ಯಮಿ ಒಕ್ಕಲಿಗ ಸಮಾವೇಶವನ್ನು ಅರಮನೆ ಮೈದಾನ, ಗಾಯಿತ್ರಿ ಗ್ಯಾಂಡ್ ನಲ್ಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ಒಕ್ಕಲಿಗ ಉದ್ಯಮಿ ಸಮಾವೇಶದಲ್ಲಿ 80ಕ್ಕೂ ಹೆಚ್ಚು ಖ್ಯಾತ ಉದ್ಯಮಿಗಳು ಭಾಗವಹಿಸಲಿದ್ದಾರೆ. 80ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಒಕ್ಕಲಿಗ ಆಹಾರ ಪದ್ಧತಿ ವಿಶೇಷ ಆಕರ್ಷಣೆ ಇದೆ. ತಮಿಳುನಾಡಿನಲ್ಲಿ 25 ಲಕ್ಷಕ್ಕೂ ಹೆಚ್ಚು ಒಕ್ಕಲಿಗರು ವಾಸವಿದ್ದಾರೆ. ಈ ಬಾರಿ ನಮ್ಮ ಸಮಾವೇಶಕ್ಕೆ 500ಕ್ಕೂ ಹೆಚ್ಚು ಉದ್ಯಮಿಗಳು ತಮಿಳುನಾಡಿನಿಂದ ಆಗಮಿಸಲಿದ್ದಾರೆ ಎಂದರು.

ಮೂರು ದಿನಗಳ ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆ ಇದೆ. ಗಂಗವಾಡಿ-96000 ರಾಜವಂಶದ ಲಾಂಛನವನ್ನು ಸಮಾವೇಶದ ಕೇಂದ್ರ ಆಕರ್ಷಣೆಯಾಗಿ ಬಳಸಿಕೊಳ್ಳಲಾಗಿದೆ. ಉದ್ಯಮ ಕ್ಷೇತ್ರಗಳ ಚಿಂತನ ಮಂಥನ ಸಭೆ ಮತ್ತು ಕೃಷಿ ಆರೋಗ್ಯ ಶಿಕ್ಷಣ ವಿಸ್ತೃತ ಚರ್ಚೆ ನಡೆಯಲಿದೆ. ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸಂಘಟನೆಯ ಸಂದೀಪ್, ಸೌಮ್ಯ ರಮೇಶ್ ಮತ್ತು ಜಯಶೀಲ ಲಿಂಗರಾಜ್, ನಯನ್ ಕುಮಾರ್ ಗೌಡ, ನಾಗರಾಜ್ ಗೌಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply