ಭಾರತ ಸೇವಾ ದಳದ ವತಿಯಿಂದ ಐ.ಎನ್.ಎ.ರಾಮರಾವ್ ಭವನ ನಿರ್ಮಾಣಕ್ಕೆ ಚಿಂತನೆ

4 years ago

ಚಾಮರಾಜನಗರ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಅವಿಸ್ಮರಣೀಯ ಸೇವೆ ಮಾಡಿದ ಚಾಮರಾಜನಗರ ಜಿಲ್ಲೆಯ ಹೆಮ್ಮೆಯ ಸುಪುತ್ರ ರಾಷ್ಟ್ರಪ್ರೇಮಿ ಐ.ಎನ್.ಎ.ರಾಮರಾವ್ ಹೆಸರಿನಲ್ಲಿ ಭವನವೊಂದನ್ನು ನಿರ್ಮಾಣ ಮಾಡಲು ಭಾರತ ಸೇವಾದಳದ ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಲು ಭಾರತ ಸೇವಾದಳ ತಾಲ್ಲೂಕು ಕಾರ್ಯಾಕಾರಿ ಸಮಿತಿಯು ಒಕ್ಕೊರಲಿನ ತಿರ್ಮಾನ ಕೈಗೊಂಡಿದೆ.

ಭಾರತ ಸೇವಾದಳದ ತಾಲ್ಲೂಕು ಮಟ್ಟದ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾರತ ಸೇವಾದಳದ ಅಧ್ಯಕ್ಷ ಸಿ.ಎಂ.ನರಸಿಂಹ ಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾತಾಡಿದ ಸಿ.ಎಂ.ನರಸಿಂಹಮೂರ್ತಿ, ಸುಭಾಷ್ ಚಂದ್ರ ಬೋಸ್ ಅವರ ಶಿಷ್ಯರಾಗಿ ದೇಶ ಸೇವೆಗೆ ಬದುಕು ಮೀಸಲಿಟ್ಟಿದ್ದ ರಾಮರಾವ್ ಅವರ ಆದರ್ಶಗಳನ್ನು ಇಂದಿನ ಯುವಜನತೆಗೆ ತಿಳಿಸುವ ಅವಶ್ಯಕತೆ ಇದೆ. ಅದಕ್ಕಾಗಿ ಅಕ್ಟೋಬರ್ ತಿಂಗಳಿನಲ್ಲಿ ಐ.ಎನ್.ಎ.ರಾಮರಾವ್ಅವರ ಕುರಿತ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲು ಸಭೆ ನಿರ್ಧರಿಸಲಾಗಿದೆ ಎಂದರು.

ಅಕ್ಟೋಬರ್ 2 ಗಾಂಧಿಜಯಂತಿಯಂದು ಕಾಳನಹುಂಡಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಜಾಥಾ, ನವೆಂಬರ್ ತಿಂಗಳಿನಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯು ಸರ್ವಾನುಮತದಿಂದ ಒಪ್ಪಿಗೆ ನೀಡಿತು.

ಸಭೆಯಲ್ಲಿ ವಲಯ ಸಂಘಟಕ ಕೆ.ಈರಯ್ಯ, ಉಪಾಧ್ಯಕ್ಷ ಸಿ.ಮಲ್ಲಿಕಾರ್ಜುನ, ಕಾರ್ಯದರ್ಶಿ ನಾಗರಾಜು, ಖಜಾಂಚಿ ಪ್ರಸಾದ್ ಕಾರ್ಯಕಾರಿ ಸಮಿತಿ ಸದಸ್ಯರಾದ ದೀಪಿಕಾ, ಅಮಿತಾಬಾನು, ಮಹೇಶ್ವರಿ, ಜೋಸೆಫ್ ತಗಡೂರಯ್ಯ ಭಾಗವಹಿಸಿದ್ದರು.

Leave a Reply