ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ನೂತನ ಅಭಿಯಾನ ಆರಂಭಿಸಿದೆ. ಪೇಸಿಎಂ(paycm) ಎಂಬ ಘೋಷಣೆ ಹಾಗು ಕ್ಯೂ ಆರ್ ಕೋಡ್ ನೊಂದಿಗೆ ಭಿತ್ತಿಪತ್ರಗಳನ್ನು ನಗರದ ರಸ್ತೆ ಬಳಿಯ ಗೋಡೆಗಳ ಮೇಲೆ ಅಂಟಿಸುವುದರ ಮೂಲಕ ಅಭಿಯಾನವನ್ನು ಪ್ರಾರಂಭಿಸಿದೆ.
ಬಿಜೆಪಿ ಸರ್ಕಾರವನ್ನು 40% ಕಮಿಷನ್ ಸರ್ಕಾರವೆಂದು ಟೀಕಿಸಿ. ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಉಂಟಾಗುತ್ತಿರುವ ಮೋಸವನ್ನು ಬಯಲು ಮಾಡುವ ಸಲುವಾಗಿ ಕಾಂಗ್ರೇಸ್ ಈ ಅಭಿಯಾನ ಆರಂಭಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಕ್ಯೂ ಆರ್ ಕೋಡ್ ನಲ್ಲಿ ಬಳಸಿರುವುದು ಆಡಳಿತ ಪಕ್ಷದ ನ್ಯೂನತೆಗಳನ್ನು ಹೇಳುವುದರೋಂದಿಗೆ ಸಾರ್ವಜನಿಕರ ಗಮನವನ್ನು ಸೆಳೆಯುತ್ತಿದೆ.




