ರಾಜ್ಯದ 1 ಕೋಟಿ ಮುಸ್ಲಿಮರಿಗೆ ಮತ್ತು ಟಿಪ್ಪು ಅಭಿಮಾನಿಗಳಿಗೆ ದ್ರೋಹ: ಅಪ್ಸರ್ ಕೊಡ್ಲಿಪೇಟೆ

1 year ago

ಕಾಂಗ್ರೆಸ್ ಸರ್ಕಾರದಿಂದ ಶ್ರೀರಂಗಪಟ್ಟಣದಲ್ಲಿ ನವೆಂಬರ್ 10 ರಂದು ನಿಷೇದಾಜ್ಞೆ ಜಾರಿ

ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಂಗಳೂರು ಉತ್ತರ ಜಿಲ್ಲೆಯ ಜಿಲ್ಲಾ ಪ್ರತಿನಿಧಿ ಸಭೆಯು ಟ್ಯಾನರಿ ರಸ್ತೆಯಲ್ಲಿರುವ ಹೆಚ್.ಎ.ಕನ್ವೆನ್ಶನ್ ಹಾಲ್ ನಲ್ಲಿ ನಡೆಯಿತು. 

ಜಿಲ್ಲೆಯಿಂದ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಭಾಗವಹಿಸಲು ಕೌನ್ಸಿಲರ್ ಆಯ್ಕೆ ಪ್ರಕ್ರಿಯೆಯನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಚುನಾವಣಾಧಿಕಾರಿ ಅಪ್ಸರ್ ಕೊಡ್ಲಿಪೇಟೆ ನಡೆಸಿಕೊಟ್ಟರು.

ಜಿಲ್ಲಾ ಸಮಿತಿಯಿಂದ ರಾಜ್ಯ ಪ್ರತಿನಿಧಿ ಸಭೆಗೆ ಒಬ್ಬ ಕೌನ್ಸಿಲರ್ ಆಯ್ಕೆ ಪ್ರಕ್ರಿಯೆಯನ್ನು ಚುನಾವಣೆಯ ಮೂಲಕ ನಡೆಸಲಾಯಿತು.

ಉದ್ಘಾಟನಾ ಭಾಷಣ ಮಾಡಿದ ಅಫ್ಸರ್ ಕೊಡ್ಲಿಪೇಟೆ ‘ಮೈಸೂರು ಹುಲಿ’ ಎಂದು ಪ್ರಸಿದ್ಧವಾದ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯೆಂದು ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮುಸ್ಲಿಂ ವಿರೋಧಿ ಮತ್ತು ಟಿಪ್ಪು ಸುಲ್ತಾನ್ ವಿರೋಧಿ ಅನ್ನುವುದನ್ನು ಮತ್ತೊಮ್ಮೆ ಸಾಬೀತುಮಾಡಿದೆ. ನವೆಂಬರ್ 10 ರಂದು, ಟಿಪ್ಪು ಜಯಂತಿ, ಟಿಪ್ಪು ಸುಲ್ತಾನ್ ಅಭಿಮಾನಿಗಳು, ಟಿಪ್ಪು ಸುಲ್ತಾನ್ ಸಮಾಧಿ ಸ್ಥಳಕ್ಕೆ ಮೆರವಣಿಗೆ ಬರುವುದು, ಗೌರವ ಸಲ್ಲಿಸುವುದು ನೂರಾರು ವರ್ಷಗಳ ವಾಡಿಕೆ. ಆದರೆ ಕಾಂಗ್ರೆಸ್ ಸರ್ಕಾರ, ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ರಾಜ್ಯದ 1 ಕೋಟಿ ಮುಸ್ಲಿಮರಿಗೆ ಮತ್ತು ಟಿಪ್ಪು ಅಭಿಮಾನಿಗಳಿಗೆ ಮಾಡಿರುವ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಮದ್ರಸಗಳ ವಿವರ/ವ್ಯವಸ್ಥಾಪಕರ ಹಿನ್ನೆಲೆ ಕೇಳಿ ಪೊಲೀಸ್ ಇಲಾಖೆ ಮುಖಾಂತರ ನೋಟೀಸ್ ಜಾರಿ ಮಾಡಲು ನಿರ್ದೇಶನ ನೀಡಿರುವುದು ಖಂಡನೀಯ. ತಕ್ಷಣವೇ ಈ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ವಕೀಲ ವಸೀಮ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಕೀಲ್ ಭಾಷಾ, ಜಿಲ್ಲಾ ಕಾರ್ಯದರ್ಶಿ ಮುಸ್ತಾಕ್ ಅಹ್ಮದ್ ಖಾನ್ ಜಿಲ್ಲಾ ನಾಯಕರಾದ ಮುಜಮ್ಮಿಲ್ ಅಹ್ಮದ್ ಮೊಹಮ್ಮದ್ ಇಸ್ಮಾಯಿಲ್, ಸೈಯದ್ ಮಸೂದ್, ಆದಮ್, ಸಾದಿಕ್ ಹೆಬ್ಬಾಳ್, ವಿಮೆನ್ ಇಂಡಿಯಾ ಮೂಮೆಂಟ್ ನ ಜಿಲ್ಲಾಧ್ಯೆಕ್ಷೆ ಸೈಯೀದಾ ಸೇರಿದಂತೆ ವಿವಿಧ ವಾರ್ಡ್ ನಾಯಕರುಗಳು ಹಾಜರಿದ್ದರು.

Leave a Reply