ಹಾವೇರಿ: ಬ್ಯಾಡಗಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ಬ್ಯಾಡಗಿ ತಾಲೂಕು ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಪ್ರಕಾಶ ಬ ಬಣಕಾರ, ಎಸ್.ಆರ್.ಪಾಟೀಲ ಅಭಿಮಾನಿ ಬಳಗದ ವತಿಯಿಂದ ಸತೀಶ ಜಾರಕಿಹೊಳಿಯವರ ಮೂಢನಂಬಿಕೆಯ ವಿರುದ್ಧ ನಾಗರ ಪಂಚಮಿ ಹಬ್ಬಕ್ಕೆ ಕರೆಕೊಟ್ಟಿದ್ದಕ್ಕೆ ಪೂರಕವಾಗಿ ಕಲ್ಲಿಗೆ ಹಾಲು ಎರೆಯುವ ಬದಲು ಬಡವರಿಗೆ, ನಿರ್ಗತಿಕರಿಗೆ ಹಾಲು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಆರ್.ಪಾಟೀಲ, ಮಂಜುನಾಥ ಭೋವಿ, ಪ್ರಕಾಶ ಬಣಕಾರ, ಪರಶುರಾಮ ಗೆಜ್ಜಳ್ಳಿ, ಮಹೇಶ ಉಜನಿ, ರಮೇಶ ಮೊಟೇಬೆನ್ನೂರ, ರಾಜು ಶಿಗ್ಲಿ, ಯೂನಿಸಖಾನ ಸವಣೂರು, ಸೋಮಣ್ಣ ಕರ್ಚಡ, ಶಿವಣ್ಣ ಅಂಬ್ಲಿ, ರಫೀಕ್ ಮುದಗಲ್, ನಜೀರ ಶೇಖ್, ಮಂಗಳಾ ಗೆಜ್ಜಳ್ಳಿ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.



