ಪಿ.ಸಿ.ಓ.ಡಿ. ಸಮಸ್ಯೆಗೆ ಉಚಿತ ಸಲಹೆ ಮತ್ತು ಶಿಬಿರ

5 years ago

ಮೈಸೂರು: ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ 2021ರ ಆಗಸ್ಟ್ 13 ರಿಂದ ಸೆಪ್ಟೆಂಬರ್ 30 ವರೆಗೆ ಪಿ.ಸಿ.ಒ.ಡಿ. ಸಮಸ್ಯೆಗೆ ಉಚಿತ ಸಲಹೆ ಮತ್ತು ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿರುವ ಸ್ತ್ರೀಯರ ಪಿಸಿಓಡಿ ಜೀವನ ಶೈಲಿ, ಆಹಾರ ವಿಧಿ, ಮಾಡಬಹುದಾದ ಯೋಗಾಸನಗಳು ಹಾಗೂ ಪಿಸಿಓಡಿಯಲ್ಲಿ ಕಂಡುಬರುವ ತೊಂದರೆಗಳು ಮತ್ತು ಅವುಗಳಿಗೆ ಪರಿಹಾರವನ್ನು ತಿಳಿಸಲಾಗುತ್ತದೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 7829408000, 9481209047ಅನ್ನು ಹಾಗೂ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ಡಾ. ಸುನೀತಾ ಸಿದ್ದೇಶ್ ಹಾಗೂ ಸರ್ಕಾರಿ ವೈದ್ಯಕೀಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಎನ್. ಕವಿತಾ ಅವರನ್ನು ಕೆಲಸದ ದಿನಗಳಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಸಂಪರ್ಕಿಸಬಹುದು.

Leave a Reply