ಬೆಂಗಳೂರು/ಹಾಸನ: ಉದ್ಯೋಗ ಸೇರಿದಂತೆ ವಿವಿಧ ಕಾರಣಕ್ಕಾಗಿ ಬಾಂಗ್ಲಾದೇಶದ ವಲಸಿಗರು ಅಕ್ರಮವಾಗಿ ದೇಶದೊಳಗೆ ನುಸುಳಿ ರಾಜ್ಯದ ಕೆಲವು ಕಡೆ ನೆಲೆಸಿರುವ ಬಗ್ಗೆ ಮಾಹಿತಿಗಳು ಹೊರಬಂದಿದ್ದು ಆತಂಕ ಮೂಡಿಸಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಅದರಲ್ಲೂ ಕಾಫಿ ತೋಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ವಲಸೆಗರು ಕೂಲಿ ಕಾರ್ಮಿಕರಾಗಿ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಗುಪ್ತದಳವನ್ನು ತಲುಪಿದೆ.
ಅದರಂತೆ ಹಾಸನದಲ್ಲಿ ಆಸ್ಸಾಂ ರಾಜ್ಯದ ಮೂಲದವರೆಂದು ಹೇಳಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಜಿಲ್ಲೆಯಲ್ಲಿ ನೆಲೆಸಿರುವ ಸಂಬಂಧ ಪೊಲೀಸರು ಮಾಹಿತಿ ಕಲೆ ಕಲೆಹಾಕುತ್ತಿದ್ದಾರೆ.
ಕೂಲಿ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರು ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ನೆಲಸಿದ್ದಾರೆ. ಅರಕಲಗೂಡು ತಾಲೂಕಿನ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾವು ಅಸ್ಸಾಂ ಮೂಲದವರೆಂದು ನಕಲಿ ಆಧಾರ್ ಕಾರ್ಡ್ ತೋರಿಸಿ, ವಿವಿಧೆಡೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ, ಕೆಲ ಮಾಲೀಕರು ಯಾವುದೇ ದಾಖಲೆ ಪರಿಶೀಲನೆ ಮಾಡದೆ ಕಾರ್ಮಿಕರ ಅನಿವಾರ್ಯತೆ ಹೆಸರಿನಲ್ಲಿ ಕೆಲಸ ನೀಡುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ಉದ್ಭವಿಸಿದೆ. ಹೀಗಾಗಿ, ಕೆಲ ಏಜೆಂಟರು ಬಾಂಗ್ಲಾದೇಶದ ಜನರನ್ನು ಕರೆತಂದು, ಇಲ್ಲಿ, ಅವರ ಹೆಸರಿನಲ್ಲಿ ಆಸ್ಸಾಂ ರಾಜ್ಯದ ನಿವಾಸಿ ಅಂತ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾರೆ. 5 ರಿಂದ 10 ಸಾವಿರ ಹಣ ಪಡೆದು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡುತ್ತಿರುದ್ದಾರೆ. ಈ ನಕಲಿ ಆಧಾರ್ ಕಾರ್ಡ್ ಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲೇ ವಿತರಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಕಲಿ ದಾಖಲೆ ಮೂಲಕ ಅಕ್ರಮವಾಗಿ ವಲಸಿಗರು ಬರುತ್ತಿರುವ ಬಗ್ಗೆ ಬೆಂಗಳೂರು ವಿಭಾಗದ ಆಧಾರ್ ವಿತರಣೆ ಸಂಸ್ಥೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಅಧಿಕಾರಿಗಳು ಪರಿಶೀಲನೆಗೆ ಇಳಿದರು. ಪರಿಶೀಲನೆ ವೇಳೆ ಒಂದೇ ದಾಖಲೆ ಬಳಸಿ ದಿನಾಂಕ, ಹೆಸರು ತಿದ್ದಿ ಹತ್ತಾರು ಆಧಾರ್ ಕಾರ್ಡ್ ವಿತರಣೆ ಮಾಡಲಾಗಿದೆ. ಆಧಾರ್ ಕಾರ್ಡ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಯಾವುದೇ ಮಾಹಿತಿ ದೊರೆಯದಿದ್ದಾಗ ಅನುಮಾನ ಗಾಢವಾಗಿದೆ. ಗಂಡು, ಹೆಣ್ಣು ಕಲಂನಲ್ಲೂ ತಪ್ಪು ಮಾಹಿತಿಗಳು ನಮೂದಿಸಿರುವುದು ಬಯಲಾಗಿದೆ.
ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಅನುಶ್ರೀಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.




