ಭಾರತೀಯ ಸಂವಿಧಾನದ ಅನುಚ್ಛೇದ 25 ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಖಾತರಿಪಡಿಸುತ್ತದೆ. ಇದು ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡಿದೆ. ಈ ಅನುಚ್ಛೇದದ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ವಿಧಿಸಲಾದ ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಇದರರ್ಥ ವ್ಯಕ್ತಿಗಳು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದರೂ, ಅದು ಸಮಾಜದ ಸಾಮರಸ್ಯವನ್ನು ಭಂಗಗೊಳಿಸಬಾರದು ಅಥವಾ ಇತರರ ಶಾಂತಿ-ಸಾಮರಸ್ಯವನ್ನು ಉಲ್ಲಂಘಿಸಬಾರದು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಸಂವಿಧಾನದ ಈ ಹಕ್ಕು ವೈಯುಕ್ತಿಕ ನೆಲೆಯಲ್ಲಿ ಮೂಲಭೂತ ಹಕ್ಕಾಗಿದ್ದು , ವ್ಯಕ್ತಿಗಳು ತಮ್ಮ ತಮ್ಮ ಮನೆಯಲ್ಲಿ ಅಥವಾ ಕುಟುಂಬದಲ್ಲಿ ಅಥವಾ ತಮ್ಮ ಖಾಸಗಿ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ ಮತ್ತು ದೇವರ ಪೂಜೆಯನ್ನು ಮಾಡಿಕೊಳ್ಳುವ ಮೂಲಕ ತಮ್ಮ ಮೂಲಭೂತ ಹಕ್ಕನ್ನು ಅನುಭವಿಸಲು ಸರ್ವಸ್ವತಂತ್ರರಿದ್ದಾರೆ. ಆದರೆ, ಸರ್ಕಾರಿ ಕಛೇರಿಗಳಲ್ಲಿ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಅಥವಾ ಇತರೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ದೇವರ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸುವುದು ಸಂವಿಧಾನದ ಮತಧರ್ಮ ನಿರಪೇಕ್ಷ (Secular) ತತ್ವಕ್ಕೆ ವಿರುದ್ಧವಾಗಿದ್ದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ.
ಈ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ರವರು ತಮ್ಮ ಕಚೇರಿಯಲ್ಲಿ ಗಣೇಶ ಪ್ರತಿಮೆ ಸ್ಥಾಪಿಸಿ ಪೂಜಿಸಿದ ನಡೆ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವಂತಹದ್ದಾಗಿದೆ. ಅವರ ಸದುದ್ದೇಶ ಏನೇ ಇದ್ದರೂ, ಸರ್ಕಾರಿ ಕಚೇರಿಗಳು ಮತಧರ್ಮಗಳ ಆಚರಣೆ ಹಾಗು ಪೂಜೆಯ ಕೇಂದ್ರಗಳಲ್ಲ. ಅಲ್ಲಿ ಒಂದು ನಿರ್ದಿಷ್ಟ ಧರ್ಮದ ದೇವರ ಪ್ರತಿಮೆಗಳನ್ನು ಸ್ಥಾಪಿಸುವುದು ಭಾರತದ ಮತಧರ್ಮ ನಿರಪೇಕ್ಷ ರೂಪಿ ಸೆಕ್ಯುಲಾರ್ ಆಶಯಗಳಿಗೆ ಭಂಗ ತರುತ್ತದೆ.
ಒಬ್ಬ ಸರ್ಕಾರಿ ಅಧಿಕಾರಿ ಅಥವಾ ನೌಕರ ಸರ್ಕಾರಿ ಕಚೇರಿಯಲ್ಲಿ ಒಂದು ನಿರ್ದಿಷ್ಟ ಧರ್ಮದ ಪ್ರತಿಮೆ ಸ್ಥಾಪಿಸುವುದು ಸಂವಿಧಾನದ ಬಹು ಧರ್ಮೀಯ ಮತ್ತು ಬಹು-ಸಂಸ್ಕೃತಿಯ ತತ್ವಕ್ಕೆ ವಿರುದ್ಧವಾಗಿದ್ದು ಎಲ್ಲಾ ಭಾರತೀಯರು ಹಿಂದೂಗಳೇ ಎಂಬ ಹಿಂದೂತ್ವವಾದಿಗಳ ಪ್ರಚಾರಕ್ಕೆ ಅಧಿಕೃತ ಮಾನ್ಯತೆ ತಂದುಕೊಂಡುತ್ತದೆ. ಈ ಎಲ್ಲಾ ಕಾರಣದಿಂದ, ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ರವರ ನಡೆ ಸದುದ್ದೇಶವೇ ಆಗಿದ್ದರೂ, ದೇಶದ ಸಂವಿಧಾನಕ್ಕೆ ವಿರುದ್ಧವಾಗಿದ್ದು ಅದು ಖಂಡನೀಯ.
ಈ ಹಿನ್ನೆಲೆಯಲ್ಲಿ, ಸಂವಿಧಾನದಲ್ಲಿ ಮೌಲ್ಯಗಳನ್ನು ಸಾಧಿಸುವತ್ತ ಮೊದಲ ಹೆಜ್ಜೆಯಾಗಿ, ಎಲ್ಲಾ ಸರ್ಕಾರಿ ಕಛೇರಿ ಮತ್ತು ಶಾಲಾ-ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಧಾರ್ಮಿಕ ಪೂಜೆ, ದೇವರ ಫೋಟೋಗಳು ಅಥವಾ ಧಾರ್ಮಿಕ ಘೋಷಣೆಗಳ ಪ್ರದರ್ಶನವನ್ನು ನಿಷೇಧಿಸುವ ಬಗ್ಗೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ .
ತಮ್ಮ ವಿಶ್ವಾಸಿಗಳು,
ಪ್ರೊ. ವಿ ಪಿ ನಿರಂಜನಾರಾಧ್ಯ ಬೆಂಗಳೂರ
ಬಸವರಾಜ ಸೂಳಿಭಾವಿ ಗದಗ
ಮೂಡ್ನಾಕೂಡ ಚಿನ್ನಸ್ವಾಮಿ ಬೆಂಗಳೂರ
ರಂಜಾನ ದರ್ಗಾ ಧಾರವಾಡ
ಕೆ. ಶ್ರೀನಾಥ ಬೆಂಗಳೂರ
ಆರ್ ಎಚ್ ನಟರಾಜ ಬೆಂಗಳೂರ
ಬಿ. ಸುರೇಶ ಬೆಂಗಳೂರ
ಶ್ರೀಪಾದ ಭಟ್ ಮೈಸೂರ
ಡಾ. ಎಚ್ ಎಸ್ ಅನುಪಮಾ ಕವಲಕ್ಕಿ
ಶಿವಸುಂದರ ಬೆಂಗಳೂರ
ಸನತಕುಮಾರ ಬೆಳಗಲಿ ಧಾರವಾಡ
ಡಾ. ಜಿ ವಿ ಆನಂದ ಮೂರ್ತಿ ತುಮಕೂರ
ಡಾ. ಸಬಿಹಾ ಭೂಮಿಗೌಡ ಮೈಸೂರ
ಶ್ರೀಪಾದ ಭಟ್ ಬೆಂಗಳೂರ
ಹರೀಶ ಗಂಗಾಧರ ಬೆಂಗಳೂರ
ಡಾ. ರತಿರಾವ್ ಮೈಸೂರ
ಬೊಳುವಾರು ಮಹಮದ್ ಕುಂಞಿ ಬೆಂಗಳೂರ
ಡಾ. ವಿಜಯಾ ಬೆಂಗಳೂರ
ಇಂದಿರಾ ಕೃಷ್ಣಪ್ಪ ಬೆಂಗಳೂರ
ಡಾ. ಸುಶಿ ಕಾಡನಕುಪ್ಪೆ ಬೆಂಗಳೂರ
ಡಾ. ವಸುಂಧರ ಭೂಪತಿ ಬೆಂಗಳೂರ
ಲಕ್ಷ್ಮಣ ಕೊಡಸೆ ಬೆಂಗಳೂರ
ಅನಿಲ ಹೊಸಮನಿ ವಿಜಯಪುರ
ನಗರಗೆರೆ ರಮೇಶ ಬೆಂಗಳೂರ
ಇಂದಿರಾ ಹೆಗ್ಗಡೆ ಬೆಂಗಳೂರ
ಎಂ.ಅಬ್ದುಲ್ ರೆಹಮಾನ್ ಪಾಷ ಬೆಂಗಳೂರ
ಜಿ ಪಿ ಬಸವರಾಜು ಮೈಸೂರ
ಕೆ ಪಿ ನಟರಾಜ ಮಧುಗಿರಿ
ಮಲ್ಲಿಗೆ ಸಿರಿಮನೆ ಬೆಂಗಳೂರ
ತುಕಾರಾಮ ಮೈಸೂರ
ತ್ವಯ್ಯಿಬ್ ಮಂಗಳೂರು
ಭೀಮನಗೌಡ ಪರಗೊಂಡ ಅಥಣಿ
ಕೆ. ಶಶಿಕಾಂತ ಲಿಂಗಸುಗೂರ
ಮುತ್ತು ಬಿಳೇಯಲಿ ಗದಗ
ವಿಜಯಕಾಂತ ಪಾಟೀಲ ಹಾನಗಲ್ಲ
ಭಾರತಿ ಮೂಲಿಮನಿ ಹೊಸಪೇಟೆ
ಪ್ರಿಯಾಂಕ ಮಾವಿನಕರ ಕಲ್ಬುರ್ಗಿ
ಸವಿರಾಜ ಆನಂದೂರ ಬೆಂಗಳೂರ
ದಾದಾಪೀರ್ ನವಿಲೇಹಾಳ್ ದಾವಣಗೆರೆ
ಎಸ್ ಎಂ ಶಿವಕುಮಾರ ಶ್ರೀರಂಗಪಟ್ಟಣ
ಶಿವನಕೆರೆ ಬಸವಲಿಂಗಪ್ಪ ದಾವಣಗೆರೆ
ಸತ್ಯಾ ಎಸ್, ಬೆಂಗಳೂರು.
ಡಾ.ವೆಂಕಟಯ್ಯ ಅಪ್ಪಗೆರೆ ಬಳ್ಳಾರಿ,
ಟಿ.ಕೆ.ಗಂಗಾಧರ ಪತ್ತಾರ ಬಳ್ಳಾರಿ,
ಶಂಕರ ಪಾಟೀಲ ಕಲಬುರ್ಗಿ
ಡಾ. ಸಂಜ್ಯೋತಿ ವಿ ಕೆ ಬೆಂಗಳೂರ
ಮೋಹನರಾಮ ಎನ್ ಕೆ ಬೆಂಗಳೂರ
ಸಿ ಎಂ ಅಂಗಡಿ ದೆಹಲಿ
ಎಂ ನಾಗರಾಜ ಶೆಟ್ಟಿ ಬೆಂಗಳೂರ
ಡಿ ರಾಮಪ್ಪ ಕುಂಬಾರಗೇರಿ ಅಂಕೋಲ
ಎನ್ ಎಸ್ ವೇಣುಗೋಪಾಲ ಮೈಸೂರ
ಮಲ್ಲಮ್ಮ ಯಾಳವಾರ ವಿಜಯಪುರ
ಎಂ ಕೆ ಸಾಹೇಬ ಕೊಪ್ಪಳ
ನಾಗರಾಜ ಹರಪನಹಳ್ಳಿ ಕುಮಟಾ
ಯಡೂರ ಮಹಾಬಲ ಬೆಂಗಳೂರ
ಪೃಥ್ವಿರಾಜ್ ಬಿ ಎಲ್ ಮಂಡ್ಯ
ಗಂಗಾಧರ ಹಿರೇಗುತ್ತಿ ಕಾರವಾರ
ಎಂ ಧರ್ಮರಾಜ ಕಲ್ಯಾಣಿ ಬೆಂಗಳೂರ
ಡಾ. ಪ್ರದೀಪ್ ಮಾಲ್ಗುಡಿ, ಘಟಪ್ರಭಾ
ಸಿ. ಎಸ್. ಭೀಮರಾಯ ಕಲಬುರ್ಗಿ
ವಿಶಾಲ ಮ್ಯಾಸರ ಹೊಸಪೇಟೆ
ಶರಣಪ್ಪ ಬಾಚಲಾಪುರ ಕೊಪ್ಪಳ
ಸಿದ್ದಾರ್ಥ ಸಿಂಗೆ ಅಥಣಿ
ಟಿ ರತ್ನಾಕರ ಕುಕನೂರ
ಎನ್ ಬಷಿರುದ್ದಿನ್ ಸೇಡಂ
ಡಾ. ಪ್ರತಾಪ ಸಿಂಗ್ ತಿವಾರಿ ಕಲಬುರ್ಗಿ
ಡಾ. ಟಿ. ಶ್ರೀನಿವಾಸ ರೆಡ್ಡಿ. ಬೆಂಗಳೂರು
ಜೆ ಎಂ ವೀರಸಂಗಯ್ಯ ಹ ಬೋ ಹಳ್ಳಿ
ಶ್ರೀಶೈಲ್ ಮಾಡ್ಯಾಳ ಆಳಂದ
ಮಮತಾರಾಣಿ ಎ ಎಸ್ ಅರಸೀಕೆರೆ
ಪ್ರೊ. ಎಸ್. ಜಿ. ಚಿಕ್ಕನರಗುಂದ ರಾಮದುರ್ಗ
ಕೆ.ವೆಂಕಟರಾಜು ಚಾಮರಾಜನಗರ
ಅಚುಶ್ರೀ ಬಾಂಗೇರು, ದ.ಕ. ಮಂಗಳೂರು
ಶ್ರೀಧರ ನಾಯಕ ಶಿರಸಿ
ಕ. ಮ. ರವಿಶಂಕರ, ಚಿತ್ರದುರ್ಗ
ಎಸ್ ಎ ಗಫಾರ ಕೊಪ್ಪಳ
ಸಯ್ಯದ್ ಅಹಮ್ಮದ ಖಾನ ತುಮಕೂರ
ಮಂಗಳಾ ಆರ್ ಮೈಸೂರ
ಗುರುಪ್ರಸಾದ್.M.C ಚನ್ನಪಟ್ಟಣ
ಕೆ. ಬಿ. ಲಿಂಗನಗೌಡ ಸಿದ್ದಾಪುರ
ಎಂ.ಶಿವಕುಮಾರ ಮೈಸೂರು
ನೂರ ಜಹಾನ್ ಹೊಸಪೇಟೆ
ನಿಂಗಜ್ಜ ಚೌದರಿ ಕೊಪ್ಪಳ
ಕುಮಾರ ಆರ್ ಮುಂಡಗೋಡ
ಜೆ ಮಹಾದೇವ ಹುಣಸೂರ
ಅಶ್ವಜೀತ ದಂಡಿನ ಬೀದರ
ಎಸ್ ಪ್ರಭಾಕರ ಚಾಮರಾಜಪೇಟೆ
ಚಳ್ಳಕೆರೆ ಬಸವರಾಜ.
ದೃವ ಪಾಟೀಲ ಹಂಪಿ
ಶ್ರೀನಿವಾಸ ಎನ್ ಚಿಂತಾಮಣಿ
ತನ್ವಿರ್ ಪಾಷಾ ಎಂ ಬೆಂಗಳೂರ
ಕೆ ರಾಮರಡ್ಡಿ ಧಾರವಾಡ
ಶಿವಕುಮಾರ ಬಂಡೋಳಿˌಹುಣಸಗಿ
ಹರಾಲು ಕೊಟ್ರೇಶ್ ಚನ್ನಳ್ಳಿ
ತೇಜಸ್ವಿ ಬಿ.ನಾಯ್ಕ, ಗೋಕರ್ಣ
ಚಂದ್ರಪ್ರಭ ಕಠಾರಿ ಬೆಂಗಳೂರ
ಎರ್ರೆಮ್ಮ ಬಳ್ಳಾರಿ
ಜಿ ಮೂರ್ತಿ ಬಾಗೇಪಲ್ಲಿ
ನಾಗರಾಜು ಸಬ್ಬನಹಳ್ಳಿ ಮಂಡ್ಯ
ತ್ರೀಭುವನೇಶ್ವರಿ ಗೌರಿಬಿದನೂರ
ಸೂರ್ಯ ನಂದನ ಮ ವೆಂ ಚನ್ನಪಟ್ಟಣ
ಶಂಕರಪುರ ಸುರೇಶ್ ನಂಜನಗೂಡು,
ಶಿವಕುಮಾರ್ ಗುಲಘಟ್ಟ
ಡಾ. ಮಲ್ಲೇಶ್ ನಾಯಕ. ರಾಯಚೂರು
ಕೇಶವ ಕಟ್ಟೀಮನಿ ಬಾಲೇಹೊಸೂರ
ಬಿ.ಸಿದ್ದಪ್ಪ, ಹಿರಿಯೂರು.
ಚಿದಾನಂದ ಪೋಳ ವಿಜಯಪುರ
ಡಿ. ಎಂ. ಬಡಿಗೇರ ಕೊಪ್ಪಳ
ಮಲ್ಲಯ್ಯ ಕಮತಗಿ ಶೋರಾಪುರ
ದಿನೇಶ ಪಟವರ್ಧನ ಚಿಕ್ಕಮಗಳೂರ
ಕಾಶಪ್ಪ ಚಲವಾದಿ ಕೊಪ್ಪಳ
ಬಸವರಾಜ ಶೀಲವಂತರ ಬಾಗ್ಯನಗರ
ವೆಂಕಟೇಶ ಎಸ್ ಎಂ ಮಾಲೂರ
ವೆಂಕಟೇಶ ಎಸ್ ಎಸ್ ದಾಬಸಪೇಟೆ
ಗೀತಾ ಸುರತ್ಕಲ್
ಲಕ್ಷ್ಮೀನಾರಾಯಣ ಬಾಗೇಪಲ್ಲಿ
ಕೆ ಎಸ್ ಪಾರ್ಥಸಾರಥಿ ಬೆಂಗಳೂರ
ಮಲ್ಲೇಶಪ್ಪ ಕೊಂಡಜ್ಜಿ ಮೈಸೂರ




