ಶಿವಮೊಗ್ಗ: ಶಿವಮೊಗ್ಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ/ ಕಾಲೇಜುಗಳಿಗೆ ಹಾಗೂ ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಉಪನ್ಯಾಸಕರು/ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಸತಿ ಶಾಲೆ/ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ವಿವರ; ಕನ್ನಡ ಭಾಷಾ ಶಿಕ್ಷಕರು-7, ಇಂಗ್ಲೀಷ್ ಭಾಷಾ ಶಿಕ್ಷಕರು-9, ಹಿಂದಿ ಭಾಷಾ ಶಿಕ್ಷಕರು-4, ಉರ್ದು ಭಾಷಾ ಶಿಕ್ಷಕರು-2, ಗಣಿತ ಶಿಕ್ಷಕರು-4, ಸಾಮಾನ್ಯ ವಿಜ್ಞಾನ ಶಿಕ್ಷಕರು-4, ಸಮಾಜ ವಿಜ್ಞಾನ ಶಿಕ್ಷಕರು-8, ಗಣಕಯಂತ್ರ ಶಿಕ್ಷಕರು-2, ದೈಹಿಕ ಶಿಕ್ಷಣ ಶಿಕ್ಷಕರು-2 ಒಟ್ಟು-42 ಅತಿಥಿ ಶಿಕ್ಷಕರು.
ವಸತಿ ಶಾಲೆ/ಮೌಲಾನಾ ಆಜಾದ್ ಮಾದರಿ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ವಿವರ; ಕನ್ನಡ ಭಾಷಾ ಶಿಕ್ಷಕರು-3, ಇಂಗ್ಲೀಷ್ ಭಾಷಾ ಶಿಕ್ಷಕರು-3, ಉರ್ದು ಭಾಷಾ ಶಿಕ್ಷಕರು-3, ಗಣಿತ ಶಿಕ್ಷಕರು-3, ಭೌತಶಾಸ್ತ್ರ ಉಪನ್ಯಾಸಕರು-3, ರಸಾಯನಶಾಸ್ತ್ರ ಉಪನ್ಯಾಸಕರು-3, ಜೀವಶಾಸ್ತ್ರ ಉಪನ್ಯಾಸಕರು-3, ವ್ಯವಹಾರ ಅಧ್ಯಯನ ಉಪನ್ಯಾಸಕರು-1, ಲೆಕ್ಕಶಾಸ್ತ್ರ ಉಪನ್ಯಾಸಕರು -2, ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರು-1, ಅರ್ಥಶಾಸ್ತ್ರ ಉಪನ್ಯಾಸಕರು-1, ಇತಿಹಾಸ ಉಪನ್ಯಾಸಕರು-1 ಒಟ್ಟು 27 ಉಪನ್ಯಾಸಕರು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ ಹಾಗೂ ಎಲ್ಲಾ ತಾಲೂಕು ಮಾಹಿತಿ ಕೇಂದ್ರ ಕಚೇರಿಗಳಲ್ಲಿ ಅಥವಾ ವೆಬ್ಸೈಟ್ https://dom.karnataka.gov.in ರಿಂದ ಪಡೆದು, ಮೇ 19 ರೊಳಗಾಗಿ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಾದ ಶಿವಮೊಗ್ಗ –7676888388, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಸೊರಬ-9513815513, ಶಿಕಾರಿಪುರ-7829136724, ಹೊಸನಗರ-9008447029 ಹಾಗೂ ಸಾಗರ-7338222907 ಗಳನ್ನು ಸಂಪರ್ಕಿಸಬಹುದು.




