ಚಿತ್ರದುರ್ಗ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 2025-6ನೇ ಸಾಲಿನ ಒಂದು ವರ್ಷದ ಅವಧಿಗೆ ಹಿರಿಯೂರು ತಾಲ್ಲೂಕು ದೇವರಕೊಟ್ಟದಲ್ಲಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಖಾಲಿ ಇರುವ ಗುತ್ತಿಗೆ ಆಧಾರದ ಮೇರೆಗೆ ಅತಿಥಿ ಶಿಕ್ಷಕರು ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನವನ್ನು ಮಾ. 08 ರಂದು ದೇವರಕೊಟ್ಟದಲ್ಲಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಏರ್ಪಡಿಸಲಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ತರಬೇತಿ ಪಡೆದ ಪದವೀಧರ ಶಿಕ್ಷಕರ ಹುದ್ದೆಗಳಲ್ಲಿ ಇಂಗ್ಲೀಷ್, ಕನ್ನಡ, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಂಗೀತ, ಕ್ರೀಡಾ ತರಬೇತುದಾರ (ಹೆಣ್ಣು), ಕಲೆ. ಸ್ನಾತಕೋತ್ತರ ಪದವೀಧರ ಶಿಕ್ಷಕರ ಹುದ್ದೆಗಳಲ್ಲಿ ಇಂಗ್ಲೀಷ್, ಭೌತಶಾಸ್ತ್ರ, ಕನ್ನಡ, ಗಣಿತ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ, ಕಂಪ್ಯೂಟರ್ ವಿಜ್ಞಾನ ವಿಷಯಗಳ ಶಿಕ್ಷಕರು. ವಸತಿ ನಿಲಯ ಮೇಲ್ವಿಚಾರಕರು (ಮಹಿಳೆ) ಕೌನ್ಸಿಲರ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಪ್ರತಿ ವಿಷಯಕ್ಕೆ ಒಂದು ಹುದ್ದೆ ಮಾತ್ರ ಲಭ್ಯವಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ವಸತಿ ಶಾಲೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಮೂಲ ಪ್ರಮಾಣ ಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು ಮತ್ತು ಪ್ರಮಾಣ ಪತ್ರಗಳ ಒಂದು ಸೆಟ್ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಮತ್ತು ಒಂದು ಪಾಸ್‍ಪೋರ್ಟ್ ಭಾವಚಿತ್ರವನ್ನು ಮಾ. 06 ರಂದು ಅಥವಾ ಮೊದಲು ಸಲ್ಲಿಸಬೇಕು.
ಅತಿಥಿ ಶಿಕ್ಷಕರಿಗೆ ಉಪನ್ಯಾಸ, ಅವಧಿ ಆಧಾರದಲ್ಲಿ ಪಾವತಿಸಲಾಗುವುದು. ಬೆಳಿಗ್ಗೆ 09 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ನೊಂದಣಿ ಮಾಡಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗೆ 9744109555 ಅಥವಾ 7892898796 ಕ್ಕೆ ಸಂಪರ್ಕಿಸಬಹುದು.




