ವಿಶೇಷಚೇತನರ ಡಿಪ್ಲೊಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

11 months ago

ಶಿವಮೊಗ್ಗ: ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ವತಿಯಿಂದ 2025-26ನೇ ಸಾಲಿನ ಮೂರು ವರ್ಷಗಳ ಅವಧಿಯ ಡಿಪ್ಲೊಮಾ ಕೋರ್ಸ್ ಗಳ ಪ್ರವೇಶಕ್ಕೆ ಅಖಿಲ ಭಾರತ ಮಟ್ಟದಲ್ಲಿ ವಿಶೇಷಚೇತನ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅನುದಾನಿತ ಕೋರ್ಸ್ ಗಳಾದ ಆರ್ಕಿಟೆಕ್ಚರ್ ಅಸಿಸ್ಟೆಂಟ್ಷಿಪ್, ಕಮರ್ಷಿಯಲ್ ಪ್ರಾಕ್ಟಿಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಹಾಗೂ ಅನುದಾನ ರಹಿತ ಕೋರ್ಸ್ ಗಳಾದ ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್(ಫಾರ್ ವಿಜ್ಯುವಲಿ ಇಂಪರ್ಡ್), ಅಪಾರೇಲ್ ಡಿಸೈನ್ ಅಂಡ್ ಫ್ಯಾಬ್ರಿಕೇಷನ್ ಟೆಕ್ನಾಲಜಿ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಂಡ್ ಎಲೆಕ್ಟ್ರಿಕ್  ವೇಹಿಕಲ್ ಟೆಕ್ನಾಲಜಿ ಕೋರ್ಸ್ ಗಳು ಲಭ್ಯವಿದೆ.

ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿದ್ಯಾರ್ಥಿವೇತನದ ಆರ್ಥಿಕ ಸಹಾಯ ದೊರೆಯುತ್ತದೆ. ಪಾಲಿಟೆಕ್ನಿಕ್ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲಾಗುತ್ತದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ.

ಕರ್ನಾಟಕ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಮೂಳೆ ಮತ್ತು ಕೀಲು ಅಂಗವಿಕಲತೆ ಶೇ.40 ಮತ್ತು ಮೇಲ್ಪಟ್ಟು, ಕಿವುಡು ಮತ್ತು ಮೂಗು ಅಂಗವಿಕಲತೆ ಶೇ.60 ಡಿಬಿ ಮತ್ತು ಮೇಲ್ಪಟ್ಟು ಹಾಗೂ ಅಂಧತ್ವ 6/60 ಅಥವಾ 20/200 ಸ್ನೆಲೆನ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಫಾರ್ ವಿಜ್ಯುವಲಿ ಇಂಪರ್ಡ್ೂ) ರ ಕೋರ್ಸಿಗೆ ಮೇಲಿನ ಅಂಗವೈಕಲ್ಯತೆಯ ಲಕ್ಷಣಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಪ್ರವೇಶ ಅರ್ಜಿಯು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.100 ಹಾಗೂ ಎಸ್ಸಿ/ಎಸ್ಟಿ/ಸಿ-1 ವರ್ಗದವರಿಗೆ ರೂ.50 ಒಳಗೊಂಡಿದೆ.

ಅರ್ಜಿಯನ್ನು ಜೆಎಸ್ಎಸ್ ಮಹಾವಿದ್ಯಾಪೀಠ ಜೆಎಸ್ಎಸ್ ವಿಶೇಷಚೇತನ ಪಾಲಿಟೆಕ್ನಿಕ್ ವಿಳಾಸದಿಂದ ನಗದು ಅಥವಾ ಡಿಡಿ ಮೂಲಕ ಮೈಸೂರಿನಲ್ಲಿ ಸಂದಾಯವಾಗುವಂತೆ ಕಳುಹಿಸಿ ಪಡೆಯಬಹುದು ಅಥವಾ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಜೂನ್ 16 ರೊಳಗೆ ಕಛೇರಿಗೆ ತಲುಪಿಸಬೇಕು.

ಹೆಚ್ಚಿನ ಮಾಹಿತಿಗಾಗಿ www.jsspda.org/  ಇ-ಮೇಲ್ jsspda@gmail.com / ಮೊ. ಸಂ:9844644937 ಮೂಲಕ ಸಂಪರ್ಕಿಸಬಹುದು.

Leave a Reply