ಧಾರವಾಡ: 2026ನೇ ಸಾಲಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ 5 ರಿಂದ 18 ವರ್ಷದೊಳಗಿನ ಅಸಾಧಾರಣ ಸಾಧನೆ ಮಾಡಿರುವ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
- ಶುಲ್ಕ ಶೇಕಡಾ 15ರಷ್ಟು ಏರಿಕೆ, ಸಹಾಯಧನದಲ್ಲಿ ನಯಾಪೈಸೆ ಬದಲಾವಣೆಯಿಲ್ಲ: ಕೃಷ್ಣೇಗೌಡ
- ಕರಾವಳಿಯ ಕಂಬಳ, ತುಳುನಾಡಿನ ಟ್ಯಾಬ್ಲೋ ಮೈಸೂರು ದಸರಾದ ಭಾಗವಾಗಿವೆ: ಡಿ ಕೆ ಶಿವಕುಮಾರ್
- ಸಂವಿಧಾನ ತಿದ್ದುಪಡಿ ಮೀಸಲು ಹೆಚ್ಚಳಕ್ಕೆ ಸೂಕ್ತ ದಾರಿ
- ಕಾಸಾಗ್ರ್ಯಾಂಡ್ನಿಂದ 3,500+ ಉದ್ಯೋಗಿಗಳಿಗೆ ವಿವಿಧ ನಗರಗಳಲ್ಲಿ ಜೈಲರ್ 2 ಫಸ್ಟ್ ಡೇ ಫಸ್ಟ್ ಶೋ
- ರಾಹುಲ್ ಗಾಂಧಿ – ನೇಹಾ ಬೋರಾ ಫೋಟೋದ ಅಲಿಯತ್ತೇನು?
ಪ್ರಶಸ್ತಿ ರೂ.10,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ನಾವೀನ್ಯತೆ, ತಾರ್ಕಿಕ ಸಾಧನೆಗಳು, ಕ್ರೀಡೆ ಹಾಗೂ ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳು ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಧಾರವಾಡ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸಪ್ಟೆಂಬರ್ 11, 2026 ರೊಳಗಾಗಿ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಪ್ರಸ್ತಾವನೆಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 0836-2447850 ಗೆ ಸಂಪರ್ಕಿಸಬಹುದು.




