ಬಳ್ಳಾರಿ: ಜಿ.ಆರ್.ಟಿ.ಡಿ.ಸಿ ಬಳ್ಳಾರಿ ಸಂಸ್ಥೆಯಲ್ಲಿ 2025-26 ನೇ ಶೈಕ್ಷಣಿಕ ವರ್ಷದ ಪ್ರಥಮ ಬಿ.ಎಸ್ಸಿ (ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ) ವೃತ್ತಿಪರ ಪದವಿ ಕೋರ್ಸ್ಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಆರ್‌ಟಿಡಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಪದವಿ ಕೋರ್ಸ್ ಪ್ರವೇಶಾತಿಗೆ ಯಾವುದೇ ದ್ವಿತೀಯ ಪಿ.ಯು.ಸಿ (ಕಲೆ, ವಾಣಿಜ್ಯ, ವಿಜ್ಞಾನ, ಶಿಕ್ಷಣ ಮತ್ತು ಯಾವುದೇ ಡಿಪ್ಲೋಮಾ) ವಿಭಾಗದಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಹರಿರುತ್ತಾರೆ.
ಜಿ.ಆರ್.ಟಿ.ಡಿ.ಸಿ ಬಳ್ಳಾರಿ ಸಂಸ್ಥೆ ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ ಇದರ ಅಂಗ ಸಂಸ್ಥೆಯಾಗಿದೆ. ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಬೆಳಗಾವಿ ಮತ್ತು ಬೆಂಗಳೂರು ಇದರಡಿ 2009 ರಲ್ಲಿ ಪ್ರಾರಂಭವಾಗಿದ್ದು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾ ಕ್ರೀಡಾಂಗಣ ಮೈದಾನ ರಸ್ತೆಯ ಮೊದಲ ರೈಲ್ವೆ ಗೇಟ್ ಹತ್ತಿರದ ನಲ್ಲಚೇರುವು ಪ್ರದೇಶದ ಜಿ.ಆರ್.ಟಿ.ಡಿ.ಸಿ ಕಾಲೇಜ್ ನ ಪ್ರಾಂಶುಪಾಲರ ಕಚೇರಿ ಅಥವಾ ಬೋಧಕ ಸಿಬ್ಬಂದಿಗಳ ಮೊ.9741264655, 9844862576, 9844474235, 8123126127 ಗೆ ಸಂಪರ್ಕಿಸಬಹುದು.




