ಕೆಂಭಾವಿ: ಪಟ್ಟಣದಲ್ಲಿರುವ ಆನಂದ್ ಬುದ್ಧ ವಿಹಾರ ಜೀರ್ಣೋದ್ಧಾರ ಮತ್ತು ಹೈಟೆಕ್ ಕಲ್ಯಾಣ ಮಂಟಪ, ಸಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ಸಣ್ಣಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ದರ್ಶನಾಪುರ, ಬರುವ ದಿನಗಳಲ್ಲಿ ಬುದ್ಧ ವಿಹಾರಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಚಿಂಚೋಳಿ, ಶಿವಶರಣ ಯಾಳಗಿ, ಶಿವಪ್ಪ ಕಂಬಾರ್, ಪರಶುರಾಮ ಬಳಬಟ್ಟಿ , ಗೋಪಾಲ್ ಕರಡಕಲ್, ಮಂಜು ಕೊಬಿನ್, ಮಡಿವಾಳಪ್ಪ ಯಾಳಗಿ, ಶಿವಾನಂದ ಹದನೂರ, ಸಿದ್ಧಾರ್ಥ್ ಮಾಲಹಳ್ಳಿ, ವಿಜಯಕುಮಾರ ಕಟ್ಟಿಮನಿ, ತಿಮ್ಮಣ್ಣ ಹೊಸಿಗೇರಿ, ಬಸವರಾಜ ಇಂಗಳಗಿ, ರಾಜು ಯಾಳಗಿ, ರವಿ ಯಾಳಗಿ,ಮಂಜುನಾಥ್ ಜಲಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



