ಬಿಪಿ ಎಂಬ ಆತಂಕ…
ಕಳೆದ ವಾರ ಊರಲ್ಲಿದ್ದೆ. ಅಣ್ಣ ಬಿಪಿ, ಶುಗರ್, ಚೆಕ್ ಮಾಡಿಸಬೇಕೆಂದು ಆಸ್ಪತ್ರೆಗೆ ನನ್ನನ್ನೂ ಜೊತೆ ಕರೆದುಕೊಂಡು ಹೋಗಿದ್ದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಅಣ್ಣನ ಬಿಪಿ, ಶುಗರ್ ನಾರ್ಮಲ್ ಇತ್ತು. ನನಗೂ ಅಣ್ಣ ಟೆಸ್ಟ್ ಮಾಡಿಸಲು ಹೇಳಿದ. ನನ್ನ ಶುಗರ್ ನಾರ್ಮಲ್ ಇತ್ತು. ಆದರೆ ಅಚ್ಚರಿ ಎಂಬಂತೆ ಬಿಪಿ 160/110 ಬಂತು. ವೈದ್ಯರು ತಕ್ಷಣವೇ ಬಿಪಿ ಮಾತ್ರೆ ಬರೆದುಕೊಟ್ಟರು. ಮತ್ತೊಂದೆಡೆ ಹೋಗಿ ಮರು ಚೆಕ್ ಮಾಡಿಸಿದಾಗಲೂ ಇದೇ ರೀಡಿಂಗ್ ಬಂತು. ನನಗೆ ಬಿಪಿಯ ಯಾವ ಲಕ್ಷಣಗಳು ಇರಲಿಲ್ಲ. ಈವರೆಗೂ ಬಿಪಿ ನಾರ್ಮಲ್ಲೇ ಇತ್ತು.
ರಾತ್ರಿ ಬಿಪಿ ಮಾತ್ರೆ ತಗೊಂಡೆ. ಮರುದಿನ ಬೆಂಗಳೂರಿಗೆ ಬರಬೇಕಿತ್ತು, ಬಂದೆವು. ನಮ್ಮ ಮನೆಯ ಸಮೀಪವಿರುವ ಕ್ಲಿನಿಕ್ ನಲ್ಲಿ ಬಿಪಿ ಚೆಕ್ ಮಾಡಿಸಿದೆ. 130/86 ಬಂತು. “ಇದು ಮಾತ್ರೆಯ ಪ್ರಭಾವ ಇರಬೇಕು ಬಿಪಿ ಕಡಿಮೆಯಾಗಿದೆ” ಅಂದುಕೊಂಡೆ. ವೈದ್ಯರೊಂದಿಗೆ ಮಾತಾಡಿದೆ. “ಮಾತ್ರೆ ತೆಗೆದುಕೊಳ್ಳದೆ ನಾಳೆ, ನಾಡದ್ದು ಬಂದು ಬಿಪಿ ಚೆಕ್ ಮಾಡಿಸಿ ಬಿಪಿ ಇದ್ದರೆ ಮಾತ್ರ ಮಾತ್ರೆ ತೆಗೆದುಕೊಳ್ಳುವೆ” ಎಂದೆ. ಮೂರು ದಿನ ಬಿಪಿ ಚೆಕ್ ಮಾಡಿಸಿದೆ. 130/90, 130/84, 128/82 ಬಿಪಿ ಇತ್ತು. “ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ” ಎಂದು ವೈದ್ಯರು ಹೇಳಿದರು.
ಇದರಾಚೆ ಹೃದಯಕ್ಕೆ ಸಂಬಂಧಿಸಿದ ವಿಚಾರವಿದು ನಿರ್ಲಕ್ಷ್ಯ ಮಾಡಬಾರದೆಂದು Cardiologist ಬಳಿ ತೋರಿಸಿದೆ. ಅವರು ECHO ಟೆಸ್ಟ್ ಮಾಡಿ ಎಲ್ಲಾ ನಾರ್ಮಲ್ ಎಂದರು.
ಇದೊಂದು ರೀತಿಯಲ್ಲಿ ನನಗೆ ಒಳ್ಳೆಯದಾಯ್ತು. ನಿವೃತ್ತನಾದ ಮೇಲೆ ನಿಧಾನವಾಗಿ ಏಳುವುದು, ಸಮಯಕ್ಕೆ ಸರಿಯಾಗಿ ತಿಂಡಿ, ಊಟಮಾಡದಿರುವುದು. ಸಿನಿಮಾಗಳನ್ನು ನೋಡುತ್ತಾ ಕೂರುವುದು, ಸುಮ್ಮನೆ ಒಂದೆಡೆ ಕೂತು ಓದುವುದು…ಮಾಡುತ್ತಿದ್ದೆ.
ಈಗ ಮುಂಜಾನೆ ಅಂದಿನಂತೆ ಬೇಗ ಏಳುವೆ. ಮುಂಜಾನೆ ಇಪ್ಪತ್ತು ನಿಮಿಷ ವಾಕ್ ಮಾಡುವೆ. ವಾಕ್ ಮುಗಿಸಿ ಬಂದು ಪ್ರಾಣಾಯಾಮ ಮಾಡುವೆ. ಸರಿಯಾದ ವೇಳೆಗೆ ತಿಂಡಿ, ಊಟ ಮಾಡುವೆ. ತರಕಾರಿ, ಹಣ್ಣುಗಳಿಗೆ ವಿಶೇಷ ಪ್ರಾಧಾನ್ಯ. ಬಹಳ ಹೊತ್ತು ಕೂರವುದಿಲ್ಲ, ಓಡಾಡುವೆ. ಸಂಜೆ ಮತ್ತೊಮ್ಮೆ ಹೊರಗೆ ಅಡ್ಡಾಡಿ ಬರುವೆ. ಹಾಗೆಯೇ ಇವೊತ್ತು ಬಿಪಿ ಚೆಕ್ ಮಾಡಿದಾಗ 130/80 ಬಂದಿದೆ.
ಬಿಪಿ ಸ್ಥಿರವಾಗಿರುವುದಿಲ್ಲ. ಅದು ಒಮ್ಮೆ ಹೆಚ್ಚಾಗಿಯೂ, ಕಡಿಮೆಯಾಗಿಯೂ ಇರಬಹುದು. ಆದರೆ ಆಗಾಗ್ಗೆ ಬಿಪಿ ಚೆಕ್ ಮಾಡಿಸಿಕೊಳ್ಳುವುದು ಒಳ್ಳೆಯದು.
ಮನಸ್ಸು ಶಾಂತವಾಗಿದ್ದರೆ ಹೃದಯ ಕೂಡ ಶಾಂತವಾಗಿರುತ್ತದೆ. ಅತಿಯಾದ ಚಿಂತೆ, ಒತ್ತಡದ ಬದುಕು ಹೃದಯದ ಬಾಧೆಗೆ ಮುಖ್ಯ ಕಾರಣ. ಇದರೊಂದಿಗೆ ಅತಿಯಾದ ಮದ್ಯಪಾನ, ಧೂಮಪಾನ, ದುಶ್ಚಟಗಳು, ದುರ್ವ್ಯಸಗಳು ಹೃದಯವನ್ನು ನಿತ್ರಾಣಗೊಳಿಸುತ್ತವೆ. ಇನ್ನು ಅನುವಂಶೀಯ ಪ್ರಭಾವ ಕೂಡ ಕಾಡಬಹುದು.
ಆರೋಗ್ಯವೇ ಭಾಗ್ಯ. ಆರೋಗ್ಯ ಇಲ್ಲದೆ ಏನಿದ್ದರೂ ವ್ಯರ್ಥ. ಸರಳವಾದ ಬದುಕು, ಒಳ್ಳೆಯ ಆಲೋಚನೆಗಳು ನಮ್ಮ ಹೃದಯವನ್ನು ಗಟ್ಟಿಯಾಗಿರುಸುತ್ತವೆ.
– ಎಂ.ಎಸ್.ಶಿವಕುಮಾರ್, ಉಪನ್ಯಾಸಕರು
Anxiety about BP




