ಬೆಂಗಳೂರು: ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ವಿಜಯೇಂದ್ರ ಇಂದಿಗೆ ಒಂದು ವರ್ಷ ಅಧಿಕಾರಾವಧಿ ಪೂರ್ಣಗೊಳಿಸಿದ್ದಾರೆ. ಈ ಸಂಭ್ರಮದ ದಿನವೇ ಭಿನ್ನಮತೀಯ ನಾಯಕರು ಅವರ ವಿರುದ್ಧ ಸಮರ ಸಾರಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ವಿಧಾನಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆ ಮುಗಿಯುತ್ತಿದ್ದಂತೆ ಚಟುವಟಿಕೆ ಚುರುಕುಗೊಳಿಸಿರುವ ಭಿನ್ನಮತೀಯ ನಾಯಕರು ಇದೀಗ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.
ವಕ್ಫ್ ವಿಚಾರದಲ್ಲಿ ಹೈಕಮಾಂಡ್ ಸೂಚನೆ ನೀಡಿದ್ದರೂ ವಿಜಯೇಂದ್ರ ನಾಯಕತ್ವದಲ್ಲಿ ಪಕ್ಷ ಇದರ ಹೋರಾಟವನ್ನು ಕೈಗೆತ್ತಿಕೊಂಡಿಲ್ಲ. ದೊರಕಿರುವ ಅತ್ಯುತ್ತಮ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಆಪಾದಿಸಿರುವ ಭಿನ್ನಮತೀಯರು, ಇದೀಗ ವಕ್ಫ್ ವಿಷಯವನ್ನು ಇಟ್ಟುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಲು ತೀರ್ಮಾನಿಸಿದ್ದಾರೆ.
ಮಾಜಿ ಸಚಿವ ಹಾಗೂ ಭಿನ್ನಮತೀಯ ನಾಯಕ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ಸೇರಿದ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಬಿಪಿ ಹರೀಶ್, ಮಾಜಿ ಸಂಸದರಾದ ಬಿ ವಿ ನಾಯಕ್, ಪ್ರತಾಪ ಸಿಂಹ ಸೇರಿದಂತೆ ಹಲವರು ವಿಜಯೇಂದ್ರ ನಾಯಕತ್ವದ ವಿರುದ್ಧ ಸಮರ ಘೋಷಿಸಿದ್ದಾರೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ವಕ್ಫ್ ಬೋರ್ಡ್ ಮೂಲಕ ರೈತರ ಜಮೀನಿಗೆ ನೋಟಿಸ್ ನೀಡುತ್ತಿರುವ ಸರ್ಕಾರದ ವಿರುದ್ದ ನ.25ರಿಂದ ಡಿ.25ರವರೆಗೆ ಬೀದರ್ ನಿಂದ ಜನಜಾಗೃತಿ ಅಭಿಯಾನ ನಡೆಸಲಾಗುವುದು ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್, ಬಿ ವಿ ನಾಯಕ್ ಸೇರಿ ಎಲ್ಲರೂ ಸೇರಿ ಬೀದರ್ನಿಂದ ಈ ಹೋರಾಟ ಪ್ರಾರಂಭ ಮಾಡ್ತೀವಿ. ಬೀದರ್, ಗುಲ್ಬರ್ಗ, ಯಾದಗಿರಿ, ವಿಜಯಪುರ ಬಾಗಲಕೋಟೆ, ಬೆಳಗಾವಿ ಮೊದಲ ಹಂತದಲ್ಲಿ ಪ್ರವಾಸ ಮಾಡ್ತೀವಿ ಎಂದರು.
1954ರಿಂದ ರಚನೆ ಆಗಿರುವ ರಾಜ್ಯ ಪತ್ರವನ್ನು ರದ್ದುಗೊಳಿಸಬೇಕು, ವಕ್ಫ್ ಸಂಬಂಧಿಸಿದಂತೆ ಎಲ್ಲವನ್ನೂ ರದ್ದು ಮಾಡಬೇಕು. ರೈತರು, ಮಠ ಮಂದಿರ, ದೇವಸ್ಥಾನ ಗಳು, ಉಳಿದಂತೆ ಯಾವ್ಯಾವುದು ವಕ್ಪ್ ಆಸ್ತಿ ಬರ್ತಿದೆ ಅದೆಲ್ಲವೂ ಸರ್ಕಾರ ವಾಪಸ್ಸು ಕೊಡಬೇಕು. ನಮ್ಮ ಸರ್ಕಾರ ಇದ್ದಾಗ ಅನ್ವರ್ ಮಾನಪ್ಪಾಡಿ ವರದಿ ಸದನದಲ್ಲಿ ಮಂಡನೆಯಾಗಿತ್ತು. ಅದರ ಆಧಾರದಲ್ಲಿ ಕ್ರಮವನ್ನು ಕೈಗೊಳ್ಳುವಂತೆ ಮೂರು ಬೇಡಿಕೆ ಮುಂದಿಟ್ಟು ಜನ ಜಾಗೃತಿ ಮಾಡ್ತೀವಿ ಎಂದರು.
ಸಾರ್ವಜನಿಕರು ವಕ್ಫ್ ನಿಂದ ಯಾವುದೇ ರೀತಿಯ ಅನ್ಯಾಯವಾಗಿದ್ದರೆ 9035675734 ಈ ವಾಟ್ಸಪ್ ನಂಬರಿಗೆ ಸಂದೇಶ ಕಳುಹಿಸಬಹುದು. ಇಲ್ಲವೇ ತಮ್ಮನ್ನು ಖುದ್ದಾಗಿ ಭೇಟಿಯಾಗಿ ವಿವರ ನೀಡಬಹುದಾಗಿದೆ ಎಂದರು.
ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ರೈತರು, ಮಠಗಳಿಗೆ ವಕ್ಫ್ ಆದೇಶದಿಂದ ಅನ್ಯಾಯವಾಗುತ್ತಿದೆ. ನಾವು ಕೇಳುತ್ತಿರುವುದು ಕ್ರಿಮಿನಲ್ ಪ್ರಕರಣಗಳು ರದ್ದಾಗಿ ಎಲ್ಲವೂ ನ್ಯಾಯಾಲಯದ ಮೂಲಕವೇ ತೀರ್ಮಾನವಾಗಬೇಕು ಎಂದರು.
ಜನಜಾಗೃತಿ ಅಭಿಯಾನಕ್ಕೆ ಹೈಕಮಾಂಡ್ ಅನುಮತಿ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಈಗಾಗಲೇ ನಮ್ಮ ಗೃಹಸಚಿವರು, ಪ್ರಧಾನಿಯವರು ಧ್ವನಿಗೂಡಿಸಿದ್ದಾರೆ. ಹೀಗಾಗಿ ನಮ ಅಭಿಯಾನಕ್ಕೆ ಹೈಕಮಾಂಡ್ ಬಂಬಲ ವಿಚಾರವೇ ಬರುವುದಿಲ್ಲ ಎಂದರು.
ಜನರ ಹಿತದೃಷ್ಟಿಯಿಂದ ಅಭಿಯಾನ ಮಾಡುತ್ತಿದ್ದೇವೆ. ಇದಕ್ಕೆ ಯಾರು ಬೇಕಾದರೂ ಬೆಂಬಲ ಕೊಡಬಹುದು ಎಂದು ಕಾಂಗ್ರೆಸ್ ನಾಯಕರಿಗೆ, ಸಂಸದರಿಗೆ ಆಹ್ವಾನ ನೀಡಿದ ಯತ್ನಾಳ್, ಅವರು ಬಂದರೂ ಅಭಿಯಾನ ನಡೆಯುತ್ತದೆ, ಬರದಿದ್ದರೂ ಅಭಿಯಾನ ನಡೆಸುತ್ತೇವೆ ಎಂದರು.




