ಚಂದ್ರ ಬಡಾವಣೆ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಸಾವಿರಾರು ನಾಗರಿಕರಿಂದ ಕೋಟಿ ಕಂಠ ಗಾಯನ
ಬೆಂಗಳೂರು: ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ ಬರೆಯಲು, ಮಾತನಾಡಲು ಅತ್ಯಂತ ಸುಂದರ ಸರಳ ಭಾಷೆಯಾಗಿದೆ. ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರು. ಈ ಮಣ್ಣಿನಲ್ಲಿ ಹುಟ್ಟುವುದು ಏಳು ಜನ್ಮದ ಕೋಟಿ ಪುಣ್ಯದ ಫಲ ಎಂದು ಬಂದ ಬಿಬಿಎಂಪಿ ಮಾಜಿ ಸದಸ್ಯ ಕೆ.ಉಮೇಶ್ ಶೆಟ್ಟಿ ಹೇಳಿದರು.
ಚಂದ್ರಾ ಬಡಾವಣೆಯಲ್ಲಿ ಚಂದ್ರಚೇತನ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಗಣೇಶ ವೃತ್ತದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೋಟಿ ಕಂಠ ಗಾಯ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಕಿತ್ತೂರು ರಾಣಿ ಚನ್ನಮ್ಮ, ಕನಕದಾಸರು, ಸಂಗೊಳ್ಳಿ ರಾಯಣ್ಣ, ನಾಡಪ್ರಭು ಕೆಂಪೇಗೌಡರು, ಪಂಪ, ರನ್ನ, ಪುರಂದರ ದಾಸರು ಮತ್ತು ಮೇರುನಟ ಡಾ||ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್ ರವರು ಅನೇಕ ಮಹನೀಯರುಗಳು ಕನ್ನಡ ನಾಡು, ನುಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿವೆ ಎಂದರು.
ರಾಜ್ಯ ಸರ್ಕಾರ ಮತ್ತು ಬಿ.ಬಿ.ಎಂ.ಪಿ.ಯಲ್ಲಿ ಆಡಳಿತ ಸಂಪೂರ್ಣ ಕನ್ನಡಲ್ಲಿ ನಡೆಸುತ್ತಿದೆ. ಕನ್ನಡ ಭಾಷೆ ಉಳಿಸಿ, ಬೆಳಸಬೇಕು ಎಂದರೆ ಪ್ರತಿಯೊಬ್ಬರು ಪ್ರತಿನಿತ್ಯ ಕನ್ನಡ ಭಾಷೆ ಬಳಸಬೇಕು, ವ್ಯವಹರಿಸಬೇಕು ಆಗ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂದರು.
ಸಿದ್ದರಾಮಯ್ಯ, ತಿಮ್ಮಪ್ಪಭಟ್, ಎಸ್.ಸಿ.ಸುಂದರ್, ಶ್ರೀನಿವಾಸಪ್ಪ, ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳು ಮತ್ತು ಪೌರ ಕಾರ್ಮಿಕರು, ಬಿ.ಬಿ.ಎಂ.ಪಿ. ಜಲಮಂಡಳಿ ಅಧಿಕಾರಿ, ಸಿಬ್ಬಂದಿ ಮತ್ತು ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.



