ಕರ್ನಾಟಕ ರಾಜ್ಯದಲ್ಲಿ ಮುಜರಾಯಿ ಇಲಾಖೆ ಸಚಿವರು ಒಬ್ಬರು ಅರ್ಚಕರಿಗೆ ಯಾವ ಪ್ರಮಾಣದಲ್ಲಿ ಸಹಾಯ ಮಾಡಬಹುದು ಎಂಬುದಕ್ಕೆ ರಾಮಲಿಂಗಾರೆಡ್ಡಿ ಅವರು ಸಾಕ್ಷಿಯಾಗಿದ್ದಾರೆ. ಒಬ್ಬ ಸಚಿವರು ಹೃದಯವಂತಿಕೆಯಿಂದ ಕೆಲಸವನ್ನು ಮಾಡಿದರೆ ಎಷ್ಟು ಅನುಕೂಲಗಳನ್ನು ಮಾಡಿಕೊಡಬಹುದು ಎಂಬುದನ್ನು ತಮ್ಮ ಕ್ರಾಂತಿಕಾರಿ ಆದೇಶಗಳ ಮೂಲಕ ಸಾಬೀತುಗೊಳಿಸಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯದ ಇತಿಹಾಸದಲ್ಲಿಯೇ ಅರ್ಚಕರಿಗೆ ರಾಮಲಿಂಗಾರೆಡ್ಡಿ ಅವರು ಸಚಿವರಾದ ಮೇಲೆ ದೊರೆತಂತಹ ಅನುಕೂಲತೆಗಳು ಯಾರಿಂದಲೂ ದೊರೆತಿರಲಿಲ್ಲ. ಈ ಕಾರಣಕ್ಕಾಗಿ ಸಮಸ್ತ ಅರ್ಚಕ ಬಂಧುಗಳು ರಾಮಲಿಂಗ ರೆಡ್ಡಿ ಅವರ ಸುಪುತ್ರಿ ಸೌಮ್ಯ ರೆಡ್ಡಿ ಅವರ ಪರವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾದಂತಹ ಪ್ರಚಾರವನ್ನು ಮಾಡುವುದರ ಮೂಲಕ ತಮ್ಮ ಕೃತಜ್ಞತೆಯನ್ನ ಸಲ್ಲಿಸುತ್ತಿದ್ದಾರೆ.
ಬಿ ಮತ್ತು ಸಿ ದರ್ಜೆಯ ದೇವಾಲಯದ ಅರ್ಚಕರಿಗೆ ಉಚಿತವಾದಂತಹ ಕಾಶಿ ಯಾತ್ರೆಯನ್ನು ಮಾಡುವ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ.
ಉತ್ತರ ಮತ್ತು ದಕ್ಷಿಣ ಕಾಶಿ ಪ್ರವಾಸಕ್ಕೆ ಈ ಮೊದಲು ಇದ್ದ 15,000ಗಳ ಸಹಾಯಧನವನ್ನು 22 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದಂತಹ ಕೀರ್ತಿಯು ರಾಮಲಿಂಗ ರೆಡ್ಡಿ ಅವರಿಗೆ ಸಲ್ಲುತ್ತದೆ.
ಸಿ ದರ್ಜೆಯ ಮುಜರಾಯಿ ಇಲಾಖೆಯ ದೇವಾಲಯದ ಅರ್ಚಕರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿ ಕೊಡುವಂತಹ ಯೋಜನೆಯನ್ನು ರೂಪಿಸಿದ್ದಾರೆ.
ಪ್ರಥಮ ಬಾರಿಗೆ ಅರ್ಚಕರಿಗೆ ಎರಡು ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಿ ಕೊಟ್ಟಿದ್ದಾರೆ.
ಅರ್ಚಕರುಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ಸಾವನ್ನಪ್ಪಿದರೆ 2 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವ ಯೋಜನೆಯನ್ನು ರೂಪಿಸಿದ್ದಾರೆ.
ದೇವಾಲಯಗಳಿಗೆ ಈ ಹಿಂದೆ ನೀಡುತ್ತಿದ್ದ ತಸ್ವಿಕ್ ಹಣವನ್ನ 12,000 ಗಳಿಂದ 60,000ಗಳಿಗೆ ಏರಿಕೆಯನ್ನು ಮಾಡಿರುತ್ತಾರೆ. ಈ ಎಲ್ಲ ಏರಿಕೆಗಳು ಆಗಿರುವುದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಂತಹ ಸಂದರ್ಭದಲ್ಲಿ ಮತ್ತು ರಾಮಲಿಂಗಾರೆಡ್ಡಿ ರವರು ಮುಜರಾಯಿ ಇಲಾಖೆಯ ಸಚಿವರಾದ ಮೇಲಷ್ಟೇ.
ದೇವಾಲಯದ ಅರ್ಚಕರ ಮಕ್ಕಳು ವೈದ್ಯಕೀಯ ಪದವಿಯನ್ನು ವ್ಯಾಸಂಗ ಮಾಡುವ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳ ಸಹಾಯಧನ, ಇಂಜಿನಿಯರಿಂಗ್ ಪದವಿಗಳಿಗೆ 50,000, ಪದವಿ ವ್ಯಾಸಂಗ ಮಾಡುವವರಿಗೆ 25,000ಗಳ ಪ್ರೋತ್ಸಾಹ ಧನದ ಯೋಜನೆ ನೀಡಲಾಗಿದೆ.
ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಹಿರಿಯ ನಾಗರಿಕರಿಗೆ ಶೀಘ್ರ ದರ್ಶನದ ವ್ಯವಸ್ಥೆ, ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕವಾದಂತಹ ಕೊಠಡಿಗಳ ವ್ಯವಸ್ಥೆ, ಸಿ ದರ್ಜೆಯ ದೇವಾಲಯಗಳಿಗೆ ಉಚಿತವಾದಂತಹ ನೀರು ಮತ್ತು ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಮುಜರಾಯಿ ಇಲಾಖೆಯ ದೇವಾಲಯಗಳ ಅಭಿವೃದ್ಧಿಗೆ ಹಲವಾರು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ಮಲೆ ಮಾದೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರಾಧಿಕಾರವನ್ನು ರಚಿಸಿಕೊಟ್ಟಿದಂತಹ ಸಿದ್ದರಾಮಯ್ಯನವರ ಸರ್ಕಾರ ಈಗ ರಾಮಲಿಂಗಾರೆಡ್ಡಿರವರ ಮನವಿಯಂತೆ ಮೈಸೂರಿನ ಚಾಮುಂಡಿ ದೇವಾಲಯ ಮತ್ತು ಉತ್ತರ ಕರ್ನಾಟಕದ ಪ್ರಮುಖ ದೇವಾಲಯಕ್ಕೆ ಪ್ರಾಧಿಕಾರದ ರಚಿಸಲಾಗಿದೆ.
ಮುಜರಾಯಿ ಇಲಾಖೆಯ ಇತಿಹಾಸದಲ್ಲಿಯೇ ಕೇವಲ ಹತ್ತು ತಿಂಗಳ ಅವಧಿಯಲ್ಲಿ ಒಬ್ಬ ಸಚಿವರು ಅರ್ಚಕರ ಹಲವಾರು ದಶಕಗಳ ಎಲ್ಲ ಬೇಡಿಕೆಗಳನ್ನ ಈಡೇರಿಸಿದಂತಹ ಉದಾಹರಣೆ ಇಲ್ಲವೇ ಇಲ್ಲ. ಇಂತಹ ಸಾಧನೆಯನ್ನ ಮಾಡುವುದರ ಜೊತೆಗೆ ಅರ್ಚಕ ಬದುಕಿಗೆ ನೆರವನ್ನ ನೀಡುತ್ತಿರುವ ಅವರ ಅಭಿವೃದ್ಧಿಗಾಗಿ ಪ್ರಾಮಾಣಿಕವಾದಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ರಾಮಲಿಂಗಾರೆಡ್ಡಿರವರ ಕಾರ್ಯ ವೈಖರಿ ಮತ್ತು ಅರ್ಚಕರ ಬಗ್ಗೆ ಇವರಿಗಿರುವ ಗೌರವದ ಸಂಕೇತವಾಗಿ ಸಮಸ್ತ ಅರ್ಚಕ ಬಂಧುಗಳು ಸ್ವಯಂ ಪ್ರೇರಿತರಾಗಿ ಕರಪತ್ರಗಳನ್ನು ಹಿಡಿದುಕೊಂಡು ಸೌಮ್ಯ ರೆಡ್ಡಿ ಅವರ ಪರವಾಗಿ ಪ್ರಚಾರ ಮಾಡುವಂತಹ ನಿರ್ಧಾರವನ್ನು ಮಾಡಿರುವುದು ಸೌಮ್ಯ ರೆಡ್ಡಿರವರ ಗೆಲುವಿಗೆ ಹೆಚ್ಚಿನ ಅನುಕೂಲವಾಗಲಿದೆ.
ಕಾಂಗ್ರೆಸ್ ಸರ್ಕಾರ ವಿಶೇಷವಾಗಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೇವಲ ಒಂದು ಧರ್ಮದವರನ್ನು ಓಲೈಕೆ ಮಾಡುತ್ತಾರೆ ಎನ್ನುವಂತಹ ಅಪಪ್ರಚಾರ ಮಾಡುವವರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ರಾಮಲಿಂಗಾರೆಡ್ಡಿ ಅವರು ಮುಜರಾಗಿ ಇಲಾಖೆಗೆ ಸಲ್ಲಿಸುತ್ತಿರುವ ಸೇವೆಯನ್ನ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳನ್ನು ರೂಪಿಸಿರುವ ಯೋಜನೆಗಳನ್ನು ಗಮನಿಸಿದಾಗ ಟೀಕೆಕಾರರ ಮಾತುಗಳಿಗೆ ಯಾವುದೇ ಮಹತ್ವವನ್ನ ಕೊಡುವ ಅಗತ್ಯವಿಲ್ಲ. ಈ ಸರ್ಕಾರ ಎಲ್ಲ ಧರ್ಮದ ಜನರನ್ನು ಸಮಾನವಾಗಿ ಕಾಣುತ್ತಾ ಎಲ್ಲಾ ಧರ್ಮದ ಜನರಲ್ಲಿ ಇರುವ ಸಮಸ್ಯೆಗಳನ್ನ ಪರಿಹರಿಸಿಕೊಡುವ ನಿಟ್ಟಿನಲ್ಲಿ ಶ್ರದ್ಧೆಯಿಂದ ಕರ್ತವ್ಯವನ್ನ ನಿರ್ವಹಿಸುತ್ತಿದೆ ಎನ್ನುವುದಕ್ಕೆ ಮುಜರಾಯಿ ಇಲಾಖೆಯೇ ಸಾಕ್ಷಿಯಾಗಿದೆ.
ಜಯನಗರದ ಶಾಸಕರಾಗಿ, ಅದರ ಅಭಿವೃದ್ಧಿಗೆ ಪ್ರಾಮಾಣಿಕವಾದಂತಹ ಸೇವೆಯನ್ನ ಸಲ್ಲಿಸಿರುವ ಸೌಮ್ಯ ರೆಡ್ಡಿ ಅವರು ವಿದ್ಯಾವಂತರಾಗಿದ್ದು, ಹೋರಾಟದ ಮನೋಭಾವವನ್ನ ಹೊಂದಿದವರಾಗಿದ್ದು, ಬಡಜನರ ಮತ್ತು ಅಸಹಾಯಕರ ನೋವಿಗೆ ಸ್ಪಂದಿಸುವಂತಹ ಹೃದಯವಂತಿಕೆಯನ್ನು ಮೈಗೂಡಿಸಿಕೊಂಡಿದ್ದಾರೆ. ತಂದೆಯಂತೆ ಸರಳವಾದ ಸಜ್ಜನಿಕೆಯ ಸುಸಂಸ್ಕೃತ ನಡವಳಿಕೆಯ ಮೂಲಕ ತಮ್ಮ ಸೌಮ್ಯತೆಯ ಮೂಲಕ ಸೌಮ್ಯ ರೆಡ್ಡಿ ಎಂಬ ಹೆಸರನ್ನು ಸಹ ಸಾರ್ಥಕ ಪಡಿಸಿಕೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವಂತಹ ವ್ಯಕ್ತಿಗಳು ಜಾತಿ ಮತ ಧರ್ಮಗಳ ಆಧಾರದಲ್ಲಿ ರಾಜಕಾರಣವನ್ನ ಮಾಡದೆ ಇವುಗಳ ನಡುವೆ ದ್ವೇಷವನ್ನ ಬಿತ್ತುವ ಅಥವಾ ಬೆಂಕಿಯನ್ನು ಹಚ್ಚುವ ಕೆಲಸವನ್ನು ಮಾಡದೆ ಪರಸ್ಪರ ಪ್ರೀತಿಸುವ ಗುಣದಿಂದ ಸಮಾಜದಲ್ಲಿ ಸಾಮರಸ್ಯವನ್ನು ಉಂಟು ಮಾಡಿ ಶಾಂತಿಯುತ ಸಮಾಜದ ನಿರ್ಮಾಣದ ದಿಕ್ಕಿನಲ್ಲಿ ಸದಾ ಆಲೋಚಿಸುವವರಾಗಿರಬೇಕು. ಈ ಎಲ್ಲ ಗುಣಗಳು ಸೌಮ್ಯ ರೆಡ್ಡಿ ಅವರಲ್ಲಿ ಇರುವುದರಿಂದ ಬೆಂಕಿ ಹಚ್ಚುವ ಬುದ್ಧಿ ಉಳ್ಳ ಜನರನ್ನ ತಿರಸ್ಕರಿಸಿ ಪರಸ್ಪರ ಪ್ರೀತಿಯ ಮತ್ತು ಸಮಾನತೆಯ ಜ್ಯೋತಿಯನ್ನು ಬೆಳಗುವ ಸೌಮ್ಯ ರೆಡ್ಡಿ ಅವರನ್ನು ಈ ಚುನಾವಣೆಯಲ್ಲಿ ನಮ್ಮ ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಹೊಣೆಗಾರಿಕೆ ಆಗಿರುತ್ತದೆ.
– ಕೆ.ಎಸ್ ನಾಗರಾಜ್, ಚಿಂತಕರು




