ಕ್ರಿಶ್ಚಿಯನ್, ಮುಸ್ಲಿಂ ಬ್ರಾಹ್ಮಣ ನಮೂದಿಸಿರುವ ಜಾತಿಗಣತಿ ಸಮೀಕ್ಷೆ ವಿರೋಧಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
ಬೆಂಗಳೂರು: ನಗರದ ಪ್ರೆಸ್ ಕ್ಲಬ್ ನಲ್ಲಿ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಜಾತಿಜನಗಣತಿಯಲ್ಲಿ ಅಸಮರ್ಪಕ ಶೈಕ್ಷಣಿಕ ಸಮೀಕ್ಷೆ ಮತ್ತು ಕ್ರಿಶ್ಚಿಯನ್ ಬ್ರಾಹ್ಮಣ, ಮುಸ್ಲಿಂ ಬ್ರಾಹ್ಮಣ ಸಮುದಾಯ ನಮೂದಿಸಿರುವ ಕಾರಣಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಮಾಧ್ಯಮಗೋಷ್ಟಿ ಏರ್ಪಡಿಸಲಾಗಿತ್ತು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್, ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್ ರವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಎಸ್.ರಘುನಾಥ್ ಮಾತನಾಡಿ, ರಾಜ್ಯದಲ್ಲಿ ಅಂದಾಜು 30 ಲಕ್ಷಕ್ಕಿಂತ ಹೆಚ್ಚು ಬ್ರಾಹ್ಮಣ ಸಮುದಾಯದವರು ಇದ್ದಾರೆ. ಅದರೆ ಗಣತಿಯಲ್ಲಿ 16 ಲಕಾಷ ತೋರಿಸಿದೆ. ಜಾತಿಗಣತಿಯಲ್ಲಿ ನಮ್ಮ ದೂರುಗಳನ್ನು ಸಲ್ಲಿಸಲಾಗಿದೆ. ಆದರೆ ಯಾವುದೇ ಪರಿಗಣನೆ ಮಾಡಿಲ್ಲ. ಆದ್ದರಿಂದ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದರು.
ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಜನಗಣತಿ ಮಾಡಿದರೆ ಪರವಾಗಿಲ್ಲ. ನಮ್ಮ ಅಭ್ಯಂತರವಿಲ್ಲ. ಜಾತಿ ಹೆಸರಿನಲ್ಲಿ ವಿಂಗಡಣೆ ಮಾಡಬೇಡಿ. 1561ಜಾತಿ ತೋರಿಸಿದ್ದಾರೆ. ಆದರೆ ಉಪಜಾತಿಗಳನ್ನು ತೋರಿಸಿಲ್ಲ. ಎಲ್ಲ ಉಪಜಾತಿಗಳನ್ನು ಮುಖ್ಯ ಜಾತಿಗಳಾಗಿ ಪರಿಗಣನೆ ಮಾಡಿದ್ದಾರೆ ಎಂದರು.
ವ್ಯಾಸ ಬ್ರಾಹ್ಮಣ ಕ್ರಿಚ್ಚಿಯನ್, ಮುಜಾವರ್ ಬ್ರಾಹ್ಮಣ ಎಂದು ನಮೂದಿಸಿದ್ದಾರೆ. ಸಮೀಕ್ಷೆ ಹೊಸ ಜಾತಿಗೆ ಸೃಷ್ಟಿಕರ್ತರಾಗಿದ್ದಾರೆ. ವಿದ್ಯುಚ್ಚಕಿ ಮೀಟರ್ ಮೇಲೆ ಜನಗಣತಿ ಮಾಡುತ್ತಿದ್ದಾರೆ. ಅವರ ಮನೆಗೆ ಅಂಟಿಸಿದ ಸ್ಟಿಕರ್ ಕಿತ್ತು ಹಾಕಿದ್ದಾರೆ. ಇದರಿಂದ ಸಮೀಕ್ಷೆ ಮಾಡುವುದು ಕಷ್ಟ ಎಂದರು.
ಕೈಪಿಡಿಯಲ್ಲಿ 60 ಪ್ರಶ್ನೆಗಳು ಇದೆ. 15 ದಿನಗಳಲ್ಲಿ ಸಮೀಕ್ಷೆ ಮಾಡಲು ಸಾಧ್ಯವೆ? ದಸರಾ ಬರುವುದರಿಂದ ನಿವಾಸಿಗಳು ಪ್ರವಾಸಕ್ಕೆ ಹೋಗಿರುತ್ತಾರೆ. ಸಮೀಕ್ಷೆ ಮಾಡಲು ಹೇಗೆ ಸಾಧ್ಯ? ಬ್ರಾಹ್ಮಣ ಸಮುದಾಯದವರು ಅತ್ಯಂತ ಕಷ್ಟದಲ್ಲಿ ಇದ್ದಾರೆ. ಬ್ರಾಹ್ಮಣ ಸಮುದಾಯದ ಕುರಿತು ಸಮರ್ಪಕವಾಗಿ ಸರ್ವೆಯಾಗಬೇಕು ಎಂದರು.
ಜಾತಿಜನಗಣತಿ ಸಮೀಕ್ಷೆ ಮನೆ ಬಾಗಿಲಿಗೆ ಬಂದರೆ ಧರ್ಮ ಎಂದರೆ ಹಿಂದೂ ಜಾತಿ ಕಾಲಂನಲ್ಲಿ ಬ್ರಾಹ್ಮಣ ಎಂದು ಬರೆಸಿ. ನಮ್ಮಲ್ಲಿ ಕಡುಬಡವರು ಇದ್ದಾರೆ. ಸಮೀಕ್ಷೆಯಿಂದ ಬಡ ಬ್ರಾಹ್ಮಣ ಸಮುದಾಯಕ್ಕೆ ಸರಿಯಾದ ಸೌಲಭ್ಯ, ಮೀಸಲಾತಿ ಸಿಗಬೇಕು. ಬಹಳ ವಿಷಯಗಳ ಕುರಿತು ಸಮರ್ಪಕ ಸರ್ವೆ ನಡೆಯುತ್ತಿಲ್ಲ. ಅದ್ದರಿಂದೂ ಕಾನೂನು ಮೂಲಕ ಹೋರಾಟ ಮಾಡುತ್ತಿದ್ದೇವೆ ಎಂದರು.
ಆರ್.ಲಕ್ಷ್ಮಿಕಾಂತ್ ಮಾತನಾಡಿ, ಸಮರ್ಪಕವಾಗಿ, ನ್ಯಾಯಯುತವಾಗಿ ಜಾತಿ ಜನಗಣತಿಯಾಗಬೇಕು. ಇಲ್ಲದೇ ಹೋದರೆ ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಸಮಸ್ಯೆ ಕುರಿತು ಮುಖ್ಯಮಂತ್ರಿಗಳಿಗೆ ಮತ್ತು ಹಿಂದುಳಿದ ವರ್ಗದ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದರು.



