ಮುಂಬೈ: ನಾನು ಇನ್ನೂ ಗರ್ಭಿಣಿಯಾಗಿಲ್ಲ. ಹಾಗಾಗಿ ಇನ್ನು ಮದುವೆಯಾಗಿಲ್ಲ. ಒಂದು ವೇಳೆ ಆದರೆ ನಿಮಗೆಲ್ಲರಿಗೂ ತಿಳಿಸುತ್ತೇನೆ ಎಂದು ಬಾಲಿವುಡ್ ನಟಿ ತಾಪ್ಸಿ ಪನ್ನು ಬೋಲ್ಡ್ ಆಗಿ ರಿಪ್ಲೈ ಕೊಟ್ಟಿದ್ದಾರೆ.
ಬಹುದಿನಗಳ ನಂತರ ಅಭಿಮಾನಿಗಳ ಜೊತೆಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರ ಈ ಪ್ರತಿಕ್ರಿಯೆಗೆ ಅಭಿಮಾನಿಗಳು ವಿಧವಿಧವಾಗಿ ರೀತಿಯಲ್ಲಿ ಕಾಮೆಂಟ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದ ತಾಪ್ಸಿ, ನಾನು ಮಕ್ಕಳನ್ನು ಪಡೆಯಲು ಮಾತ್ರ ಮದುವೆಯಾಗಲು ಬಯಸುವೆ. ನನಗೆ ಮದುವೆಯ ಬಂಧನ ಇಷ್ಟವಿಲ್ಲ. ಕೆಲ ದಿನಗಳವರೆಗೂ ಒಟ್ಟಿಗೆ ಇರಲು ಮಾತ್ರ ಮದುವೆ ಚೆನ್ನಾಗಿರುತ್ತದೆ. ಸಾಯುವವರೆಗೂ ಒಟ್ಟಿಗೆ ಇರುವುದು ಕಷ್ಟ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿತ್ತು.
ವೋ ಲಡ್ಕಿ ಹೈ ಕಹಾನ್, ಫಿರ್ ಆಯಿ ಹಸೀನ್ ದಿಲ್ರುಬಾ, ಜನಗಣಮನ ಹಾಗೂ ತಮಿಳಿನ ಏಲಿಯನ್ ಚಿತ್ರಗಳಲ್ಲಿ ಸದ್ಯಕ್ಕೆ ತಾಪ್ಸಿ ಪನ್ನು ಬಿಜಿಯಾಗಿದ್ದಾರೆ. ಇನ್ನು ಈ ವರ್ಷದಲ್ಲೇ ಅವರು ನಟಿಸಿರುವ ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ.




