ಬಾಬಾ ಸಾಹೇಬರ ಸಾವಿರ ಕೃತಿಗಳ ಸಂಗ್ರಹ ಮತ್ತು ಭಿತ್ತಿ ಚಿತ್ರಗಳ ಪ್ರದರ್ಶನ

3 years ago

#collection #thousand #works #BabaSaheb #exhibition #murals #Ambedkar #gangappatalavar

ಈ ಗಳಿಗೆ ಕಳೆದು ಹೋಗುವುದು – ಕುಸ್ ಕುಸ್ – ಮಕ್ಕಳ ನಾಟಕ

ಅಂಬೇಡ್ಕರ್ ಟೆಂಟ್ ಮೂವ್ಮೆಂಟ್ ಲೈಬ್ರರಿ ರೂಪಿಸಿರುವ ಅಂಬೇಡ್ಕರ್ ಪರಿನಿಬ್ಬಾಣ – ಪುನರುತ್ಥಾನ ಮತ್ತು ಪ್ರತಿರೋಧ ಕಾರ್ಯಕ್ರಮ

ಡಿಸೆಂಬರ್ – 6 ಬಾಬಾಸಾಹೇಬರ ಪರಿನಿಬ್ಬಾಣದ ದಿನ. ಈ ದಿನವನ್ನು ಭಾರತೀಯರ ನೆನಪಿನಿಂದ ಅಳಿಸಿ ಹಾಕುವ ಹುನ್ನಾರ ಲಾಗಾಯತ್ತಿನಿಂದ ನಡೆಯುತ್ತಲೇ ಬಂದಿದೆ. ಸದ್ಯದ ಈ ಹೊತ್ತಿನ ಪ್ರತಿರೋಧದ ಭಾಗವಾಗಿ ಬಾಬಾ ಸಾಹೇಬರ ಕುರಿತಾಗಿ ಇಲ್ಲಿಯವರೆಗೂ ಪ್ರಕಟಗೊಂಡಿರುವ ಸಾವಿರ ಕೃತಿಗಳ ಸಂಗ್ರಹ ಮತ್ತು ಬಾಬಾ ಸಾಹೇಬ್ ಅವರ ಭಿತ್ತಿ ಚಿತ್ರಗಳಪ್ರದರ್ಶನ ಕೈಗೆತ್ತಿಕೊಂಡಿದೆ.

ಕಳೆದ ಎರಡು ದಶಕಗಳಿಂದ ಸಾವಿರಾರು ವಿದ್ವಾಂಸರು, ಸಂಶೋಧಕರು, ಅಂಬೇಡ್ಕರ್ ಅವರ ‘ವಿಶ್ವಜ್ಞಾನ’ದ ಶೋಧದಲ್ಲಿ ತೊಡಗಿದ್ದಾರೆ. ಈ ಉತ್ಪನ್ನ ಜ್ಞಾನವನ್ನು ಉತ್ಪದನೆಯನ್ನು ಈ ಗಳಿಗೆಗೆ ಸೋಸಿ ಹಾಡೋ ಕುಣಿತವೋ, ಹೆಜ್ಜೆ ಗೆಜ್ಜೆಗೋ ಬಸಿದು ಕಟ್ಟಬೇಕಿದೆ. ಇಂದಿನ ನಮ್ಮೆಲ್ಲರ ಬಿಡುಗಡೆಯ ದಾರಿ ಬಾಬಾ ಸಾಹೇಬರಿಂದ ಮಾತ್ರ ಸಾಧ್ಯ ಎಂಬ ಇಂಗಿತಜ್ಞಾನ ನಮ್ಮ ಕಣ್ಣಾಗಬೇಕಿದೆ. ವರ್ತಮಾನದ ಇಂದಿನ ಲೋಕದ ತಲ್ಲಣಗಳಿಗೆ ಬಾಬಾ ಸಾಹೇಬರ ಚಿಂತನಧಾರೆ ಮದ್ದಾಗಬೇಕಿದೆ.

ಇಂದಿನ ಎಳೆಯ ತಲೆಮಾರಿನ ಕೈಗೆ ಫೋನ್ ಕೊಟ್ಟಿದ್ದೇವೆ. ಅದು ಫೋನ್ ಫೋಬಿಯಗೆ ತುತ್ತಾಗಿ ಈ ಗಳಿಗೆಯನ್ನೇ “ಕೋಡಗಾನ ಕೋಳಿ ನುಂಗಿತ್ತಾ” ಎಂಬ ಸಂತ ವಾಣಿಯ ಕಾರ್ಣಿಕ ನುಡಿ ಸಾಕಾರಗೊಳ್ಳುತ್ತಿದೆ. ಎಳೆಯರ ಸುಪ್ತಪ್ರಜ್ಞೆಯನ್ನು ಸಾಣೆಗೊಳಿಸಿ ಫೋನಿಗಿಂತ ಅಕ್ಷರ, ಪುಸ್ತಕವ ಹಿಡಿಯನ್ನ ಹಿಡಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ನಮ್ಮೆಲ್ಲರ ಆದ್ಯತೆಯ ಭಾಗವಾಗಿ ನಿಜದ ಅಂಬೇಡ್ಕರ್ ದಿನವನ್ನಾಗಿಸಲು ಕೋಲಾರದ ಪ|ಜಾ|ಪ|ಪಂ| ಕೆಇಬಿ ನೌಕರರ ಬೆವರ ನಿಧಿಯಿಂದ ಇದೇ ಕುಟುಂಬದ ಮಕ್ಕಳಿಂದ ಕೋಟಿಗಾನಹಳ್ಳಿ ರಾಮಣ್ಣ ಅವರು ಕುಸ್ ಕುಸ್ ದಿಲ್ ಖುಷ್ ಮಕ್ಕಳಿಗಾಗಿ ನೇಯ್ದ ನಾಟಕವಿದು. ಕೇವಲ ಹತ್ತೇ ದಿನದಲ್ಲಿ ರೂಪಗೊಂಡ ನಾಟಕವಿದು. ನಿರ್ದೇಶನ ನಾಡಿನ ಖ್ಯಾತ ರಂಗ ನಿರ್ದೇಶಕರು, ರಂಗಕರ್ಮಿ ಇಕ್ಬಾಲ್ ಅವರದ್ದು. ಸಹ ನಿರ್ದೇಶನ ದುರ್ಗಾ, ಸಂಗೀತ – ನಾರಾಯಣಸ್ವಾಮಿ ಟಿ. ಗೊಲ್ಲಹಳ್ಳಿ, ಡಿಸೆಂಬರ್- 6 ದಿನವಿಡೀ ಕಾರ್ಯಕ್ರಮ ಇರುತ್ತೆ- ಕೋಲಾರ ಚನ್ನಯ್ಯ ರಂಗಮಂದಿರ.

ದಯಮಾಡಿ ಬನ್ನಿ, ನಿಮ್ಮ ಮಕ್ಕಳನ್ನು ಕರೆತನ್ನಿ.

ಕವಿಗೋಷ್ಠಿ, ಅಂಬೇಡ್ಕರ್ ಅವರ ಬಿತ್ತಿ ಚಿತ್ರಗಳ ಪ್ರದರ್ಶನ, ಅಂಬೇಡ್ಕರ್ ಟೆಂಟ್ ಲೈಬ್ರರಿ ಮೂವ್ಮೆಂಟ್ ಅಡಿಯಲ್ಲಿ ಬಾಬಾ ಸಾಹೇಬರ ಕುರಿತ ಸಾವಿರ ಕೃತಿಗಳ ಪ್ರದರ್ಶನ. ಸಂಜೆಗೆ ಎರಡು ನಾಟಕಗಳು – ಕಿಸ ಗೌತಮಿ – ನಾಟಕ ಪ್ರಸ್ತುತಿ -ಮಂಡ್ಯ.

  • ಗಂಗಪ್ಪ ತಳವಾರ್, ಕವಿಗಳು

Leave a Reply