ವೈದ್ಯ ವೃತ್ತಿಯಲ್ಲಿದ್ದರೂ ಲೇಖಕಿ, ಪ್ರಗತಿಪರ, ಮಹಿಳಾಪರ ಚಳುವಳಿಯ ಭಾಗವಾಗಿ ಕೆಲಸ ಮಾಡುತ್ತಲೇ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದವರು ಡಾ.ಎಚ್.ಎಸ್.ಅನುಪಮಾ. 1970 ಫೆಬ್ರವರಿ 06ರಂದು ಇವರು ಜನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಇವರು ಕರ್ತವ್ಯನಿರತರಾಗಿದ್ದಾರೆ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ಇವರ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಮಾಬಾಯಿ ಅಂಬೇಡ್ಕರ್ ಪುಸ್ತಕ ಬಹುಮಾನ, ಸಕಾಲಿಕ ಸಾಹಿತ್ಯ ಪ್ರಶಸ್ತಿ, ಎಚ್. ಶಾಂತಾರಾಂ ಪ್ರಶಸ್ತಿ, ಕುಂದಾಪುರ, ದೆಹಲಿ ಕರ್ನಾಟಕ ಸಂಘ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪ್ರಶಸ್ತಿ, ಐಎಂಎ ಕನ್ನಡ ವೈದ್ಯ ಬರಹಗಾರರ ಸಂಘದ ಪ್ರಶಸ್ತಿ, ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
2025ರವರೆಗೆ ಫೆಬ್ರವರಿ 6ರವರೆಗೆ ಅವರ ಐವತ್ತೊಂಬತ್ತು ಕೃತಿಗಳು ಪ್ರಕಟವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾಭಾರತಿ, ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ, ದೇಶಿ, ಅಭಿರುಚಿ, ರೂಪ ಪ್ರಕಾಶನ (ಅಂಬಾರಿ), ವಿಶ್ವಾಸ, ನವಕರ್ನಾಟಕ, ರಾಘವೇಂದ್ರ ಪ್ರಕಾಶನ, ಕ್ರಿಯಾ ಪ್ರಕಾಶನ, ಕವಿ ಪ್ರಕಾಶನ ಮತ್ತು ಲಡಾಯಿ ಪ್ರಕಾಶನಗಳು ಅವರ ಪುಸ್ತಕಗಳನ್ನು ಪ್ರಕಟಿಸಿರುವುದು ವಿಶೇಷ.
ಡಾ. ಎಚ್. ಎಸ್. ಅನುಪಮಾ ಅವರ ಕೃತಿಗಳು:
- ಕಾಡುಹಕ್ಕಿಯ ಹಾಡು – ಕವನ ಸಂಕಲನ (2008,2024)
- ಸಹಗಮನ (ಕವನ ಸಂಕಲನ) (2015, 2022)
- ಬುದ್ಧ ಚರಿತೆ (ಖಂಡ ಕಾವ್ಯ) (2016, 2020)
- ನೆಗೆವ ಪಾದದ ಜಿಗಿತ – ಕವನ ಸಂಕಲನ
- ಸಬರಮತಿ – ನೀಳ್ಗವಿತೆ
- ಹೂವರಳಿದ್ದಕ್ಕೆ ಯಾಕೆ ಸಾಕ್ಷಿ? – ಕಥಾ ಸಂಕಲನ (2009, 2020)
- ಚಿವುಟಿದಷ್ಟೂ ಚಿಗುರು – ಕಥಾ ಸಂಕಲನ (2015, 2022)
- ಬಾನಿನಲ್ಲಿ ಮಹಿಳೆ: ಸುನಿತಾ ವಿಲಿಯಮ್ಸ್ – ಬಾಹ್ಯಾಕಾಶ ವಿಜ್ಞಾನ ಹಾಗೂ ಸುನಿತಾ ವಿಲಿಯಮ್ಸ್ ಜೀವನ ಚರಿತ್ರೆ (2011, 2013,)
- ಛತ್ರಪತಿ ಶಾಹೂ: ಜನರ ನೋವಿಗೆ ಮಿಡಿದ ಪ್ರಾಣಮಿತ್ರ (ಜೀವನ ಚರಿತ್ರೆ) (2014, 2021)
- ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ – ಜೀವನ ಚರಿತ್ರೆ (2015, 2016, 2017(2), 2018, 2019, 2020 (2), 2021 (2)), 2022(2), 2023, 2025
- ದಲಿತಪ್ರಜ್ಞೆಯ ದನಿ ಜೋತಿಬಾ – ಜೀವನಚರಿತ್ರೆ – (2016, 2021, 2023, 2024)
- ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ ( 2017, 2018, 2019, 2020, 2021, 2022)
- ವಿಮೋಚಕನ ಹೆಜ್ಜೆಗಳು – ಡಾ. ಬಿ. ಆರ್. ಅಂಬೇಡ್ಕರ್ ಜೀವನ ಚರಿತ್ರೆ (2018, 2020, 2021, 2025)
- ನಾನು ಕಸ್ತೂರ್ – ಕಸ್ತೂರಬಾ ಜೀವನ ಕಥನ (2019, 2020)
- ಜೀವಕೋಶ: ವೈದ್ಯಲೋಕದ ಕಥನ (2011, 2013, 2015, 2017)
- ಮಹಿಳಾ ಆರೋಗ್ಯ – ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ. (2013)
- ಮಹಿಳೆ, ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯ (2020)
- ಮುಟ್ಟು – ವಿಜ್ಞಾನ, ಸಂಸ್ಕೃತಿ ಮತ್ತು ಅನುಭವ (202)
- ನೈಲ್ ನದಿಯಗುಂಟ ಶರಾವತಿಯನರಸುತ್ತ – ಈಜಿಪ್ಟ್ ಪ್ರವಾಸ ಕಥನ (2012, 2017)
- ಅಂಡಮಾನ್: ಕಂಡ ಹಾಗೆ (ಪ್ರವಾಸ ಕಥನ) (2014, 2017)
- ಚೆಗೆವಾರನ ನೆಲದಲ್ಲಿ (ದಕ್ಷಿಣ ಅಮೆರಿಕಾ ಪ್ರವಾಸ ಕಥನ) (2017, 2023)
- ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ (ಲೇಖನ ಸಂಗ್ರಹ) (2013, 2017)
- ಹೆಣ್ಣು: ಸಂಕರ ಕಾಲದ ಆತ್ಮಪ್ರಜ್ಞೆ (ಲೇಖನ ಸಂಗ್ರಹ) (2014, 2018)
- ಮುಳ್ಳಮೇಲಿನ ಸೆರಗು (ಅತ್ಯಾಚಾರ ಮತ್ತು ಕಾನೂನು) (2015)
- ನೋಯುವ ಹಲ್ಲಿಗೆ ಹೊರಳುವ ನಾಲಿಗೆ: ಅಂಕಣ ಬರಹ (2015)
- ಬುದ್ಧ ಬೆಳಕಿನಲ್ಲಿ ಅಂಬೇಡ್ಕರ್ ಭಾರತ: ಲೇಖನ ಸಂಗ್ರಹ (2018, 2021, 2023)
- ಸಂವಿಧಾನ ಮತ್ತು ಮಹಿಳೆ (2019, 2021,2022, 2024)
- ಹೆಣ್ಣು ಹೆಜ್ಜೆ (ಮಹಿಳಾ ಮಾದರಿ ಮತ್ತು ಮಾರ್ಗ) (2020)
29 ಉರಿಯ ಪದವು: ಮರಾಠಿ ಕವಿ ನಾಮದೇವ್ ಢಸಾಳ್ ಕವನಗಳ ಅನುವಾದ (2013) - ಮರಗುದುರೆ: ತೆಲುಗು ಕವಿ ನಗ್ನಮುನಿ ಮಾತು-ಕವಿತೆ ಅನುವಾದ (2013)
- ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು: ಡಾ. ಆನಂದ್ ತೇಲ್ತುಂಬ್ಡೆ – ಅನುವಾದ (2013, 2021)
- ಮೋಟಾರ್ ಸೈಕಲ್ ಡೈರೀಸ್: ಚೆಗೆವಾರ (ಅನುವಾದ) (2014, 2017, 2019, 2022)
- ಭಗತ್ ಸಿಂಗ್ ಜೈಲ್ ಡೈರಿ – (ಅನು) ಮೂಲ ಇಂಗ್ಲಿಷ್: ಚಮನ್ ಲಾಲ್ (2015, 2020, 2023)
- ತಾಳೆ ಗರಿ (ಬಾಮಾ ಅವರ ತಮಿಳು ಆತ್ಮಕತೆ ಕರುಕ್ಕು ಕನ್ನಡಾನುವಾದ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ) – (೨೦೧೬)
- ಉರಿವ ಕುಡಿಯ ನಟ್ಟ ನಡುವೆ – ಜಲಾಲುದ್ದೀನ್ ರೂಮಿ ಕವಿತೆಗಳ ಅನುವಾದ – (2016, 2021)
- ಕರಿ ಕಣಗಿಲ – ಅನುವಾದಿತ ತೆಲುಗು ದಲಿತ ಕಾವ್ಯ ಸಂಗ್ರಹ (2017) (ಮೂಲ ಕೆ. ಪುರುಷೋತ್ತಮ್)
- ಆ ಹದಿಮೂರು ವರುಷಗಳು: ನಕ್ಸಲೈಟನ ಜೈಲು ಆತ್ಮಕಥನ, ಹಿಂದಿ ಮೂಲ: ರಾಮಚಂದ್ರ ಸಿಂಗ್, ಇಂಗ್ಲಿಷ್‌ಗೆ: ಮಧು ಸಿಂಗ್ (2018)
- ಮಣಿ ಸರ – ಗಡಿ ದಾಟಿದ ಕವಿತೆಗಳು (ಸಂಪಾದಿತ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ) (2015)
- ಕಸಿ ಮಾವು – ಅನುವಾದಿತ ಕತೆಗಳು (ಸಂಪಾದಿತ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ) (೨೦೧೫)
- ಪ್ರತಿ ಬಿಂಬ – ಪತ್ರಿಕಾ ಬರಹಗಳ ಸಂಕಲನ – 2014 (ಸಂಪಾದಿತ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ) (೨೦೧೫)
- ನಡೆಯೋಣ, ಕೇಳುತ್ತಾ.. (ಸಂಪಾದಿತ, ಪರ್ಯಾಯ ಚಿಂತನೆಗಳ ಅನುವಾದಿತ ಲೇಖನ ಸಂಗ್ರಹ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ) (2015)
- ಕಾವ್ಯ ಬೋಧಿ – ಮಹಿಳಾ ಕಾವ್ಯ 2014 (ಸಂ, (2015)
- ಮಿಡತೆಗಳಿಗೆ ಕಿವಿಯೊಡ್ಡಿ – ಅರುಂಧತಿ ರಾಯ್ ಅನುವಾದಿತ ಲೇಖನ ಸಂಗ್ರಹ – ಸಂಪಾದನೆ (2016)
- ಅಸಮಾನ ಭಾರತ – ಜಾತಿ ಜನಗಣತಿ ಕುರಿತ ಬರಹಗಳ ಸಹ ಸಂಪಾದನೆ (2010)
- ಭೀಮಯಾನ – ಅಂಬೇಡ್ಕರ್ ಬರಹಗಳ ಅನುವಾದ, ಸಂಪಾದನೆ (ಬಸೂ ಅವರೊಡನೆ) (2012, 2016, 2020,2024, 2015)
- ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ – (ಬಸೂ ಅವರೊಡನೆ) (2011, 2021)
- ದಲಿತರು: ಭೂತ-ಭವಿಷ್ಯ, ಡಾ. ಆನಂದ್ ತೇಲ್ತುಂಬ್ಡೆ ಬರಹಗಳು, ಅನುವಾದ ಮತ್ತು ಸಂಪಾದನೆ (ಬಸೂ ಅವರೊಡನೆ) (2013, 2016)
- ಅಭಿವ್ಯಕ್ತಿ ಸ್ವಾತಂತ್ರ್ಯ: ವಿವಿಧ ಆಯಾಮಗಳು. (ಬಸೂ ಅವರೊಡನೆ) (2013, 2016)
- ಸಬಾಲ್ಟನ್ ಸಂಪುಟ – ಹೆಣ್ಣು ನೋಟಕ್ರಮ (ಸಾಹಿತ್ಯ ಅಕಾಡೆಮಿಗಾಗಿ ಸಬಿತಾ ಬನ್ನಾಡಿ ಅವರೊಡನೆ) (2016)
- ನಿರಹಂ: ಸೂಫಿ ದರ್ಶನ-ಕಾವ್ಯ (ಬಿ. ಪೀರ್ ಭಾಷಾ ಅವರೊಂದಿಗೆ) (2021)
- ಜನಸಂಗಾತಿ ಭಗತ್ (2021)
- ಕೋವಿಡ್: ಡಾಕ್ಟರ್ ಡೈರಿ (2021)
- ಒಡನಾಡಿ ಸಬಿಹಾ -ಸಂ: (ಡಾ. ಸರಸ್ವತಿ, ಆರ್ ಸುನಂದಮ್ಮ, ಓಂಕಾರ ಕಾಕಡೆ ಅವರೊಂದಿಗೆ)
- ಬೆಳಗಿನೊಳಗು ಮಹಾದೇವಿಯಕ್ಕ (2022 (2) )
- ಗಡಿ ದಾಟಿದ ಹೆಣ್ಣುಗಳ ಕಥನ (2023)
- ಜನಸೇವಾಸಕ್ತೆ ಯಶೋಧರ ದಾಸಪ್ಪ (2023)
- ಪ್ಲಾಸ್ಟಿಕ್ ಪರಿಸರ: ಪರ್ಯಾಯ ಪ್ರಯೋಗ (2023)
- ಗೀತಾಂಜಲಿಯ ಕವಿತೆಗಳು ಅನುವಾದ (2024)
- ಕಾಮ್ರೇಡ್ ಆಗಿ ನನ್ನ ಬದುಕು: ಅನುವಾದ (2024)



