ಕೀರ್ತಿನಾಥ ಕುರ್ತಕೋಟಿ (13.10.1928 – 31.07.2003)
ಕೀರ್ತಿನಾಥ ಕುರ್ತಕೋಟಿಯವರು ಕನ್ನಡದ ಮಹತ್ವದ ಲೇಖಕ. ನಾಟಕ, ಕಾವ್ಯ, ವಿಮರ್ಶೆ, ಸಂಪಾದನೆ ಕ್ಷೇತ್ರದಲ್ಲಿ ಅಪಾರ ವಿದ್ವತ್ ಪೂರ್ಣ ಕೆಲಸವನ್ನು ಅವರು ಮಾಡಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಜೀವನ ವಿವರ:
ಜನನ: 13.10.2928 ಮರಣ: 31.07.2003
ತಂದೆ ತಾಯಿ: ದತ್ತಾತ್ರೇಯಗೌಡ, ಪದ್ಮಾದೇವಿ
ಪ್ರಾಥಮಿಕ ವಿದ್ಯಾಭ್ಯಾಸ: ಗದಗಿನಲ್ಲಿ
ಮಾಧ್ಯಮಿಕ ವಿದ್ಯಾಭ್ಯಾಸ: ಗದಗ ಮುನ್ಸಿಪಲ್ ಹೈಸ್ಕೂಲಿನಿಂದ ಮ್ಯಾಟ್ರಿಕ್ – 1946
ಬಿ.ಎ.,: ಕರ್ನಾಟಕ ಕಾಲೇಜಿನಿಂದ, ಇಂಗ್ಲಿಷ್ ಮುಖ್ಯ ವಿಷಯ, ಸಂಸ್ಕೃತ ಉಪ ವಿಷಯ, 1950
ಹೈಸ್ಕೂಲ್ ಶಿಕ್ಷಕ: ಗದಗ ವಿದ್ಯಾದಾನ ಸಮಿತಿ ಹೈಸ್ಕೂಲಿನಲ್ಲಿ, 1950-1955
ಮದುವೆ: ಸರಸ್ವತಿ ಅವರೊಂದಿಗೆ, 1950
ಟ್ಯೂಟರ್: ಬೆಳಗಾವಿಯ ಆರ್.ಪಿ.ಡಿ. ಕಾಲೇಜಿನಲ್ಲಿ, 1950-1956
ಇಂಗ್ಲಿಷ್ ಉಪನ್ಯಾಸಕ: ಪುಣೆಯ ಪರಶುರಾಮ ಭಾವೂ ಕಾಲೇಜಿನಲ್ಲಿ, 1958
ಇಂಗ್ಲಿಷ್ ಉಪನ್ಯಾಸಕ: ಗುಜರಾತಿನ ವಿದ್ಯಾನಗರದ ವಿಠಲಭಾಯಿ ಪಟೇಲ ಕಾಲೇಜಿನಲ್ಲಿ, 1958-1967
ಇಂಗ್ಲಿಷ್ ಉಪನ್ಯಾಸಕ, ರೀಡರ್, ಪ್ರೊಫೆಸರ್: ವಲ್ಲಭ ವಿದ್ಯಾನಗರದ ಸರ್ದಾರ್ ಪಟೇಲ ವಿಶ್ವವಿದ್ಯಾಲಯದಲ್ಲಿ, 1967 – 1988
ವಿಭಾಗದ ಮುಖ್ಯಸ್ಥ: 1984-1988
ಮಕ್ಕಳು: ಕೃಷ್ಣ, ರಾಮ, ಶಚಿ
ಪಿಎಚ್.ಡಿ. ಮಾರ್ಗದರ್ಶನ : 12 ಜನರಿಗೆ
ಮನೋಹರ ಗ್ರಂಥಮಾಲೆಯ ಸಾಹಿತ್ಯ ಸಲಹೆಗಾರ: 1956 – 2003
ಮರಣ : 31.07.2003, ಧಾರವಾಡದಲ್ಲಿ,
ಪ್ರಶಸ್ತಿಗಳು:
1. “ಆ ಮನಿ” ನಾಟಕಕ್ಕೆ ಮುಂಬಯಿ ಸರಕಾರದ ಮೊದಲ ಬಹುಮಾನ, 1956
2. “ಸ್ವಪ್ನದರ್ಶಿ ಮತ್ತು ಇತರ ನಾಟಕಗಳು” ಕೃತಿಗೆ ಮುಂಬಯಿ ಸರಕಾರದ ದ್ವಿತೀಯ ಬಹುಮಾನ, 1956
3. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 1972
4. ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಷಿಪ್, 1990
5. ”ಮರಾಟೀ ಸಂಸ್ಕೃತಿ – ಕೆಲವು ಸಮಸ್ಯೆಗಳು” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನ, 1993
6. ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಫೆಲೋಷಿಪ್, 994-1996
7. “ಉರಿಯ ನಾಲಗೆ”ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ,1995
8. ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ ಪ್ರಶಸ್ತಿ, 2004
ಕೃತಿಗಳು
ನಾಟಕಗಳು:
1. ಸ್ವಪ್ನದರ್ಶಿ ಮತ್ತು ಇತರ ಗೀತನಾಟಕಗಳು, ಮನೋಹರ ಗ್ರಂಥಮಾಲೆ, ಧಾರವಾಡ, 1956
2. ಆ ಮನಿ, ಮನೋಹರ ಗ್ರಂಥಮಾಲೆ, ಧಾರವಾಡ, 1956
3. ಚಂದ್ರಗುಪ್ತ, ಮನೋಹರ ಗ್ರಂಥಮಾಲೆ, ಧಾರವಾಡ, 1982
4. ಸ್ವಪ್ನವಾಸವದತ್ತೆ, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಧಾರವಾಡ
ಕಾವ್ಯ:
5. ಗಾನಕೇಳಿ (ಇತರರೊಂದಿಗೆ), ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, 1984
6. ನಾವು ಬರಿಗೈಯವರು, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಧಾರವಾಡ, 2005
ಕಾದಂಬರಿ:
7. ಅರ್ಥಾಂತರ (ಅಪೂರ್ಣ), ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಧಾರವಾಡ, 2007
ವಿಮರ್ಶೆ:
8. ಬೇಂದ್ರೆ ಹಾಗೂ ಕನ್ನಡ ಕಾವ್ಯದ ಸ್ವರೂಪ, ಕನ್ನಡ ಸಾಹಿತ್ಯ ಸಂಘ, ಕಲಬುರ್ಗಿ, 1961
9. ಯುಗಧರ್ಮ ಹಾಗೂ ಸಾಹಿತ್ಯದರ್ಶನ, ಮನೋಹರ ಗ್ರಂಥಮಾಲೆ, ಧಾರವಾಡ, 1962
10. ನವ್ಯ-ಕಾವ್ಯ-ಪ್ರಯೋಗ, ಮನೋಹರ ಗ್ರಂಥಮಾಲೆ, ಧಾರವಾಡ, 1963 (‘ಮನ್ವಂತರ’-2ರಲ್ಲಿ)
11. ಭೃಂಗದ ಬೆನ್ನೇರಿ, ಮನೋಹರ ಗ್ರಂಥಮಾಲೆ, ಧಾರವಾಡ, 1975
12. ಅಸಂಗತ ನಾಟಕಗಳು, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, 1977
13. ಶ್ರೀರಾಮಾಯಣ ದರ್ಶನಂ, ಸಿರಿಗನ್ನಡ ಪ್ರಕಾಶನ, ತುಮಕೂರು ಮತ್ತು ಕಲಾ ಪ್ರಕಾಶನ, ಬೆಂಗಳೂರು (ವರ್ಷ ನಮೂದಿಸಿಲ್ಲ)
14. ಯಶೋಧರ ಚರಿತೆಯ ಕಾವ್ಯತಂತ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, 1982
15. ವಿಮರ್ಶೆಯ ವಿನಯ: ಕಾದಂಬರಿ, ಮನೋಹರ ಗ್ರಂಥಮಾಲೆ, ಧಾರವಾಡ,1982
16. ಬೇಂದ್ರೆಯವರ ಕಾವ್ಯದಲ್ಲಿ ಶ್ರುತಿ ಮತ್ತು ಕೃತಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, 1984
17. ವಿಮರ್ಶೆಯ ವಿನಯ: ನಾಟಕ, ಮನೋಹರ ಗ್ರಂಥಮಾಲೆ, ಧಾರವಾಡ, 1985
18. ದ.ರಾ.ಬೇಂದ್ರೆ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, 1987
19. ಕುಮಾರವ್ಯಾಸ, ಸಾಹಿತ್ಯ ಅಕಾಡೆಮಿ, ನವದೆಹಲಿ, 1990
20. ಸಾಹಿತ್ಯ ಮತ್ತು ಸಾಹಿತ್ಯಪ್ರಜ್ಞೆ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, 1990
21. ಬಯಲು-ಆಲಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1992
22. ಬಾರೋ ಸಾಧನಕೇರಿಗೆ, ಮನೋಹರ ಗ್ರಂಥಮಾಲೆ, ಧಾರವಾಡ, 1993
23. ಕನ್ನಡ ಸಾಹಿತ್ಯ ಸಂಗಾತಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1995
24. ಚನ್ನವೀರ ಕಣವಿ : ಬದುಕು ಮತ್ತು ಬರಹ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 1996
25. ನೂರು ಮರ ನೂರು ಸ್ವರ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1997
26. ಪ್ರತ್ಯಭಿಜ್ಞಾನ, ಮನೋಹರ ಗ್ರಂಥಮಾಲೆ, ಧಾರವಾಡ, 1998 (ಪರಿಷ್ಕೃತ ಆವೃತ್ತಿ: 2000).
27. ರೊಮ್ಯಾಂಟಿಸಿಜಮ್, ಕರ್ನಾಟಕ ಸಾಹಿತ್ಯ ಅಕಾಡೆಮಿ, 2011.
28. ಅಧ್ಯಯನ ಮತ್ತು ಪಾರಾಯಣ, ಮನೋಹರ ಗ್ರಂಥಮಾಲೆ. ಧಾರವಾಡ, 2003
29. D.R. Bendre – The Poet and His Poetry”, ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ, 2007
30. ಕುಮಾರವ್ಯಾಸಭಾರತ : ಕಥೆ ಮತ್ತು ಕಾವ್ಯ, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಧಾರವಾಡ, 2010
ಅಂಕಣಗಳು:
31. ಸಂಸ್ಕೃತಿ ಸ್ಪಂದನ, ಮನೋಹರ ಗ್ರಂಥಮಾಲೆ, ಧಾರವಾಡ, 1986
32. ಉರಿಯ ನಾಲಗೆ, ಮನೋಹರ ಗ್ರಂಥಮಾಲೆ, ಧಾರವಾಡ, 1986
33. ರಾಜಸ್ಪರ್ಶ, ಮನೋಹರ ಗ್ರಂಥಮಾಲೆ, ಧಾರವಾಡ, 1996
34. ಪಂಡಿತರ ತಪ್ಪು, ಮನೋಹರ ಗ್ರಂಥಮಾಲೆ, ಧಾರವಾಡ, 2001
35. ರಾಜಕೀಯ ಮತ್ತು ಧರ್ಮ, ಮನೋಹರ ಗ್ರಂಥಮಾಲೆ, ಧಾರವಾಡ, 2003
36. ಭಾಷೆ ಮತ್ತು ಸಂಸ್ಕೃತಿ, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್,
ಅನುವಾದ:
37. ಜೀವಫಲ (ಮೂಲ ಇಂಗ್ಲಿಷ್: ಜಡಭರತ), ಮನೋಹರ ಗ್ರಂಥಮಾಲೆ, ಧಾರವಾಡ, 1957
38. ತತ್ವಬೋಧಾಮೃತಸಾರ (ಮೂಲ ಇಂಗ್ಲಿಷ್: ಲಕ್ಕುಂಡಿ ಯೋಗಿರಾಜ ಮಹಾರಾಜ), ಯೋಗಿರಾಜ ಭಕ್ತಮಂಡಳಿ, ಲಕ್ಕುಂಡಿ, 1969
39. ‘ಮರಾಟೀ ಸಂಸ್ಕೃತಿ – ಕೆಲವು ಸಮಸ್ಯೆಗಳು” (ಮೂಲ ಮರಾಠಿ: ಶಂ.ಬಾ. ಜೋಶಿ), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1990
40. ಆಧುನಿಕ ಜಗತ್ತಿಗೆ ಒಂದು ಹಳೆಯ ಕತೆ” (ಮೂಲ ಇಂಗ್ಲಿಷ್: ಬದ್ರಿನಾರಾಯಣ), ಜಡಭರತ ಪ್ರಕಾಶನ, ಧಾರವಾಡ, 2002
ಸಂಪಾದನೆ:
41. ನಡೆದು ಬಂದ ದಾರಿ (ಜಿ.ಬಿ. ಜೋಶಿ ಅವರೊಂದಿಗೆ, ೩ ಸಂಪುಟಗಳು), ಮನೋಹರ ಗ್ರಂಥಮಾಲೆ, ಧಾರವಾಡ, 1959-61
42. ವಿನಾಯಕ (ಜಿ.ಬಿ.ಜೋಶಿ ಅವರೊಂದಿಗೆ), ಮನೋಹರ ಗ್ರಂಥಮಾಲೆ, ಧಾರವಾಡ, 1958
43. ವಾಸುದೇವ ಪ್ರಶಸ್ತಿ(ಜಿ.ಬಿ.ಜೋಶಿ ಅವರೊಂದಿಗೆ), ವಾಸುದೇವ ವಿನೋದಿನಿ ನಾಟ್ಯಸಭೆ, ಬಾಗಲಕೋಟೆ, 1965
44. ಸಂಗ್ಯಾ-ಬಾಳ್ಯಾ (ಚಂದ್ರಶೇಖರ ಕಂಬಾರರೊಂದಿಗೆ), ಮನೋಹರ ಗ್ರಂಥಮಾಲೆ. ಧಾರವಾಡ, 1966
45. ವಿಶ್ವವ್ಯಾಪಿ ಗಣೇಶ, ವಿಶ್ವವ್ಯಾಪಿ ಗಣೇಶ ಪ್ರಕಾಶನ, ಸಾಗರ, 1975
46. ಪುಟ-ಬಂಗಾರ (ಜಿ.ಬಿ.ಜೋಶಿ ಅವರೊಂದಿಗೆ, ೫ ಸಂಪುಟಗಳು), ಮನೋಹರ ಗ್ರಂಥಮಾಲೆ, ಧಾರವಾಡ, 1983-87
47. The Tradition of Kannada Drama, ಐಬಿಎಚ್ ಪ್ರಕಾಶನ , ಬೆಂಗಳೂರು (ಕರ್ನಾಟಕ ನಾಟಕ ಅಕಾಡೆಮಿ ಪರವಾಗಿ) 1986
48. ಹೆಜ್ಜೇ”, ಜಿ.ಬಿ.ಸಜ್ಜನ ಅಭಿನಂದನ ಸಮಿತಿ, ವಿಜಾಪುರ – ಧಾರವಾಡ, 2002
49. ಮನ್ವಂತರ (ಅನಿಯತಕಾಲಿಕ, ಜಿ.ಬಿ.ಜೋಶಿ ಅವರೊಂದಿಗೆ, 10 ಸಂಚಿಕೆಗಳು), ಮನೋಹರ ಗ್ರಂಥಮಾಲೆ, 1962-75




